September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ

ಬೆಳ್ತಂಗಡಿ: ಲಯನ್ಸ್ ಜಿಲ್ಲಾ ಗವರ್ನರ್ ಲ. ಕುಡ್ಪಿ ಅರವಿಂದ ಶೆಣೈ ರವರು ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಎ.11ರಂದು ಅಧಿಕೃತ ಭೇಟಿ ನೀಡಿದರು.

ಅಧ್ಯಕ್ಷ ಮುರಳಿ ಬಲಿಪರ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ಇಂದಬೆಟ್ಟು ಗ್ರಾಮದ ಶ್ರವಣಗುಂಡದಲ್ಲಿ ನೂತನ ಪ್ರಯಾಣಿಕರ ತಂಗುದಾಣದ ಉದ್ಘಾಟನೆ, ಬೆದ್ರಬೆಟ್ಟು, ಪುತ್ರಬೈಲು ಹೊಕ್ಕಿಲದಲ್ಲಿ ನವೀಕೃತಗೊಂಡ ಪ್ರಯಾಣಿಕರ ತಂಗುದಾಣದ ಉದ್ಘಾಟನೆ, ಅಂಗನವಾಡಿ ಕೇಂದ್ರ ಎರ್ಮೆತ್ತೂಡಿ ಕರಂಬಾರು ಬಾಲವನಕ್ಕೆ ಶಂಕುಸ್ಥಾಪನೆ, ಖಾಸಗಿ ಪ್ರಾಥಮಿಕ ಶಾಲೆ ಸವಣಾಲು ಸೌಂದರೀಕರಣದ ಉದ್ಘಾಟನೆ, ಬಂಗಾಡಿಯಲ್ಲಿ ನೂತನವಾಗಿ ರಚನೆಗೊಳ್ಳುತ್ತಿರುವ ಸಭಾಂಗಣದ ವೀಕ್ಷಣೆ ಮಾಡಿದರು. ಲಯನ್ಸ್ ಸೇವಾಭವನದಲ್ಲಿ ಸಭಾ ಕಾರ್ಯಕ್ರಮವು ಜರುಗಿತು

ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲ. ಮರಳಿ ಬಲಿಪ ವಹಿಸಿದ್ದರು.

ಮುಖ್ಯ ಅತಿಥಿ ಜಿಲ್ಲಾ ರಾಜ್ಯಪಾಲ ಲ. ಕುಡ್ಪಿ ಅರವಿಂದ ಶೆಣ್ಣೆಯವರು ಬೆಳ್ತಂಗಡಿ ಲಯನ್ಸ್ ಕ್ಲಬ್ ನಡೆಸಿದ ಸೇವಾ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಸದಸ್ಯರ ಮೂಲಕ ವಿವಿಧ ಸೇವಾ ಚಟುವಟಕೆಗಳನ್ನು ಹಮ್ಮಿಕೊಳ್ಳಲಾಯಿತು ಲಯನ್ ಹೇಮಂತ ರಾವ್ ಎರ್ಡೂರು ಗುರುವಾಯನಕೆರೆ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಶಿಕ್ಷಕಿಯ ನೇತನಕ್ಕೆ ರೂ. 1.20 ಲಕ್ಷ ನೀಡಿದರು. ಎರಡು ವಿದ್ಯಾರ್ಥಿಗಳಿಗೆ ರೂ 20 ಸಾವಿರ ವಿದ್ಯಾಭ್ಯಾಸಕ್ಕೆ ನೀಡಿದರು. ಲ. ಉಮೇಶ್ ಶೆಟ್ಟಿಯವರು 2.50 ಲಕ್ಷ ಮೌಲ್ಯದ ಡೆಸ್ಕ್ ಬೆಂಚುಗಳನ್ನು ಶಾಲೆಗಳಿಗೆ ನೀಡಿದರು.

ಲ. ಸತೀಶ್ ಆಚಾರ್ಯ ಕಿಲ್ಲೂರು ಸರಕಾರಿ ಪ್ರಾಥಮಿಕ ಶಾಲೆಗೆ ಪೀಠೋಪಕರಣವನ್ನು ಒದಗಿಸಿದರು.

ಈ ಸಂದರ್ಭದಲ್ಲಿ ಲಯನ್ ಕ್ಲಬ್ ನ ಸ್ಥಾಪಕರ ದಿನವನ್ನು ಆಚರಿಸಲಾಯಿತು. ಸ್ಥಾಪಕ ಸದಸ್ಯ ಲಯನ್ ವಿಶ್ವನಾಥ ನಾಯಕ್ ದೀಪ ಬೆಳಗಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಉಮೇಶ್ ಶೆಟ್ಟಿ, ಪ್ರತಿಭಾ ಹೆಬ್ಬಾರ್, ನಿಕಟಪೂರ್ವ ಅಧ್ಯಕ್ಷ ದೇವದಾಸ ಶೆಟ್ಟಿ ಹಿಬರೋಡಿ ಹಾಗೂ ಪ್ರಾಂತ್ಯದ ವಿವಿಧ ಲಯನ್ಸ್ ಕ್ಲಬ್ ಗಳಿಂದ ಆಗಮಿಸಿದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಅಧ್ಯಕ್ಷ ಮುರಳಿ ಬಲಿಪ ಸ್ವಾಗತಿಸಿದರು. ವಸಂತ ಶೆಟ್ಟಿ ಶ್ರದ್ಧಾ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ರಾಜು ಶೆಟ್ಟಿ ರಾಜ್ಯಪಾಲರ ಪರಿಚಯ ಮಾಡಿದರು. ಉಪಾಧ್ಯಕ್ಷ ರಘುರಾಮ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಲಿಯೋ ಅಧ್ಯಕ್ಷೆ ಭಾಷಿಣಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ಧನ್ಯವಾದ ಸಲ್ಲಿಸಿದರು. ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮ ನಿರೂಪಿಸಿದರು.

Related posts

ನಡ: ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ನಿಧನ

Suddi Udaya

ಜಂಇಯ್ಯತುಲ್ ಉಲಮಾ ಶತಮಾನೋತ್ಸವ, ಗುರುವಾಯನಕೆರೆ ಮಸ್ಜಿದ್ ನಲ್ಲಿ ಧ್ವಜಾರೋಹಣ

Suddi Udaya

ಮಡಂತ್ಯಾರು ನೂತನ್ ಕ್ಲೋತ್ ಸೆಂಟರ್‌ನಲ್ಲಿ ಅಮೃತ ಮಹೋತ್ಸವ ಸಂಭ್ರಮ

Suddi Udaya

ಮಂಗಳೂರಿನಲ್ಲಿ 3 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

Suddi Udaya

ನಾಲ್ಕೂರು: ಪ್ರಗತಿಪರ ಕೃಷಿಕ ಬಾಲಕೃಷ್ಣ ಶೆಟ್ಟಿ ಕುರೆಲ್ಯ ನಿಧನ

Suddi Udaya

ಆ.1: ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ತಾಲೂಕಿನ 5000 ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya
error: Content is protected !!