23.7 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿಶಿಕ್ಷಣ ಸಂಸ್ಥೆ

ನಯನಾಡು: ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಯನಾಡು: ಶ್ರೀ ರಾಮ ಭಜನಾ ಮಂದಿರ ರಿ. ನೈನಾಡು ಇದರ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪ್ರಯುಕ್ತ ಎಲ್‌ಎಂ ಪಿಂಟೋ ಆಸ್ಪತ್ರೆ ಬದ್ಯಾರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನೈನಾಡಿನ ಶ್ರೀ ರಾಮ ಸಭಾ ಭವನದಲ್ಲಿ ನಡೆಸಲಾಯಿತು.

ಈ ಶಿಬಿರದಲ್ಲಿ ಜನರಲ್ ತಪಾಸಣೆ, ಇ.ಸಿ.ಜಿ. ಮಕ್ಕಳ ತಜ್ಙರ ವಿಭಾಗ, ಸ್ತ್ರೀ ರೋಗ ಚಿಕಿತ್ಸಾ ವಿಭಾಗ, ಕ್ಯಾನ್ಸರ್ ತಪಾಸಣಾ ವಿಭಾಗ ಗಳ ಪ್ರಯೋಜನವನ್ನು ಸುಮಾರು ೧೬೬ ರಷ್ಟು ಜನರು ಪಡಕೊಂಡಿರುತ್ತಾರೆ. ಬದ್ಯಾರು ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞರಾದ ಎಲ್ರಾಯ್ ಸಲ್ದಾನ್ಹ ಹಾಗೂ ಆಡಳಿತ ಸಹಾಯಾಧಿಕಾರಿ ಸವಿತಾ, ಭಜನಾ ಮಂದಿರದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ರತ್ನಾಕರ್ ರವರುಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಶ್ರೀ ರಾಮ ಭಜನಾ ಮಂದಿರ ದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್ ನೈನಾಡು ಇಲ್ಲಿನ ಧರ್ಮಗುರುಗಳಾದ ಅನಿಲ್ ಅವಿಲ್ಡ್ ಲೋಬೋ, ಬದ್ಯಾರು ಆಸ್ಪತ್ರೆ ಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ತಜ್ಞ ವೈದ್ಯರಾದ ಎಲ್ ರಾಯ್ ಸಲ್ದಾನ, ಆಡಳಿತ ಸಹಾಯಾಧಿಕಾರಿ ಸವಿತಾ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೋ, ಲೀಲಾವತಿ ಪದ್ಮನಾಭ ಶೆಟ್ಟಿ ಕೆರೆಕೋಡಿ, ಯುವಕ ಸಂಘದ ಕಾರ್ಯದರ್ಶಿ ಗಣೇಶ್ ಹೆಗ್ಡೆ ಮಿತ್ತಬೆಟ್ಟು, ಗೆಳೆಯರ ಬಳಗ ಸೇವಾ ಸಂಸ್ಥೆ ಯ ಪ್ರವೀಣ್ ಕ್ರಾಸ್ತಾ, ಕೆಥೋಲಿಕ್ ಸಭಾದ ನೋಯೆಲ್ ಡಿಸೋಜಾ, ಕೆಥೋಲಿಕ್ ಯುವ ಸಂಚಾಲನದ ಉಪಾಧ್ಯಕ್ಷೆ ಕು. ಕೀರ್ತಿ ಪ್ರೀಯಾ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯ ವಿವಿಧ ಸೇವೆಗಳ ಕುರಿತಾಗಿ ಆಡಳಿತ ಕಾರ್ಯ ನಿರ್ವಹಣಾಧಿಕಾರಿ ಸವಿವರವಾದ ಮಾಹಿತಿಯನ್ನು ನೀಡಿದರು. ಖ್ಯಾತ ಸರ್ಜರಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ತಜ್ಞರಾದ ಎಲ್ ರಾಯ್ ಪಿಂಟೋ ರವರು ಕ್ಯಾನ್ಸರ್ ಕಾಯಿಲೆಯ ಕುರಿತಾದ ಮಾಹಿತಿಯನ್ನು ಪ್ರೋಜೆಕ್ಟರ್ ಚಿತ್ರಗಳ ಮುಖೇನ ಪರಿಣಾಮಕಾರಿಯಾಗಿ ನೀಡಿದರು. ನೈನಾಡು ಚರ್ಚ್ನ ಧರ್ಮಗುರು ಗಳು ಜನರಿಗೆ ಆರೋಗ್ಯದ ಮಹತ್ತರತೆಯನ್ನು, ಹಾಗೂ ಶಿಬಿರದ ಪ್ರಯೋಜನ ಪಡೆಯುವಂತೆ ಹಿತ ನುಡಿಗಲನ್ನಾಡಿದರು.

ಗ್ರಾಮ ಪಂಚಾಯತ್ ಸದಸ್ಯ ನೆಲ್ವಿಸ್ಟರ್ ಜನರಲ್ಲಿ ಸ್ವಚ್ಚತೆಯ ಬಗ್ಗೆ, ಸ್ವಚ್ಛ ಪರಿಸರದೊಂದಿಗೆ ಉತ್ತಮ ಆರೋಗ್ಯ ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು. ಯುವಕ ಸಂಘ, ಗೆಳೆಯರ ಬಳಗ , ಇನ್ನಿತರ ಸಂಘಟನೆಗಳ ಪ್ರಮುಖರು ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ನೈನಾಡು ಇದರ ಅಧ್ಯಕ್ಷೆ ಜಯಲಕ್ಷ್ಮೀ ರಾಘವ ಹೆಗ್ಡೆ, ಹಾಗೂ ನೈನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಶೀಂದ್ರ ಶೆಟ್ಟಿ ಅಂಗರ್ಜಾಲು, ನಿವೇದಿತಾ ಮಾತೃ ಮಂಡಳಿ ಯ ಕಾರ್ಯದರ್ಶಿ ದಿವ್ಯಾ ವಿಜಯ್ ರವರು ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

Related posts

ಅಕ್ರಮ ಕಲ್ಲು ಕೋರೆ ದಾಳಿ ನೆಪದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನ: ಇಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಗುರುವಾಯನಕೆರೆ: ನಿಸರ್ಗ ಆರ್ಕೇಡ್ ನ ಲೋಕಾರ್ಪಣೆ ಹಾಗೂ ಮನೆಯ ಗೃಹಪ್ರವೇಶ

Suddi Udaya

ಮೌಲ್ಯ ಶಿಕ್ಷಣ” ಪುಸ್ತಕ ರಚನೆ ಸಮಿತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಐ. ಶಶಿಕಾಂತ್ ಜೈನ್ ಆಯ್ಕೆ

Suddi Udaya

ಪುಂಜಾಲಕಟ್ಟೆ: ಪ್ರಸೂತಿ ತಜ್ಞೆ, ನಾಟಿ ವೈದ್ಯೆ ಶ್ರೀಮತಿ ಅಪ್ಪಿ ಪೂಜಾರಿ ಉರ್ಕಲೊಟ್ಟು ನಿಧನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ-ಶ್ರೀಮತಿ ಸರೋಜ ಶೆಟ್ಟಿ ದಂಪತಿಯ 25ನೇ ವರ್ಷದ ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ: 51 ನಾಯಿ ಮರಿಗಳು, 32 ಬೆಕ್ಕು ಮರಿಗಳ ದತ್ತು ಸ್ವೀಕಾರ

Suddi Udaya
error: Content is protected !!