September 6, 2026
Uncategorized

ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬ

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಈಸ್ಟರ್ ಹಬ್ಬವು ವಿಜೃಂಭಣೆಯಿಂದ ಆಚರಿಸಲಾಯಿತು.

ಏ.5ರಂದು ಯೇಸು ಕ್ರಿಸ್ತನ ಪುನರುದ್ಧನಾದ ಹಬ್ಬವಾದ ಈಸ್ಟರ್ ಹಬ್ಬವು ಬೆಳ್ತಂಗಡಿ ಧರ್ಮಪ್ರಾಂತ್ಯದ ಎಲ್ಲ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಧರ್ಮಪ್ರಾಂತ್ಯದ ಕಥಿಡ್ರಲ್ ದೇವಾಲಯದಲ್ಲಿ ಜೇಮ್ಸ್ ಪತ್ತೇರಿಲ್ ರವರ ಕಾರ್ಮಿಕತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ಹಬ್ಬದ ಸಂದೇಶದಲ್ಲಿ
ಜೀವನ ಸಂಸ್ಕೃತಿ ಕಡೆ ಸಮಾಜ ತಿರುಗುವಂತೆ ಸಮಾಜದಲ್ಲಿ ಬದಲಾವಣೆಗೆ ಕರೆ ನೀಡುವ ಆಳವಾದ ಸಂದೇಶವನ್ನು ನೀಡಿದರು.
ಪುಣ್ಯ ಸ್ಮರಣಾರ್ಹರಾದ ಪೋಪ್ ಜಾನ್ ಪಾಲ್ ದ್ವಿತೀಯರಿಂದ ಪ್ರಸಿದ್ಧವಾದ ‘ಮರಣ ಸಂಸ್ಕೃತಿ’ಯ ಬೆಳವಣಿಗೆಯ ಬಗ್ಗೆ ಗಮನ ಹರಿಸಿದರು. ವೈಯಕ್ತಿಕ ಆನಂದ, ಉಪಯೋಗ ಮತ್ತು ತೀವ್ರ ವೈಯಕ್ತಿಕತೆಯನ್ನು ಮನುಷ್ಯನ ಗೌರವದ ಮೇಲೆ ಆದ್ಯತೆ ನೀಡುವ ಆಧುನಿಕ ಸಮಾಜ ‘ಮರಣ ಸಂಸ್ಕೃತಿ’ ಕಡೆ ತಳ್ಳುತ್ತಿದೆ ಎಂದು ಎಚ್ಚರಿಸಿದರು.

“ದೇವರು ಮತ್ತು ಸತ್ಯದ ಭಾವನೆ ಕಳೆದುಕೊಂಡಾಗ, ಮನುಷ್ಯ ಜೀವನದ ಮೌಲ್ಯ ವ್ಯಾಪಾರಕ್ಕೆ ಒಳಗಾಗುತ್ತದೆ” ಎಂದು ಬಿಷಪ್ ಈ ಸಾಮಾಜಿಕ ಸಂಕಷ್ಟಗಳ ಆಧ್ಯಾತ್ಮಿಕ ಮೂಲಗಳನ್ನು ಗುರುತಿಸಲು ಭಕ್ತರನ್ನು ಕರೆ ನೀಡಿದರು.

ಮರಣ ಸಂಸ್ಕೃತಿಯಿಂದ ದೂರವಾಗಿ, ಪ್ರೀತಿ, ಹಂಚಿಕೆ ಮತ್ತು ಸಹಾನುಭೂತಿಯಿಂದ ವ್ಯಾಪ್ತವಾದ ಸಮುದಾಯವನ್ನು ನಿರ್ಮಿಸೋಣ” ಎಂದರು.
ಧರ್ಮಪ್ರಾಂತ್ಯದ ವಿಕಾರ್ ಜನರಾಲ್ ವಂದನೀಯ ಫಾ ಮಾಣಿ, ವಂದನೀಯ ಫಾ ಕುರಿಯಾಕೋಸ್, ವಂದನೀಯ ಫಾ. ಥಾಮಸ್ ಮೊದಲಾದ ಧರ್ಮಗುರುಗಳು ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಭಗಿನಿಯರು ವಿಶ್ವಾಸಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

Related posts

ಎಂ.ಎಸ್ಸಿ ಸ್ನಾತಕೋತ್ತರ ಪರೀಕ್ಷೆ: ಅನಾಲಿಟಿಕಲ್‌ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಿಮಲ್ ನಿಲ್ಮಾ ರೊಡ್ರಿಗಸ್ ರವರಿಗೆ ಪ್ರಥಮ ರ್ಯಂಕ್

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಯಕ್ಷಭಾರತಿ ದಶಮಾನೋತ್ಸವ ಸಭಾ ಸಮಾರಂಭ ಮತ್ತು ಭಾರತ ಮಾತಾ ಪೂಜನ : ದಶಮಾನೋತ್ಸವ ಗೌರವ-ಯಕ್ಷಭಾರತಿ ಪ್ರಶಸ್ತಿ-ಸೇವಾ ಗೌರವ-ವಿದ್ಯಾರ್ಥಿ ವೇತನ ವಿತರಣೆ

Suddi Udaya

ಬೆಳ್ತಂಗಡಿ ನಗರ ನಿವಾಸಿ ದಿ| ನಾರಾಯಣ ರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಸುಮಿತ್ರ ರಾವ್ ನಿಧನ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.) , ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ

Suddi Udaya

ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ ನಲ್ಲಿ ಅಮೋಘ ದರಕಡಿತ ಮಾರಾಟ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Suddi Udaya
error: Content is protected !!