September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶ: ಹೊರೆಕಾಣಿಕೆ ಸಮರ್ಪಣೆ, ಜಮಾ ಉಗ್ರಾಣ ಉದ್ಘಾಟನೆ

ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ. 29ರಿಂದ ಏ. 6ರವರೆಗೆ
ಬ್ರಹ್ಮಕಲಶೋತ್ಸವ ನಡೆಯಲಿದೆ.

ಮಾ. 29ರಂದು ಮಡಂತ್ಯಾರು ಗಣಪತಿ ಮಂಟಪದಲ್ಲಿ ಮಡಂತ್ಯಾರು, ಪಾರೆಂಕಿ, ಕುಕ್ಕಳ, ಮಾಲಾಡಿ ಕಡೆಯಿಂದ ಸಮರ್ಪಿಸಿದ ಹೊರೆಕಾಣಿಕೆ ಸಮರ್ಪಣೆಗೆ ಮಡಂತ್ಯಾರು ಪಾರೆಂಕಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿ ಮೂಡಯೂರು ಚಾಲನೆ ನೀಡಿದರು.

ಜಮಾ ಉಗ್ರಾಣ ಉದ್ಘಾಟನೆಯನ್ನು ಮಡಂತ್ಯಾರು ವಿಷ್ಣುದಾಸ್ ಬಾಳಿಗ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಬೇಬಿ ನಾಣ್ಯಪ್ಪ ಪೂಜಾರಿ, ಸುಕೇಶ್ ಶೆಟ್ಟಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರ್ಷ ಸಂಪಿಗೆತ್ತಾಯ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವಸಂತ ಮರಕಡ, ಯೋಗೇಶ್ ಕುಮಾರ್ ಕಡ್ತಿಲ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಕಾಂತಪ್ಪ ಗೌಡ,
ಮೋನಪ್ಪ ಪೂಜಾರಿ ಕಂಡೆತ್ಯಾರ್, ಅಶೋಕ್ ಭಂಡಾರಿ ಗುಂಡಿಯಾಲ್ಕೆ, ಸುಧೀರ್ ಶೆಟ್ಟಿ,ಪ್ರಮೋದ್ ಕುಮಾರ್,ಹರ್ಷ ನಾರಾಯಣ ಶೆಟ್ಟಿ, ನಾರಾಯಣ ಪೂಜಾರಿ,ಸುರೇಶ್ ಎಸ್., ರವಿ ಕುಮಾರ್, ಸದಾಶಿವ ಹೆಗ್ಡೆ,ಅಡಕೆ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಯೂರು, ಬಿ. ಪಿಲಾತ್ತಬೆಟ್ಟು ವ್ಯ.ಸೇ.ಸ.ಸಂಘ ನಿವೃತ್ತ ಶಾಖಾ ಪ್ರಬಂಧಕ ಮಂಜಪ್ಪ ಮೂಲ್ಯ, ಪಿ., ಪ್ರಮೋದ್ ಕುಮಾರ್, ಚಂದ್ರಕಾಂತ್ ನಿಡ್ಡಾಜೆ,ಸಂಪತ್ ಸುವರ್ಣ,ಸುಧೀರ್ ಕುಮಾರ್, ತುಳಸಿದಾಸ್ ಪೈ, ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಮಾಧವ ಜೋಗಿತ್ತಾಯ, ಸತೀಶ್ ಕಾರಂದೂರು, ಯತೀಶ್ ರೈ, ಹೊನ್ನಪ್ಪ ಕುಲಾಲ್, ಬೂಬ ಮೇಸ್ತ್ರಿ, ಅವಿನಾಶ್ ಕುಲಾಲ್, ಕಿಶೋರ್ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ, ಪದ್ಮನಾಭ ಸುವರ್ಣ, ಮಡಂತ್ಯಾರು ಗ್ರಾಪಂ ಮಾಜಿ ಅಧ್ಯಕ್ಷೆ ರೂಪಾ ನವೀನ್, ಡಾ. ಕೆ. ಎಂ. ಶೆಟ್ಟಿ, ರಾಜಶೇಖರ್ ಶೆಟ್ಟಿ, ವೆಂಕಟ್ರಮಣ ಗೌಡ, ಗಣೇಶ್ ಮೂಲ್ಯ, ಉಮೇಶ್, ಕಾರ್ತಿಕ್ ಬ್ರಹ್ಮ ಕಲಶ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related posts

ನಾರಾವಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬಾರ್ಯ ಶ್ರೀ ವರಮಹಾಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದವರನ್ನು ತಡೆದು ಜೀವಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಮಚ್ಚಿನ: ರುದ್ರಭೂಮಿ ಸಮೀಪ ಆಕಸ್ಮಿಕ ಬೆಂಕಿ

Suddi Udaya

ಗೇರುಕಟ್ಟೆ: ಪ್ರಗತಿಪರ ಕೃಷಿಕ ಕಲ್ಕುರ್ಣಿ ಪೆರ್ನು ಗೌಡ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!