September 6, 2026
ಅಭಿನಂದನೆಗ್ರಾಮಾಂತರ ಸುದ್ದಿವರದಿ

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ವಾರ್ಷಿಕೋತ್ಸವ-ಶಿಶು ಸಂಭ್ರಮ

ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರ ಶಿವಾಜಿನಗರ ಇದರ ವಾರ್ಷಿಕೋತ್ಸವ ಹಾಗೂ ಶಿಶು ಸಂಭ್ರಮ ಕಾರ್ಯಕ್ರಮವು ಏ.೧೧ ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡುತ್ತಾ ಪ್ರಪಂಚದ ದೇವರ ಕೋಣೆ ಭಾರತ ದೇಶವಾದರೆ ಭಾರತದ ದೇವರ ಕೋಣೆ ನಮ್ಮ ತುಳುನಾಡು. ಈ ತುಳುನಾಡಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಹೇಳಿಕೊಡುವ ನಮ್ಮ ಶಿಶುಮಂದಿರಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಶಿವಪ್ರಸಾದ್ ಮಲೆಬೆಟ್ಟು ರವರು ಬೌಧಿಕ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಸ್ಟೀಲ್ ಇಂಡಸ್ಟ್ರಿಸ್ ನ ಮಾಲಕ ವಿನಯಚಂದ್ರ, ರಕ್ಷಿತಾ ಶಿವಪ್ರಸಾದ್ ಶೆಟ್ಟಿ ಶುಭ ಹಾರೈಸಿದರು. ಶಿಶುಮಂದಿರದ ಅಧ್ಯಕ್ಷೆ ಇಂದುಮತಿ ಅವರು, ಶಿಶು ಮಂದಿರದ ಅಭಿವೃದ್ಧಿಗೆ ಇನ್ನಷ್ಟು ವಿಸ್ತರಿತ ಕಟ್ಟಡ ಹೊರಾಂಗಣ ಆಟಗಳು, ಕೆಲವೊಂದು ಮೂಲಭೂತ ಸೌಕರ್ಯಗಳ ಅಗತ್ಯವಿದ್ದು ಸಹಕಾರ ಕೋರಿದರು. ಮಾತೃ ಮಂಡಳಿ ಅಧ್ಯಕ್ಷೆ ಮಮಿತಾ ಸುಧೀರ್ ಮಾತನಾಡಿ, ಮನೆಯಲ್ಲಿ ನಾವು ಮಕ್ಕಳಿಗೆ ಹೇಳಿಕೊಡುವಂತೆ ಅತ್ಯಂತ ಪ್ರೀತಿ ಮಮತೆಯಿಂದ ಮಾತಾಜಿಗಳು ಇಲ್ಲಿ ಎಲ್ಲಾ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿಶುಮಂದಿರದ ಹಳೆ ವಿದ್ಯಾರ್ಥಿಗಳಾದ ಕ್ರೀಡಾ ಕ್ಷೇತ್ರದಲ್ಲಿ ಸಾಧಾರಣ ಮಾಡಿದ ಗೌತಮ್, ಪಿಯುಸಿಯಲ್ಲಿ ರಾಜ್ಯಕ್ಕೆ ೭ನೇ ರ‍್ಯಾಂಕ್ ಪಡೆದ ಸಂಜನಾ ಪೈ,ಶಿಶುಮಂದಿರದಲ್ಲಿ ಮೂರು ವರ್ಷಗಳ ಕಾಲ ಮಾತಾಜಿಯಾಗಿ ಸೇವೆ ಸಲ್ಲಿಸಿದ ಅಶ್ವಿನಿ ಹಾಗೂ ಮಕ್ಕಳಿಗೆ ಉಚಿತವಾಗಿ ನೃತ್ಯಭ್ಯಾಸವನ್ನು ಮಾಡಿಸಿದ ವಿನಿತಾ ಜೋಗಿತಾಯ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸನ್ಮಾನಿತರ ಪರಿಚಯವನ್ನು ರಚನಾ ಕಾಶಿನಾಥ್ ಮತ್ತು ರತ್ನಾಕರ ರಾವ್ ಓದಿದರು. ಶಿಶು ಮಂದಿರದ ಮಕ್ಕಳ ಪೋಷಕರಲ್ಲಿ ಓರ್ವರಾದ ಪುರಂದರ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಶುಮಂದಿರದ ಪುಟಾಣಿಗಳಿಗೆ ಹಾಗೂ ಮಾತೃ ಮಂಡಳಿಯ ಸದಸ್ಯರಿಗೆ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ, ಮಾಡಲಾಯಿತು. ಸಭಾ ಕಾರ್ಯಕ್ರಮದ ಮೊದಲು ನಡೆದ ಶಿಶು ಮಂದಿರದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ಲೋಕ, ಇಂದಿನ ಪಂಚಾAಗ, ಮಂಕುತಿಮ್ಮನ ಕಗ್ಗ, ಕುಣಿತ ಭಜನೆ, ಕಬೀರನ ದೋಹೆ ಇತ್ಯಾದಿಗಳನ್ನು ಮಕ್ಕಳು ನಡೆಸಿಕೊಟ್ಟರು.

