September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕೊಯ್ಯೂರು ಗ್ರಾಮ ಸಮಿತಿ ಮಹಾಸಭೆ ಮತ್ತು ವಾರ್ಷಿಕ ಸಮಾವೇಶ

ಕೊಯ್ಯೂರು : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕೊಯ್ಯೂರು ಇದರ ಮಹಾಸಭೆ ಮತ್ತು ವಾರ್ಷಿಕ ಸಮಾವೇಶ ಜ. 25 ರಂದು ಆದೂರು ಪೇರಾಲ್ ಪಂಚದುರ್ಗಾ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಎಂ. ರಾಮಣ್ಣ ಗೌಡ ಮೈಂದಕೋಡಿ , ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕುಂದಾಪುರ ಇವರು ನೆರವೇರಿಸಿ ಮಾತನಾಡುತ್ತಾ ನಮ್ಮ ಕುಲವೃತ್ತಿ ಒಕ್ಕುಲತನವನ್ನು ಮಾಡುವುದರೊಂದಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿ ದೇಶದ ಪ್ರಗತಿಯಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಿರಣ್ ಚಂದ್ರ ಪುಷ್ಪಗಿರಿ ಧಾರ್ಮಿಕ ಮುಖಂಡ ಬೆಳ್ತಂಗಡಿ ಮಾತನಾಡಿ ನಮ್ಮ ಸಮಾಜದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಆ ಮೂಲಕ ನಮ್ಮ ಸಮಾಜಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಹೇಳಿದರು.

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು ಇದರ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಮಾತನಾಡಿ ಪರರ ಹಂಗಿಲ್ಲದೆ ಸ್ವಾವಲಂಬಿ ಬದುಕುವ ಧೈರ್ಯ ಮಾಡಬೇಕು ಅಸಕ್ತರಿಗೆ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು. ಪ್ರಧಾನ ಭಾಷಣ ಮಾಡಿದ ಉಜಿರೆ ಎಸ್.ಡಿ.ಎಂ . ಸ್ನಾತಕೋತ್ತರ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಧನೇಶ್ವರಿ ಮಾತನಾಡುತ್ತಾ ನಮ್ಮ ಸಮಾಜದಲ್ಲಿ ಕೂಡು ಕುಟುಂಬ ಗಳೊಂದಿಗೆ ಬದುಕು ಕಟ್ಟಿಕೊಂಡಿದ್ದ ನಾವು ವಿಭಕ್ತ ಕುಟುಂಬ ಹೊಂದಿದ್ದೇವೆ. ಹೀಗಾಗಿ ನಮ್ಮ ರೂಢಿ ಸಂಪ್ರದಾಯಗಳು ಕಣ್ಮರೆಯಾಗಿವೆ. ಆದರೆ ನಾವು ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿಜಯ ಕುಮಾರ್ ಎಂ ಕೊಯ್ಯೂರು ವಹಿಸಿದ್ದು ಎರಡು ವರ್ಷಗಳ ಅವಧಿಯಲ್ಲಿ ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸಿದರು. ನಿವೃತ್ತ ತಹಶೀಲ್ದಾರ ನಾರಾಯಣ ಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಜಾಹ್ನವಿ, ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ವಿಜಯ ಕುಮಾರ್ ಎಂ ಇವರನ್ನು ಸನ್ಮಾನಿಸಲಾಯಿತು. 10ನೇ ತರಗತಿ ಮತ್ತು ಪಿ.ಯು.ಸಿ. ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗೀತಾ ರಾಮಣ್ಣ ಗೌಡ ಮತ್ತು ಕೇಶವ ಗೌಡ ಇವರು ಸನ್ಮಾನ ಪತ್ರ ವಾಚಿಸಿದರು. ಯುವ ವೇದಿಕೆ ಅಧ್ಯಕ್ಷ ಅಜಿತ್, ಮಹಿಳಾ ವೇದಿಕೆ ಕಾರ್ಯದರ್ಶಿ ದೀಪಿಕಾ, ಬೆಳ್ತಂಗಡಿ ತಾಲೂಕು ಸಂಘದ ನಿರ್ದೇಶಕ ದಿನೇಶ ಗೌಡ ಕೊಯ್ಯೂರು ಆಟೋಟ ಸ್ಪರ್ಧೆಗಳ ವಿಜೇತರ ಪಟ್ಟಿ ಓದಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವನಿತಾ ಕಡಮಾಜೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಗೌಡ ಬಜಿಲ ಉಪಸ್ಥಿತರಿದ್ದರು. ಕುಮಾರಿ ಒಲುಮೆ ಇವರ ಪ್ರಾರ್ಥನೆಯ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ನವೀನ್ ಗೌಡ ವಾದ್ಯಕೋಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ವಿಶ್ವನಾಥ ಎಂ.ಯು. ವರದಿ ವಾಚಿಸಿದರು. ಮಾಜಿ ಅಧ್ಯಕ್ಷ ದಾಮೋದರ ಗೌಡ ಧನ್ಯವಾದ ನೀಡಿದರು. ಭರತ್ ಡೆಂಬುಗ ಕಾರ್ಯಕ್ರಮ ನಿರೂಪಿಸಿದರು.

Related posts

ಬಳ್ಳಮಂಜ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳದ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ತತ್ವಜ್ಞಾನಿಗಳ ದಿನಾಚರಣೆ

Suddi Udaya

ಉಜಿರೆ ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

Suddi Udaya

ಶಿರ್ಲಾಲು ಸಿಎ ಬ್ಯಾಂಕಿನಿಂದ ಎಸ್.ಎಸ್.ಎಲ್.ಸಿ ಸಾಧಕ‌ ವಿದ್ಯಾರ್ಥಿನಿ ತ್ರಿಷಾರವರಿಗೆ ಸನ್ಮಾನ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಕೊಕ್ಕಡ: ಎಂಡೋ ಸಂತ್ರಸ್ತರ ಪುನರ್‌ವಸತಿ ಕೇಂದ್ರದ ನೂತನ ಕಟ್ಟಡಕ್ಕೆ ಶಾಸಕ ಹರೀಶ್ ಪೂಂಜರಿಂದ ಭೂಮಿ ಪೂಜೆ

Suddi Udaya
error: Content is protected !!