September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿ

ನದಿಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಅಸಹಜವಾಗಿ ಸಾವು

ಮುಂಡಾಜೆ: ನದಿಗೆ ಬಲೆಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರ ಮೃತದೇಹ ಸ್ಥಳೀಯ ತೋಟವೊಂದರಲ್ಲಿ ಪತ್ತೆಯಾದ ಘಟನೆ ಆ.21ರಂದು ಮುಂಡಾಜೆಯಲ್ಲಿ ನಡೆದಿದೆ.ಮುಂಡಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಚೆನ್ನಿಗುಡ್ಡೆ ನಿವಾಸಿ ಪೂವಪ್ಪ ನಾಯ್ಕ(7೦ವ) ಅಸಹಜವಾಗಿ ಮೃತಪಟ್ಟವರಾಗಿದ್ದಾರೆ.

ಈ ಬಗ್ಗೆ ಮೃತರ ಪುತ್ರ ದಿನೇಶ್ ನಾಯ್ಕ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ನನ್ನ ತಂದೆ ಪೂವಪ್ಪ ನಾಯ್ಕ ಅವರು ಆ.21 ರಂದು ಮಧ್ಯಾಹ್ನ 3 ಗಂಟೆಗೆ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸೇತುವೆಯ ಮೃತ್ಯುಂಜಯ ನದಿಗೆ ಮೀನು ಹಿಡಿಯಲೆಂದು ಬಲೆ ಹಿಡಿದುಕೊಂಡು ಹೋಗಿ ನದಿಯ ಸೇತುವೆ ಅಡಿಯಲ್ಲಿ ಬಲೆ ಹಾಕಿ ನನ್ನನ್ನು ಅಲ್ಲೇ ನಿಲ್ಲಿಸಿ, ಬೇರೆ ಸ್ಥಳದಲ್ಲಿ ಬಲೆ ಹಾಕಿ ಮೀನು ಹಿಡಿದುಕೊಂಡು ಸಂಜೆ 6.30 ಕ್ಕೆ ಬಂದವರು, ಡ್ಯಾಂ ಬಳಿ ಹಾಕಿದ ಬಲೆ ತೆಗೆಯಯಲೆಂದು ವಾಪಾಸ್ಸು ಹೋದವರು ರಾತ್ರಿ 7.30 ತನಕವೂ ಹಿಂತಿರುಗಿ ಬಾರದೇ ಇದ್ದುದರಿಂದ, ಕೂಗಿ ಕರೆದರೂ ಯಾವುದೇ ಉತ್ತರ ಬಾರದೇ ಇದ್ದು, ಈ ವಿಚಾರವನ್ನು ಮನೆಯವರಿಗೆ ,ನೆರೆಕರೆಯವರಿಗೆ ಹಾಗೂ ಸಂಬಂದಿಕರಿಗೆ ತಿಳಿಸಿ, ಹುಡುಕಾಡಿದಾಗ ರಾತ್ರಿ ತಂದೆ ಪೂವಪ್ಪ ನಾಯ್ಕರು ನದಿ ಬದಿಯಲ್ಲಿರುವ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿ ಸಂಜೀವ ಶೆಟ್ಟಿಯವರ ಅಡಿಕೆ ತೋಟದಲ್ಲಿ ಬಿದ್ದುಕೊಂಡಿದ್ದವರನ್ನು ಉಪಚರಿಸಿ ನೋಡಿದಾಗ ಬಾಯಲ್ಲಿ ನೊರೆ ಬಂದಿದ್ದು, ಮೃತ ಪಟ್ಟಿರುವುದು ಕಂಡು ಬಂದಿರುತ್ತದೆ ಎಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ಆರಂಬೋಡಿ: ಅಲ್ ಗೌಸಿಯ ಯಂಗ್ ಮೆನ್ಸ್ ಅಸೋಸಿಯೇಷನ್ ಅಂಗರಕರಿಯ ವತಿಯಿಂದ ಉಚಿತ ಸಾಮೂಹಿಕ ಮಕ್ಕಳ ಸುನ್ನತ್ (ಮುಂಜಿ) ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಪುತ್ತೂರು ಶಾಸಕ ಅಶೋಕ್ ರೈ ಗೆ ಆಮಂತ್ರಣ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟ: ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಹಲವು ರ್‍ಯಾಂಕ್ ಗಳು

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಶಿಶಿಲ ಅಡ್ಡಹಳ್ಳ ಫ್ರೆಂಡ್ಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ದೋಸೆ ಹಬ್ಬ ಹಾಗೂ ಪುರುಷರ ಹಗ್ಗಜಗ್ಗಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗಂಡಿಬಾಗಿಲು ಧರ್ಮೋಪದೇಶ ಶಾಲೆಯ ಮುಖ್ಯೋಪಾಧ್ಯಾಯ ಶಿಜು ಸಿ.ವಿ. ಗೆ ಸನ್ಮಾನ ಮತ್ತು ಬೀಳ್ಕೊಡುಗೆ

Suddi Udaya
error: Content is protected !!