September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025

ಗುರುವಾಯನಕೆರೆ: ನಗರದ ಪ್ರತಿಷ್ಠಿತ ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025 ನ್ನು ಸೆ.18 ರಂದು ಹಮ್ಮಿಕೊಳ್ಳಲಾಗಿತ್ತು. ಟಿವಿ ನೇರ ಪ್ರಸಾರದ ಈ ಸ್ಪರ್ಧೆಯಲ್ಲಿ ಮಕ್ಕಳ ತಂಡ ಟಿವಿ ಮಾಧ್ಯಮದಲ್ಲಿ ಬರುವ ಸುದ್ದಿ ಗುಚ್ಚದ ಹಾಗೆಯೇ ಒಂದು ಗಂಟೆಯ ಸುದ್ಧಿ ಪ್ರಸಾರವನ್ನು ನಿರ್ವಹಿಸುವ ಸ್ಪರ್ಧೆ ಇದಾಗಿದ್ದು , ವಿದ್ವತ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಟಿವಿ ಸುದ್ದಿ ವಾಹಿನಿಗಳ ಹಾಗೆಯೇ ಎಲ್ಲಾ ಸುದ್ದಿ ಸಾರಾಂಶವನ್ನ ನೇರಪ್ರಸಾರ ಮಾಡಿದ 3 ಸುದ್ದಿ ವಾಹಿನಿಗಳು ನ್ಯೂಸ್ ಆ್ಯಂಕರಿಂಗ್, ನ್ಯೂಸ್ ರಿಪೋರ್ಟಿಂಗ್, ವಿಶೇಷ ವರದಿ, ಪ್ರಚಲಿತ ವಿದ್ಯಮಾನಗಳು, ನ್ಯೂಸ್ ಡಿಬೇಟ್ , ಸಂದರ್ಶನ, ಜನಾಭಿಪ್ರಾಯ ಮುಂತಾದ ವಿಷಯಗಳನ್ನು ಒಳಗೊಂಡ ಸುದ್ದಿ ಸಮಪ೯ಣೆಯನ್ನ ನೆರೆದಿದ್ದ ಸುಮಾರು 400 ವಿದ್ಯಾರ್ಥಿಗಳ ಮುಂದೆ ಪ್ರಸ್ತುತಿ ಪಡಿಸಿದರು. ಮಕ್ಕಳಲ್ಲಿ ವಾಕ್ ಚಾತುರ್ಯತೆ, ವಿಶ್ವಾಸಪೂರ್ಣ ಪ್ರಸ್ತುತಿ, ಪ್ರಚಲಿತ ವಿದ್ಯಮಾನಗಳ ನಿಖರ ಮಾಹಿತಿ, ಪ್ರಸ್ತುತಿ ಪಡಿಸುವ ಕಲೆ , ತಾಂತ್ರಿಕತೆ ಬಳಸುವ ನೈಪುಣ್ಯತೆ ಮುಂತಾದವುಗಳ ಮೇಲೆ ಒತ್ತು ನೀಡುವ ತರಬೇತಿ ಇದಾಗಿತ್ತು. ಫ್ಲ್ಯಾಶ್ ಪಾಯಿಂಟ್, ವಿದ್ವತ್ ನೌ ಹಾಗೂ ವಿದ್ವತ್ ಪ್ರಚಲಿತ ಎಂಬ ಮೂರು ವಾಹಿನಿಗಳಾಗಿ ಸುದ್ದಿ ಪ್ರಸರಿಸಿದ ತಂಡಗಳು ತಮ್ಮ ಪ್ರಸ್ತುತಿಯಲ್ಲಿ ವೃತ್ತಿಪರತೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಬೆಳ್ತಂಗಡಿ ಪ.ಪೂ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ತಾರಾನಾಥ್ , ಪುತ್ತೂರು ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಹಾಗೂ ಗುರುವಾಯನಕೆರೆ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಜಗನ್ನಾಥ ರವರು ತೀಪುಗಾರರಾಗಿ ಭಾಗವಹಿಸಿದ್ದರು.


ಪ್ರಥಮ ಸ್ಥಾನವನ್ನು ವಿದ್ವತ್ ನೌ ಪಡೆದುಕೊಂಡಿತು, ದ್ವಿತೀಯ ಸ್ಥಾನ ವನ್ನು ವಿದ್ವತ್ ಸಾರಥ್ಯ ತಂಡವು ಪಡೆದುಕೊಂಡಿತು.
ಸ್ಪರ್ಧೆಯ ನಂತರ ತೀರ್ಪುಗಾರರು ತಮ್ಮ ಅನುಭವವನ್ನು ಹಂಚಿಕೊಂಡರು ಹಾಗೆಯೇ ಮಕ್ಕಳ ಕೌಶಲ್ಯವನ್ನು ಹೆಚ್ಚಿಸುವ ಮಾಹಿತಿಯನ್ನು ನೀಡಿ ಅವರನ್ನು ಪ್ರಶಂಸಿದರು. ಕಾರ್ಯಕ್ರಮದಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಷ್ ಚಂದ್ರ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರಜ್ವಲ್ ರೈ, ವಿದ್ವತ್ ಪಿ ಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ, ವಿದ್ವತ್ ಪಿಯು ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ಸತೀಶ ಬಂಗೇರ ಪರಿಚಯಿಸಿದರು, ಕಾರ್ಯಕ್ರಮವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಅನುಷಾ ಶೆಟ್ಟಿ, ನಿರೂಪಿಸಿದರು.

Related posts

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

Suddi Udaya

ಉಜಿರೆ: ವಾಸದ ಮನೆ ಕೆಡವಿ ಮನೆ ಸೊತ್ತು ಬೀದಿಗೆಸೆದ ವಿಲಕ್ಷಣ ಘಟನೆ: ವೀಡಿಯೋ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆ

Suddi Udaya

ಕುಕ್ಕೇಡಿ: ಪ್ರಭಾಕರ ಪೂಜಾರಿ ನಿಧನ

Suddi Udaya

ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಕೆ.ಪಿ.ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕುವೆಟ್ಟು, ಓಡಿಲ್ನಾಳ ಗ್ರಾಮದ ಕಾಂಗ್ರೆಸ್ ಬೂತ್ ಸಮಿತಿಯ ಸಭೆ

Suddi Udaya
error: Content is protected !!