September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜಿನಲ್ಲಿ ನ್ಯೂಸ್ 18 ವತಿಯಿಂದ ವಿದ್ಯಾದೀಪ ವಿಶೇಷ ಕಾರ್ಯಕ್ರಮ

ಬೆಳ್ತಂಗಡಿ: ನಾಡಿನ ಪ್ರಸಿದ್ದ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ನ್ಯೂಸ್ 18 ವತಿಯಿಂದ ವಿದ್ಯಾದೀಪ ವಿಶೇಷ ಕಾರ್ಯಕ್ರಮವು ಎ 9ರಂದು ನಡೆಯಿತು.

ನ್ಯೂಸ್ 18 ಇದರ ಸಂಪಾದಕರಾದ ಹರಿಪ್ರಸಾದ್ ಎಐ ಮತ್ತು ಭವಿಷ್ಯದ ತಂತ್ರಜ್ಞಾನದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ದೊಡ್ಡ ಸಕ್ಸಸ್ ಪಡೆಯಬೇಕಾದರೆ ಅವಕಾಶಗಳನ್ನು ಸೃಷ್ಟಿ ಮಾಡಬೇಕು.ಅದಕ್ಕಾಗಿ ಬದ್ದತೆ ಮತ್ತು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು.ಎಕ್ಸೆಲ್ ವಿದ್ಯಾಸಂಸ್ಥೆ ಯು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತಿದೆ.ಶೈಕ್ಷಣಿಕ ಕ್ಷೇತ್ರದ ಚಯುವ ಸಾಧಕ ಸುಮಂತ್ ಕುಮಾರ್ ಜೈನ್ ಅವರ ದೂರದೃಷ್ಟಿ ಚಿಂತನೆಯಿಂದ ಎಕ್ಸೆಲ್ ಅದ್ಬುತವಾಗಿ ಬೆಳೆದಿದೆ ಎಂದರು.

ಸೈಬರ್ ಭದ್ರತಾ ತಜ್ಞರಾದ ಡಾ.ಅನಂತ್ ಪ್ರಭು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಮಾತನಾಡಿ ಜೀವನದಲ್ಲಿ ನಾವು ಹೇಗಿರಬೇಕು ಎಂಬ ಉದ್ದೇಶದಿಂದ ಜೀವನ ಪಾಠವನ್ನು ಎಕ್ಸೆಲ್ ನೀಡುತ್ತಿದೆ. ಬದುಕಿನಲ್ಲಿ ವ್ಯಕ್ತಿತ್ವ ಬಹಳ ಮುಖ್ಯ.ಹಾಗಾಗಿ ಈಗಿನ ಕಾಲದಲ್ಲಿ ನಿಜವಾದ ಶ್ರೀಮಂತರು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡವರು.ದೊಡ್ಡ ಕನಸನ್ನು ಕಾಣಬೇಕು.ಆ ಕನಸು ನನಸಾಗಲು ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ,ಡಾ.ಪ್ರಜ್ವಲ್ ಕುಮಾರ್ ,ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿಗೆ ಕ್ರೀಡಾ ಪ್ರಶಸ್ತಿ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ನ ವತಿಯಿಂದ ಮಾನವ ಸಂಬಂಧ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲಾ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಗುರುವಾಯನಕೆರೆ ವಿದ್ವತ್ ಕಾಲೇಜಿನಲ್ಲಿ ಕಿಚನಾಮಿಕ್ಸ್ ಸಡಗರ

Suddi Udaya
error: Content is protected !!