September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಇಳಂತಿಲದಲ್ಲಿ ಕುಣಿತ ಭಜನಾ ತರಬೇತಿ ಆರಂಭೋತ್ಸವ

ಇಳಂತಿಲ : ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ನೇಜಿಕಾರು ಇಳಂತಿಲ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ಸಹಯೋಗದೊಂದಿಗೆ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಉದಯ ಕುಮಾರ್ ನೇಜಿಕಾರು ಇವರ ಅಧ್ಯಕ್ಷತೆಯನ್ನು ನೆರವೇರಿತು.

ಚಾರ್ ಧಾಮ್ ಯಾಥ್ರಾ ಸಂಘದ ಪ್ರಮುಖರಾದ ಶ್ರೀಕೃಷ್ಣ ಶೆಣೈ ಉಪ್ಪಿನಂಗಡಿ ದೀಪ ಪ್ರಜ್ವಲನೆ ಗೈದು ಶುಭ ಹಾರೈಸಿದರು.

ಬೆಳ್ತಂಗಡಿ ಭಜನಾ ತರಬೇತುದಾರರ ಸಂಘದ ಅಧ್ಯಕ್ಷ ಸಂದೇಶ್ ಮದ್ದಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಜನಾ ತರಬೇತಿಯ ಉದ್ದೇಶ ರೂಪು-ರೇಷಗಳ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಸುರೇಶ್ ಪೈ ನೇಜಿಕಾರು, ಮಂಜುನಾಥೇಶ್ವರ ಭಜನಾ ಪರಿಷತ್ ಸಮನ್ವಯಧಿಕಾರಿಗಳಾದ ಸಂತೋಷ್ ಪಿ ಅಳಿಯೂರು, ಕೇಶವ , ಇಳಂತಿಲ ಶಿಶುಮಂದಿರ ಕಾರ್ಯದರ್ಶಿ ರವಿ ಇಳಂತಿಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಣಿಯೂರು ವಲಯದ ಮೇಲ್ವಿಚಾರಕಿ ಕು. ಶಿಲ್ಪಾ, ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಬಾಬು ಗೌಡ ನೇಜಿಕಾರು, ಭಜನಾ ಪರಿಷತ್ ಗುರುವಾಯನೆಕರೆಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ ಉಪಸ್ಥಿತರಿದ್ರದು.

ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಮತ್ತು ಮಿತ್ರವೃಂದ ನೇಜಿಕಾರು ಸದಸ್ಯರು , ಮಾತೆಯರು ಉಪಸ್ಥಿತರಿದ್ದರು. ನಯನ್ ಕುಮಾರ್ ನೇಜಿಕಾರು ಸ್ವಾಗತಿಸಿ ವಂದಿಸಿದರು. ವಿನಯ್ ಕುಮಾರ್ ನೇಜಿಕಾರು ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ನಲ್ಲಿ ಬೋಶ್ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆ

Suddi Udaya

ಬಂದಾರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಕಳೆಂಜ ಗೌಡರ ಯಾನೆ ಒಕ್ಕಲಿಗರ ಯುವ ಸೇವಾ ಸಂಘದಿಂದ ಕಾಯರ್ತಡ್ಕ ತೇಜಸ್ ರವರಿಗೆ ಚಿಕಿತ್ಸಾ ನೆರವು

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಜಿಲ್ಲಾ ಪ್ರಥಮ ಪ್ರಶಸ್ತಿ

Suddi Udaya

ದಿಡುಪೆ – ಸಂಸೆ ಅರಣ್ಯ ರಸ್ತೆಯೊಳಗೆ ವಿಡಿಯೋ ಮಾಡಿದ ಪ್ರಕರಣ: ಬೆಳ್ತಂಗಡಿ ವನ್ಯಜೀವಿ ಇಲಾಖೆಯಿಂದ ಮೂವರಿಗೆ ದಂಡ

Suddi Udaya
error: Content is protected !!