September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ವಾರ್ಷಿಕ ವಿಶೇಷ ಶಿಬಿರ

ಮಡಂತ್ಯಾರು : ಕಣಿಯೂರು ಕಸಬ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.9ರಿಂದ ಎ.15ರ ತನಕ
ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ಎ.9.ಶಾಲಾ ರಂಗಮಂದಿರದಲ್ಲಿ ಉದ್ಘಾಟನೆ ನಡೆಯಿತು.

ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು, ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ವಾರ್ಷಿಕ ವಿಶೇಷ ಶಿಬಿರ 2025-26 ಸಾಲಿನ ವಾರ್ಷಿಕ ವಿಶೇಷ ಶಿಬಿರ ಎ.9 ರಿಂದ ಎ.15ರ ವರೆಗೆ ಕಣಿಯೂರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಶಿಕ್ಷಣ ಕಲಿಕೆಯೊಂದಿಗೆ ಮುಂದಾಳತ್ವ ವಹಿಸುವ ಅನುಭವಗಳನ್ನು ಪಡೆಯಲು ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾವು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ನಡೆಸಲು ಇಂತಹ ಶಿಬಿರದಲ್ಲಿ ಭಾಗವಹಿಸ ಬೇಕು. ವಿವಿಧ ವಿಷಯಗಳ ತರಬೇತಿಯನ್ನು ಪಡೆಯಲು ತಮ್ಮನ್ನು ತಾವು ತೊಡಗಿಸಿ ಕೊಂಡಾಗ ಮತ್ತು ಮೊಬೈಲ್ ಬಳಕೆಯನ್ನು ಒಳ್ಳೆಯ ವಿಷಯಕ್ಕೆ ಮಾತ್ರ ಬಳಸಿಕೊಂಡು ಕಾಲೇಜು ಶಿಕ್ಷಣದ ಜೊತೆಯಲ್ಲಿ ಯುವ ಪೀಳಿಗೆ ಉತ್ತಮ ಪ್ರಜೆಯಾಗಳು ಸಾಧ್ಯ ಎಂದು ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್ ಚಾಕೋ ಕಾರ್ಯಕ್ರಮ
ಉದ್ಘಾಟನೆ ನೆರವೇರಿಸಿ ಮಾತಾನಾಡಿದರು.

ನಾಯಕತ್ವದ ಗುಣಗಳನ್ನು ಹೊಂದಿರುವ ವ್ಯಕ್ತಿಗಳು ಎಲ್ಲಾ ರಂಗದಲ್ಲಿ ಸಾಧನೆ ಮಾಡಲು ವಿಶೇಷ ಶಿಬಿರದಲ್ಲಿ ತರಬೇತಿ ಪಡೆದು ಕೊಂಡಾಗ ಹಾಗೂ ದುಶ್ಚಟಗಳಿಂದ ದೂರವಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶ್ರೀ ಎಸ್. ಹೆಗ್ಡೆ ಕಣಿಯೂರು ಶುಭ ಹಾರೈಸಿದರು.

ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಶಿಕ್ಷಣ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದೆ.
ಶಿಬಿರದಲ್ಲಿ ಭಾಗವಹಿಸುವ ಜೊತೆಯಲ್ಲಿ ಶಿಕ್ಷಣ ಮತ್ತು ನಾಯಕತ್ವ ವಹಿಸುವ ಗುಣಗಳನ್ನು ಹೊಂದಲು ಸಾಧ್ಯ,ಹಾಗೂ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸ ಬೇಕು ಎಂದು ಪುಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಮಾಧವ ಅಧ್ಯಕ್ಷತೆ ವಹಿಸಿ ಹೇಳಿದರು.

ಕಣಿಯೂರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕರಾದ ಕಾಂತರಾಜು ಟಿ.ಕೆ.,ಕಣಿಯೂರು ಗುತ್ತು ಸುದರ್ಶನ್ ಹೆಗ್ಡೆ, ಕಣಿಯೂರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಬಾಲಕೃಷ್ಣ ಗೌಡ ಕಣಿಯೂರು, ಮಾಜಿ ಅಧ್ಯಕ್ಷ ಜಾಕಿರ್ ಹುಸೇನ್ ಕಣಿಯೂರು, ಬಾಬು ನಾಯ್ಕ ಮೈಪಾಜೆ ಕೃಷಿಕರು, ಪುಂಜಾಲಕಟ್ಟೆ ಸ.ಪ.ಪೂ ಕಾಲೇಜು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಸ.ಪ್ರ.ದ. ಕಾಲೇಜು, ಪುಂಜಾಲಕಟ್ಟೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್, ರಾಷ್ಟ್ರಗಳ ಸೇವಾ ಯೋಜನಾಧಿಕಾರಿ ಘಟಕ -1., ಡಾ.ಕೀರ್ತಿರಾಜ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಘಟಕ- 2.ಡಾ.ಗೀತಾ ಎಂ. ಎಲ್. ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕರಾದ ರಾಜೇಶ್, ಅಕ್ಷಯ್, ಶಮಾ, ಕಾವ್ಯ ಹಾಗೂ 65 ಶಿಬಿರಾರ್ಥಿ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Related posts

ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ಧಿ ಡಿ. ಬಿ. ಚಂದ್ರೇಗೌಡ ನಿಧನಕ್ಕೆ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಕೊಕ್ಕಡ ಕಪಿಲಾ ಜೇಸಿಗೆ ವಲಯ ಉಪಾಧ್ಯಕ್ಷರ ಭೇಟಿ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿಂದ ದಿ. ಪಿ. ವೆಂಕಟರಮಣ ರವರಿಗೆ ನುಡಿನಮನ

Suddi Udaya

ಬಿಜೆಪಿ ದ.ಕ. ಜಿಲ್ಲಾ ಪ್ರಕೋಷ್ಠದ ಸಹಸಂಚಾಲಕರಾಗಿ ರಕ್ಷಿತ್ ಶೆಟ್ಟಿ ಪಣಿಕ್ಕರ ಆಯ್ಕೆ

Suddi Udaya

ರಕ್ಷಿತ್ ಶಿವರಾಂ ಅವರ ಮನವಿಗೆ ಅಧಿಕಾರಿಗಳ ಸ್ಪಂದನೆ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ

Suddi Udaya

ಹೊಕ್ಕಾಡಿಗೋಳಿ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya
error: Content is protected !!