September 6, 2026
Uncategorized

ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ರಿಲ್ಸ್ ನ್ನು ಬಿಡುಗಡೆಗೊಳಿಸಿದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ

ಬೆಳ್ತಂಗಡಿ : ಪ್ರಣಿತ್ ರಾಜ್ ಫಿಲಂಸ್ ಬೆಳ್ತಂಗಡಿ ಚಿತ್ರಿಕರಿಸಿರುವ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ರಿಲ್ಸ್ ನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಗೌಡ ರವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಪ್ರತಿಯೊಬ್ಬ ಚಾಲಕನು ವಾಹನವನ್ನು ಚಲಾಯಿಸುವಾಗ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಪ್ಪಿಸಬಹುದು ಮದ್ಯಪಾನ ಮಾಡಿ ವಾಹನ ಚಲಾಯಿಸ ಬಾರದು, ಹೆಲ್ಮೆಟ್ ಧರಿಸಬೇಕು, ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸಬೇಕು ಎನ್ನುತ್ತಾ ಪ್ರಣಿತ್ ರಾಜ್ ಫಿಲಂಸ್ ತಂಡದವರು ರಸ್ತೆ ಸುರಕ್ಷತೆ ಬಗ್ಗೆ ಒಂದು ಒಳ್ಳೆಯ ರಿಲ್ಸ್ ಚಿತ್ರೀಕರಣವನ್ನು ಮಾಡಿರುತ್ತಾರೆ ಈ ರೀಲ್ಸ್ ಎಲ್ಲರಿಗೂ ಅರಿವು ಮೂಡಿಸುವಂತಾಗಲಿ, ಮುಂದೆಯೂ ಇವರಿಂದ ಒಳ್ಳೆಯ ರಿಲ್ಸ್ ಗಳು ಕಿರು ಚಿತ್ರಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.


ಕಲಾವಿದ ಬಿ.ಹೆಚ್ ರಾಜು ರವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬಿಸಿಲು ಮಳೆ ಲೆಕ್ಕಿಸದೆ ರಾತ್ರಿ ಹಗಲು ಎನ್ನದೆ ಸಮಯವನ್ನು ಲೆಕ್ಕಿಸದೆ ಕರ್ತವ್ಯವನ್ನು ನಿರ್ವಹಿಸುತ್ತಿರುವ ಸಂಚಾರಿ ಪೊಲೀಸರ ಸೇವೆಯನ್ನು ಶ್ಲಾಘೀಸುತ್ತ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಜನರಲ್ಲಿ ಅರಿವು ಮೂಡಿಸುವಂತಹ ರೀಲ್ಸ್ ಮಾಡಲಾಗಿದೆ ಇದರಿಂದ ಸಮಾಜಕ್ಕೆ ಉಪಯುಕ್ತವಾಗಲಿ ಎನ್ನುತ್ತಾ ಸಹಕರಿಸಿದ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ರಾದ ಕಿಶೋರ್ ಗೌಡ ಹಾಗೂ ಸಿಬ್ಬಂದಿಗಳು, ಚಲನಚಿತ್ರ ನಿರ್ದೇಶಕರಾದ ಕೃಷ್ಣ ಬೆಳ್ತಂಗಡಿ, ಕಲಾವಿದ ಶಿವಪ್ಪ ಬಿರುವ, ಬೆಳ್ತಂಗಡಿ ಗೌತಮ್ ಬೆಳ್ತಂಗಡಿ ರವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಣಿತ್ ರಾಜ್ ಫಿಲಂಸ್ ನ ಮುಖ್ಯಸ್ಥ ಪ್ರಣಿತ್ ರಾಜ್, ಹಾಗೂ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ರೀಲ್ಸನ್ನು ಇನ್‌ಸ್ಟಾಗ್ರಾಮ್ ಪ್ರಣಿತ್ ರಾಜ್ ಫಿಲಂಸ್ ಪೇಜ್ ನಲ್ಲಿ ವೀಕ್ಷಿಸಬಹುದು.

Related posts

ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಉಜಿರೆಯ ಸೃಷ್ಟಿ ಆಚಾರ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಜಾರಿಗೆಬೈಲು ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರ ಸಾವು

Suddi Udaya

ಸುದೇಮುಗೇರು ಅಂಗನವಾಡಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ 134ನೇ ಜನ್ಮದಿನಾಚರಣೆ

Suddi Udaya

ವಿಧಾನ ಪರಿಷತ್‌ನ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಭಾರಿ ಮತಗಳ ಅಂತರದಿಂದ ಗೆಲುವು

Suddi Udaya

ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಂಘಟಿತ ಶ್ರಮದಿಂದ ಕಾಂಗ್ರೆಸ್ ಗೆಲುವು: ಸಂದೀಪ್ ಎಸ್ ನೀರಲ್ಕೆ

Suddi Udaya
error: Content is protected !!