September 6, 2026
ಅಭಿನಂದನೆವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪಿಯುಸಿ ಫಲಿತಾಂಶ: ಕನ್ನಡದಲ್ಲಿ ಎಕ್ಸೆಲ್ ಕಾಲೇಜಿನ‌ 91 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಕೆ

ಬೆಳ್ತಂಗಡಿ: 2025-26 ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು 91 ವಿದ್ಯಾರ್ಥಿಗಳು ಗಳಿಸಿದ್ದಾರೆ. 1001 ವಿದ್ಯಾರ್ಥಿಗಳು ವಿಶೇಷ ದರ್ಜೆ ಪಡೆದಿರುತ್ತಾರೆ.

ಕಳೆದ ವರ್ಷ 81 ವಿದ್ಯಾರ್ಥಿಗಳು 100 ಅಂಕ ಗಳಿಸಿದ್ದರು.ವಿದ್ಯಾರ್ಥಿಗಳ ಈ ಸಾಧನೆಗೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ ಮತ್ತು ಡಾ. ಪ್ರಜ್ವಲ್ ರವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಕನ್ನಡ ವಿಭಾಗ ಮುಖ್ಯಸ್ಥರಾದ ಜಯರಾಮ ಸಂತಸ ವ್ಯಕ್ತ ಪಡಿಸಿದ್ದು,ರಾಜ್ಯದಲ್ಲೇ ಕನ್ನಡದಲ್ಲಿ ಗರಿಷ್ಠ 100ಕ್ಕೆ 100 ಅಂಕ ಪಡೆದ ಕಾಲೇಜುಗಳಲ್ಲಿ ಎಕ್ಸೆಲ್ ಪಿಯು ಕಾಲೇಜು ಅಭೂತಪೂರ್ವ ಸಾಧನೆ ತೋರಿದ್ದು ,ಇದಕ್ಕೆ ಕಾರಿಣಿಭೂತರಾದ ಅಧ್ಯಕ್ಷರು,ಪ್ರಾಂಶುಪಾಲರು ಹಾಗೂ ಮುಖ್ಯವಾಗಿ ನನ್ನ ಸಹೋದ್ಯೋಗಿ ಬಂಧುಗಳಾದ ಕನ್ನಡ ಉಪನ್ಯಾಸಕರಿಗೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Related posts

ಜ.16: ಬೆಳ್ತಂಗಡಿ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದೇವರ ಗುಡಿಗಳ ಶಿಲಾನ್ಯಾಸ

Suddi Udaya

ಶಿಶಿಲ : ರಸ್ತೆಗೆ ಬಿದ್ದ ಮರ , ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರ ತೆರವು

Suddi Udaya

ಧರ್ಮಸ್ಥಳ : ಕಲ್ಲೇರಿಯಲ್ಲಿ ಸುನಿಲ್ ಸಿಲ್ಕ್ ಸಾರೀಸ್ ಕಾರ್ಯನಿರ್ವಹಣೆ: ಮಹಿಳೆಯರಿಗಾಗಿ ವಿವಿಧ ಹೊಚ್ಚಹೊಸ ಸೀರೆಯ ಮಳಿಗೆ

Suddi Udaya

ಉಜಿರೆ ಎಸ್.ಡಿ.ಎಂ ಆಂ.ಮಾ. ಶಾಲೆಯಲ್ಲಿ ಕರಾಟೆ ಬೆಲ್ಟ್ ವಿತರಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Suddi Udaya
error: Content is protected !!