September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆನಕ ಆಸ್ಪತ್ರೆಯಲ್ಲಿ ‘ಡಿ ‘ಲೆವೆಲ್‌ ಐಸಿಯು ಸೌಲಭ್ಯ ಮತ್ತು ಸಂಪೂರ್ಣ ಶೈತ್ಯಾಗಾರವಿರುವ ಆಂಬುಲೆನ್ಸ್‌ ಲೋಕಾರ್ಪಣೆ

ಬೆಳ್ತಂಗಡಿ: ಉಜಿರೆಯ NABH ಪುರಸ್ಕೃತ ಬೆನಕ ಆಸ್ಪತ್ರೆಯಲ್ಲಿ ‘ಡಿ ‘ಲೆವೆಲ್ ಐ ಸಿ ಯು ಸೌಲಭ್ಯವುಳ್ಳ ನವೀನ ಅಂಬ್ಯುಲನ್ಸನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಮತ್ತು ಡಾ. ಭಾರತಿ ದಂಪತಿಗಳು ಗಣಪತಿ ವಿಗ್ರಹಕ್ಕೆ ಪುಷ್ಪ ಮಾಲೆಯನ್ನು ಅರ್ಪಿಸುವ ಮೂಲಕ ಲೋಕಾರ್ಪಣೆ ಮಾಡಿದರು. ಇದು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ವೆಂಟಿಲೇಟರ್ ಸಹಿತ ಐ ಸಿ ಯು ನಲ್ಲಿರುವ ಎಲ್ಲ ಸೌಲಭ್ಯಗಳನ್ನು ಹೊಂದಿರುತ್ತದೆ. ಮತ್ತು ವಿಶೇಷವಾಗಿ ಹವಾನಿಯಂತ್ರಿತ ಶೈತ್ಯಾಗಾರವಿದ್ದು ಉಜಿರೆಯಿಂದ ದೂರದ ಕಾಶ್ಮೀರದವರೆಗೂ ಶವವನ್ನು (ಕೆಡದಂತೆ) ಸಾಗಿಸಲು ಸಹಕಾರಿಯಾಗಲಿದೆ ಎಂದು ಡಾ.ಗೋಪಾಲಕೃಷ್ಣ ಮಾಹಿತಿ ನೀಡಿದರು. ಆಸ್ಪತ್ರೆಯು ಪ್ರಾರಂಭವಾಗಿ 25ನೇ ವರ್ಷದಲ್ಲಿ ಇಂಥ ಹೈಟೆಕ್‌ ವ್ಯವಸ್ಥೆಯ ಅಂಬ್ಯುಲನ್ಸನ್ನು ಈ ಪರಿಸರಕ್ಕೆ ಕೊಡುಗೆಯಾಗಿ ನೀಡಲು ಹೆಮ್ಮೆಯಾಗುತ್ತಿದೆ ಎಂದು ಡಾ.ಗೋಪಾಲಕೃಷ್ಣ ದಂಪತಿಗಳು ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರುಗಳಾದ ಡಾ.ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ಪ್ರದ್ಯೋತ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಲಿ, ಜಿಲ್ಲೆಯ ಶಾಂತಿ ಸೌಹಾರ್ದತೆ ಮತ್ತೆ ಮರುಕಳಿಸಲಿ: ರಕ್ಷಿತ್ ಶಿವರಾಂ

Suddi Udaya

ಮೈರೋಳ್ತಡ್ಕ ಶಾಲಾ ಅಮೃತಮಹೋತ್ಸವ ಪ್ರಯುಕ್ತ ಆಧಾರ್ ನೋಂದಣಿ-ತಿದ್ದುಪಡಿ ಕಾರ್ಯಕ್ರಮ

Suddi Udaya

ಅಳದಂಗಡಿಯಲ್ಲಿ ನಡೆದ ತುಳುನಾಡ ಸಿಂಗಾರ ಕಾರ್ಯಕ್ರಮದಲ್ಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ

Suddi Udaya

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya

ಲಾಯಿಲ ಸೈಂಟ್ ಮೇರಿಸ್ ಶಾಲಾ ಬೆಳ್ಳಿಹಬ್ಬ ಸಂಭ್ರಮಕ್ಕೆ ಚಾಲನೆ, ಲೋಗೋ ಬಿಡುಗಡೆ

Suddi Udaya

ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ

Suddi Udaya
error: Content is protected !!