September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಶುಭಾರಂಭ

ವೇಣೂರು ಪ್ರಾ.ಕೃ.ಪ. ಸಹಕಾರಿ ಸಂಘದ ನೂತನ “ಫಲ್ಗುಣಿ ಕಟ್ಟಡ” ಲೋಕಾರ್ಪಣೆ

ವೇಣೂರು: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಫಲ್ಗುಣಿ ಕಟ್ಟಡದ ಉದ್ಘಾಟನೆಯು ಅ.25 ರಂದು ವೇಣೂರಿನಲ್ಲಿ ನಡೆಯಿತು.

ನೂತನ ಕಟ್ಟಡವನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿ ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಫಲ್ಗುಣಿ ಸಹಕಾರಿ ಸಂಘವು ರೈತಾಪಿ ವರ್ಗದ ಶ್ರೇಯೋಭಿವೃದ್ದಿಗೆ ಸೇವೆ ನೀಡುತ್ತಿದೆ. ಅಧ್ಯಕ್ಷ ಸುಂದರ ಹೆಗ್ಡೆ ಮತ್ತು ಸಿಇಓ ಜಯಂತ್ ಪೂಜಾರಿ ಜೋಡೆತ್ತು ತರ ಗ್ರಾಹಕರ ಸೇವೆಗೆ ಬದ್ದರಾಗಿದ್ದಾರೆ ಎಂದರು.

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಮತ್ತು ಸಹಬಾಳ್ವೆಗೆ ಉದಾಹರಣೆ ಪಲ್ಗುಣಿ ಕಟ್ಟಡ.ಸಹಕಾರಿ ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಸಂಘದಲ್ಲಿ ಅಳವಡಿಸಲಾಗಿದೆ ಎಂದರು.

ವೇದಿಕೆಯಲ್ಲಿ ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಮಂಗಳೂರು ವಿದ್ಯುತ್ ಸರಬರಾಜು ನಿಗಮ ಅಧ್ಯಕ್ಷ ಹರೀಶ್ ಕುಮಾರ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಮಂಗಳೂರು ಕೆ.ಎಂ.ಎಫ್ ನಿರ್ದೇಶಕ ಪ್ರಭಾಕರ ಹುಲಿಮೇರು, ವೇಣೂರು ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ, ವೇಣೂರು ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಜಯರಾಮ ಶೆಟ್ಟಿ, ವೇಣೂರು ಎಂಜೆಎಂ ಖತೀಬರು ಸಯ್ಯಿದ್ ಮಹಮ್ಮದ್ ಶರಫುದ್ದೀನ್ ಅಹ್ಸನಿ ಅಲ್‌ಹಾದಿ ತಂಙಳ್, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವೇಣೂರು ಸೊಸೈಟಿ ಅಧ್ಯಕ್ಷ ಸುಂದರ ಹೆಗ್ಡೆ ಮತ್ತು ಸಿಇಓ ಜಯಂತ್ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇಣೂರು ಸೊಸೈಟಿ ಉಪಾಧ್ಯಕ್ಷ ರತ್ನಾಕರ ಪೂಜಾರಿ, ನಿರ್ದೇಶಕರಾದ ರಾಮದಾಸ್ ನಾಯಕ್, ಸಂದೀಪ್ ಹೆಗ್ಡೆ, ಎಂ.ಆರ್.ಸಂತೋಷ್ ಜೈನ್, ನಾಗಪ್ಪ, ಆಶಾ ಸುಂದರ್, ರೋಹಿಣಿ ಪ್ರಕಾಶ್, ಕೃಷ್ಣಪ್ಪ ಮೂಲ್ಯ, ಪ್ರಶಾಂತ್ ಪೂಜಾರಿ, ರಾಜು ನಾಯ್ಕ, ಪ್ರವೀಣ್ ಪೆರಿಯೊಟ್ಟು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ, ಸಿಬ್ಬಂದಿಗಳಾದ ಭರತ್‌ರಾಜ್, ಗೀತಾ, ದಿವ್ಯ.ಕೆ, ರಮ್ಯ.ಪಿ.ಜೈನ್, ಶ್ರೀನಿಧಿ ಭಟ್, ಚಂದ್ರಶೇಖರ ಪಿ., ಅಜಿತ್ ಕುಮಾರ್ ಜೈನ್ ಹಾಗೂ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಸಿಬ್ಬಂದಿ ವರ್ಗ, ಸದಸ್ಯರು ಉಪಸ್ಥಿತರಿದ್ದರು.

ಪ್ರಸಿದ್ದ ನಿರೂಪಕಿ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಸಂಗೀತಾ ರಸಮಂಜರಿ ನಡೆಯಿತು.

Related posts

ಬೆಳ್ತಂಗಡಿ : ಕಾಲುಗಳನ್ನು ಕತ್ತರಿಸಿದ ರೀತಿಯಲ್ಲಿ ಚಿರತೆ ಮೃತದೇಹ ಪತ್ತೆ: ಸ್ಥಳಕ್ಕೆ ಹಿರಿಯ ಅಧಿಕಾರಿಗಳ ದೌಡು ಪರಿಶೀಲನೆ

Suddi Udaya

ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ

Suddi Udaya

ಫಾತಿಮಾ ಹೆಲ್ತ್ ಫೌಂಡೇಶನ್, ಇಂಡಿಯಾನ ಆಸ್ಪತ್ರೆಯಿಂದ ಸೇವಾ ಯೋಜನೆಯಿಂದ ಮದ್ದಡ್ಕದಲ್ಲಿ 68 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಪಡ್ಡಂದಡ್ಕ ಸಾಧನಾಶ್ರೀ ಮಹಿಳಾ ಮಂಡಲ ಉದ್ಘಾಟನೆ

Suddi Udaya

ಕನ್ಯಾಡಿ ಶ್ರೀ ರಾಮ ಕ್ಷೇತ್ರಕ್ಕೆ ಮಾಜಿ ಸಚಿವ ನಾಗರಾಜ ಶೆಟ್ಟಿ ಭೇಟಿ

Suddi Udaya

ಬೆಳ್ತಂಗಡಿ:ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಅವರ 15ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಮುಗುಳಿ -ಬ್ರಹ್ಮಯಕ್ಷ ಬಸದಿ ರಸ್ತೆ ಉದ್ಘಾಟನೆ

Suddi Udaya
error: Content is protected !!