22.6 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಎಸ್‌ಎಂವೈಎಂ ಸೆಂಟ್ ಅಲ್ಫೋನ್ಸ ಚರ್ಚ್ ವತಿಯಿಂದ ಸ್ವಚ್ಛತಾ ಅಭಿಯಾನ

ನೆಲ್ಯಾಡಿ: ಗ್ರೀನ್ ಸಿಟಿ – ಕ್ಲೀನ್ ಸಿಟಿ ಅಭಿಯಾನದ ಅಂಗವಾಗಿ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋಮಲಬಾರ್ ಯೂತ್ ಮೂವ್ಮೆಂಟ್ (SMYM) ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಹೈವೇ ನಿರ್ಮಾಣ, ಕಿರಿದಾದ ರಸ್ತೆಗಳು ಮತ್ತು ಬೀದಿಗಳಲ್ಲಿ ತುಂಬಿಕೊಂಡಿದ್ದ ಕಸದ ರಾಶಿಗಳಿಂದ ನೆಲ್ಯಾಡಿ ಪೇಟೆ ಅಸ್ವಚ್ಛತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಮಾಜಕ್ಕೆ ಮಾದರಿಯಾಗುವ ಉದ್ದೇಶದಿಂದ ಪೇಟೆಯ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು.

ಕಾರ್ಯಕ್ರಮವನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರ ಉಪಸ್ಥಿತಿಯಲ್ಲಿ ಯೂತ್ ಮೂವ್ಮೆಂಟ್ ಅಧ್ಯಕ್ಷ ತೋಮಸ್ ವಾಯಯಿಲ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ರೆಜಿ ಕೊಳಂಗರಾತ್, ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕನಾಟ್, ಜೋಯ್ ಪುತ್ತೇನ್ ಪರಂಭಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಫಾ. ಶಾಜಿ ಮಾತ್ಯು ಅವರು, “ಪೇಟೆಯ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ವರ್ತಕರು, ಸಾರ್ವಜನಿಕರು, ಗ್ರಾಹಕರು ಹಾಗೂ ಸ್ಥಳೀಯ ಗ್ರಾಮಾಡಳಿತ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪೇಟೆಯನ್ನು ಶಾಶ್ವತವಾಗಿ ಸ್ವಚ್ಛವಾಗಿರಿಸಲು ಸಾಧ್ಯ,” ಎಂದು ತಿಳಿಸಿದರು.

ಈ ಸ್ವಚ್ಛತಾ ಅಭಿಯಾನದಲ್ಲಿ ಸೀರೋಮಲಬಾರ್ ಯೂತ್ ಮೂವ್ಮೆಂಟ್‌ನ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

Related posts

ಜ.23-24: ಎಸ್.ಡಿ.ಯಂ. ಕಾಲೇಜಿನಲ್ಲಿ ಜೀವ ವಿಜ್ಞಾನದ ಉದಯೋನ್ಮುಖ ಸಂಶೋಧನೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya

ಡಿ.29: ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸಾಂಸ್ಕೃತಿಕ ವೈಭವ

Suddi Udaya

ರಾಷ್ಟ್ರಮಟ್ಟದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಫೇರ್ (INSEF): ಉಜಿರೆ ಎಸ್.ಡಿ.ಎಮ್ ಶಾಲೆ, (ರಾಜ್ಯ ಪಠ್ಯಕ್ರಮ)ಯ ವಿದ್ಯಾರ್ಥಿಗಳಾದ ಅಧಿಶ್ ಬಿ.ಸಿ ಮತ್ತು ಆಲಾಪ್ ಎಂ ವಿಜ್ಞಾನದ ಸಂಶೋಧನೆ ಮಂಡಣೆ – ಗೌರವಾನ್ವಿತ ಪುರಸ್ಕಾರ

Suddi Udaya

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ

Suddi Udaya

ಪ್ರೊ. ಮಧೂರು ಮೋಹನ ಕಲ್ಲೂರಾಯರಿಗೆ ‘ಕರ್ನಾಟಕ ಕಲಾ ಶ್ರೀ’ ಪ್ರಶಸ್ತಿ

Suddi Udaya
error: Content is protected !!