ಈ ಕಾರ್ಯಕ್ರಮವನ್ನು ಮಾತೃ ಮಂಡಳಿಯ ಶ್ರೇಯ ಇವರು ನಡೆಸಿಕೊಟ್ಟರು. ಶಿಶುಮಂದಿರದ ಪುಟಾಣಿಗಳು ಬಾಲ ಗೋಕುಲದ ಮಕ್ಕಳು, ಮಾತಾಜಿಯವರು ಹಾಗೂ ಮಾತೃ ಮಂಡಳಿ ಸದಸ್ಯರಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಶುಮಂದಿರದ ಕೋಶಾಧಿಕಾರಿ ಪ್ರಿಯದರ್ಶಿನಿ ಸ್ವಾಗತಿಸಿದರು. ರಾಮಚಂದ್ರ ಶೆಟ್ಟಿ ವಂದಿಸಿದರು. ಸೋಮಶೇಖರ್ ದೇವಸ್ಯ, ವಸಂತ ಗೌಡ, ಬಾಲಕೃಷ್ಣ ಆಚಾರ್ಯ, ಹೇಮಂತ ಶೆಟ್ಟಿ ದೇವಸ್ಯ, ಮಕ್ಕಳ ಪೋಷಕರು, ಮಾತಾಜಿಗಳಾದ ರಮ್ಯಾ, ಜಯಶ್ರೀ, ಅಶ್ವಿನಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಮಂಗಳ ರತ್ನಾಕರ ಮತ್ತು ಸುಧಾಮಣಿ ಆರ್ ನಿರೂಪಿಸಿದರು.

Related posts

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಶಸ್ವಿ ದ್ವಿತೀಯ ಸ್ಥಾನ

Suddi Udaya

ಕೊಯ್ಯೂರು ಸರಕಾರಿ ಶಾಲೆಯಲ್ಲಿ ಯಕ್ಷ ನಾಟ್ಯ ತರಬೇತಿ ಉದ್ಘಾಟನೆ

Suddi Udaya

ನಕಲಿ ಸಹಿ ಮಾಡಿ ಅಕ್ಷರ ದಾಸೋಹ ಮತ್ತು ಎಸ್.ಎಸ್.ಎ. ಖಾತೆಯ ಹಣ ಡ್ರಾ; ಮುಖ್ಯ ಶಿಕ್ಷಕಿಯ ವಿರುದ್ಧ ಎಸ್.ಡಿ.ಎಂ.ಸಿ ಅಧ್ಯಕ್ಷೆ ದೂರು: ಪೋಜ೯ರಿ ಸಹಿ ಮಾಡಿ ಶಾಲೆಯ ಖಾತೆಯಿಂದ ಯಾವತ್ತೂ ಹಣವನ್ನು ಡ್ರಾ ಮಾಡಿರುವುದಿಲ್ಲ : ಮುಖ್ಯ ಶಿಕ್ಷಕಿ ಸ್ಪಷ್ಟನೆ

Suddi Udaya

ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಜೂ.15-21: ಬಳಂಜದಲ್ಲಿ ಉಚಿತ ಯೋಗ ಶಿಬಿರ- ಸಾರ್ವಜನಿಕರಿಗೆ ಮುಕ್ತ ಅವಕಾಶ

Suddi Udaya

ಕಳಿಯ ಗ್ರಾಮ ಪಂಚಾಯತ್ ಅರಿವು ಕೇಂದ್ರದ ಸಭೆ

Suddi Udaya
error: Content is protected !!