September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಯಕ್ಷಭಾರತಿ ನಾಟ್ಯ ತರಬೇತಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಬೆಳ್ತಂಗಡಿ: ಯಕ್ಷಭಾರತಿ ಕನ್ಯಾಡಿ ಸಂಸ್ಥೆಯು ಉಜಿರೆಯ ನಾಗರಾಜ ಕಾಂಪೌಂಡಿನ ಶ್ರೀಮಾತಾದಲ್ಲಿ ನಡೆಸುತ್ತಿರುವ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಶಾಲಾ ಬ್ಯಾಗ್ ವಿತರಿಸಲಾಯಿತು.

ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಪಾಧ್ಯಕ್ಷ ಹರಿದಾಸ ಗಾಂಭೀರ, ನಾಟ್ಯ ಗುರುಗಳಾದ ಚಂದ್ರಶೇಖರ ಧರ್ಮಸ್ಥಳ ವೇದಿಕೆಯಲ್ಲಿ ಉಪಸ್ಥಿತರಿದ್ದು ಬ್ಯಾಗುಗಳನ್ನು ವಿತರಿಸಿ ಶುಭ ಹಾರೈಸಿದರು.

ಉಜಿರೆಯ ಬ್ರಹ್ಮಕಲಕೋತ್ಸವದಲ್ಲಿ ಕಲಿಕಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಲೀಲಾ ಮೂರ್ತಿ ಜನಾರ್ದನ ಯಕ್ಷಗಾನ ಪ್ರದರ್ಶನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಪೋಷಕರ ಪರವಾಗಿ ಬಾಸಮೆ ನಾರಾಯಣ ಭಟ್ ಮಾತನಾಡಿದರು. ನಾಟ್ಯಗುರುಗಳಾದ ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಮತ್ತು ಮಧುಸೂದನ ಇವರನ್ನು ಗೌರವಿಸಲಾಯಿತು.

ಸಂಸ್ಥೆಯ ಟ್ರಸ್ಟಿಗಳಾದ ಸುರೇಶ ಕುದ್ರೆಂತ್ತಾಯ, ವಿದ್ಯಾಕುಮಾರ್ ಕಾಂಚೋಡು, ಕುಸುಮಾಕರ ಕೊತ್ತೋಡಿ, ಹರೀಶ ಕೊಳ್ತಿಗೆ, ಗುರುಪ್ರಸಾದ್ ಉಜಿರೆ, ಭವ್ಯ ಹೊಳ್ಳ, ಯಶೋಧರ ಇಂದ್ರ, ಕೌಶಿಕ್ ರಾವ್ ಮತ್ತು ಪೋಷಕರು ಉಪಸ್ಥಿತರಿದ್ದರು..
ಸಂಸ್ಥೆಯ ಸಂಚಾಲಕ ಮಹೇಶ್ ಕನ್ಯಾಡಿ ಸ್ವಾಗತಿಸಿ ಟ್ರಸ್ಟಿ ರವೀಂದ್ರ ಶೆಟ್ಟಿ ಬಳೆಂಜ ವಂದಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ: ಚಂಡಿಕಾ ಹೋಮ, ಪ್ರಸನ್ನಪೂಜೆ, ಪಾದಪೂಜೆ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘದ ಹಿರಿಯ ಮಾಜಿ ನಿರ್ದೇಶಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ತುಳು ಸಂಸ್ಕೃತಿ ಕುರಿತ ‘ಐಸಿರ’ ಕಾರ್ಯಕ್ರಮ

Suddi Udaya

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

Suddi Udaya

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆ ಪದವಿ ವಿಭಾಗದ ವಿದ್ಯಾರ್ಥಿ ಸಂಘದ ಚುನಾವಣೆ

Suddi Udaya

ಮುಂಡಾಜೆ ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಲಯ ಭಜನಾ ಸಮಾವೇಶ

Suddi Udaya
error: Content is protected !!