September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ: ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಉಜಿರೆ,ಡಿ,08 : ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ವೀರಾಂಗಣ ಡಿ. ಅನಿತಾ ಸುರೇಂದ್ರ ಕುಮಾರ್ ರವರ ಪರಿಕಲ್ಪನೆಯ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ವೀರ್ ಡಿ. ಸುರೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಬಜಗೋಳಿಯ ಸುಮ್ಮ ಗುತ್ತು ವಿನಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8ರ 9ನೇ ಆವೃತ್ತಿಯ ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆ ತಂಡಗಳಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.

ಹಿರಿಯರ ವಿಭಾಗದಲ್ಲಿ ಉಜಿರೆಯ ಶುಕ್ಲ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದು, ಉಜಿರೆಯ ಶ್ರುತ ತಂಡವು ಐದನೇ ಸ್ಥಾನ ಪಡೆಯಿತು. ಹಾಗೆಯೇ ಕಿರಿಯರ ವಿಭಾಗದಲ್ಲಿ ಉಜಿರೆಯ ಬ್ರಾಹ್ಮರಿ ತಂಡವು ದ್ವಿತೀಯ ಸ್ಥಾನ ಪಡೆದು, ಉಜಿರೆಯ ಹರ್ಷದಾ ತಂಡ ನಾಲ್ಕನೇ ಸ್ಥಾನ ಪಡೆಯಿತು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸುಮಾರು 90 ಕ್ಕೂ ಅಧಿಕ ತಂಡಗಳ ಪೈಕಿ ಅತ್ಯುತ್ತಮವಾಗಿ ಜಿನಭಜನೆಯನ್ನು ಪ್ರಸ್ತುತಪಡಿಸಿದ ಉಜಿರೆಯ ನಾಲ್ಕು ತಂಡಗಳಿಗೆ ಎರಡು ವರ್ಗಗಳಲ್ಲೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದೆ. ಈ ಮೂಲಕ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆಗೆ 4 ತಂಡಗಳು ಆಯ್ಕೆಗೊಂಡಿದೆ.

ಈ ಹಿಂದೆ ನಡೆದ ಆವೃತ್ತಿಯ ಜಿನಭಜನಾ ಸ್ಪರ್ಧೆಗಳಲ್ಲಿ ಉಜಿರೆಯ ತಂಡವು ಸಕ್ರೀಯವಾಗಿ ಭಾಗವಹಿಸುತ್ತಿದ್ದು, ಹಲವು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ. ಎರಡು ಬಾರಿ ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

ವಿಜೇತ ಉಜಿರೆಯ ಜಿನಭಜನಾ ತಂಡಗಳ ಸೋನಿಯಾ ಯಶೋವರ್ಮ ಮಾರ್ಗದರ್ಶವನ್ನು ನೀಡಿ, ಅಭಿನಂದನೆಗಳನ್ನು ತಿಳಿಸಿರುತ್ತಾರೆ. ತಂಡಗಳನ್ನು ಉಜಿರೆಯ ತೃಪ್ತ ಕುಮಾರ್ ಜೈನ್ ಸಂಯೋಜಿಸಿದರು.

Related posts

2024-25 ನೇ ಸಾಲಿನ ಬೆಳೆ ವಿಮೆಯನ್ನು ಕೃಷಿಕರಿಗೆ ನೀಡುವಂತೆ ಆಗ್ರಹಿಸಿ ಕೊಕ್ಕಡ ಕೃಷಿಕರಿಂದ ಬೆಂಗಳೂರು ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ

Suddi Udaya

ನಾವರ: ಡೆಂಗ್ಯೂ ವಿರೋಧ ಮಾಸಾಚರಣೆ ಮನೆ ಮನೆಗೆ ಭೇಟಿ ಹಾಗೂ ಮುಂಜಾಗೃತ ಮಾಹಿತಿ ಕಾರ್ಯಕ್ರಮ

Suddi Udaya

ನೇತ್ರಾವತಿ ಪೀಕ್‌ಗೆ ಚಾರಣಿಗರ ಆಗಮನ ಶುರು: ಟ್ರೆಕ್ಕಿಂಗಳ ಸುರಕ್ಷತೆಗಾಗಿ ಅಲ್ಲಲ್ಲಿ ಸೂಚನ ಪಲಕ, ೧೧೫ ಟ್ರೆಕ್ ಗೈಡ್‌ಗಳ ನೇಮಕ

Suddi Udaya

ಬೆಳ್ತಂಗಡಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಕ್ಕೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳಿಗೆ 12ರಲ್ಲಿ 12 ಭರ್ಜರಿ ಜಯ

Suddi Udaya

ಬಂಡಾಜೆ ಕಾಡಿನಲ್ಲಿ ಗುಡ್ಡಜರಿತ

Suddi Udaya
error: Content is protected !!