September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಸ್ತೆ ಬದಿ ತ್ಯಾಜ ಎಸೆದ ನಿವೃತ್ತ ಸರ್ಕಾರಿ ಅಧಿಕಾರಿಗೆ ದಂಡದ ರುಚಿ ತೋರಿಸಿದ ನಿಡ್ಲೆ ಗ್ರಾ.ಪಂ.

ಬೆಳ್ತಂಗಡಿ: ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ನಿವೃತ್ತ ಸರ್ಕಾರಿ ಅಧಿಕಾರಿಗೆ ದಂಡ ರುಚಿ ತೋರಿಸಿದ ಘಟನೆ ನಿಡ್ಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆದಿದೆ.

ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎ.4ರಂದು ಸ್ವಚ್ಛತಾ ಶನಿವಾರ ಕಾರ್ಯಕ್ರಮದ ಅಂಗವಾಗಿ ಕುದ್ರಾಯದಿಂದ ಬರೆಂಗಾಯ ಸಾರ್ವಜನಿಕರ ರಸ್ತೆಯ ಬದಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡುವಾಗ ಕೈರೋಳಿ ಪ್ರದೇಶದ ರಸ್ತೆಯ ಬದಿಯಲ್ಲಿ ನಿಡ್ಲೆ ಗ್ರಾಮದ ಕಲ್ಲಿಮಾರು ನಿವಾಸಿ ವೆಂಕಪ್ಪ ಗೌಡ ಎಂಬುವರು ತಮ್ಮ ಮನೆಯಿಂದ ಹಳೆಯ ತ್ಯಾಜ್ಯ ವಸ್ತುಗಳನ್ನು ತಂದು ಎಸೆದಿರುರುವುದು ತ್ಯಾಜ್ಯ ವಸ್ತುಗಳಲ್ಲಿ ಸಿಕ್ಕಿರುವ ದಾಖಲೆಗಳಿಂದ ಕಂಡು ಬಂದಿರುತ್ತದೆ. ತಾವು ಓರ್ವ ಜವಾಬ್ದಾರಿಯುವ ಗ್ರಾಮಸ್ಥರಾಗಿ ಅಲ್ಲದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ನೀವು ಸ್ವಚ್ಚತೆಯ ಬಗ್ಗೆ ಹೆಚ್ಚಿನ ಕಾಳಜಿಯಯನ್ನು ವಹಿಸಬೇಕಾಗಿತ್ತು. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಮನೆಯಲ್ಲಿನ ಹಳೆಯ ತ್ಯಾಜ್ಯಗಳನ್ನು ಎಸಗಿದ ಕಾರಣ ನಿಡ್ಲೆ ಗ್ರಾಮ ಪಂಚಾಯತ್ 1,035ರೂ.ನಂತೆ ದಂಡ ವಿಧಿಸಿ ಪಂಚಾಯತ್ ನೋಟಿಸ್ ರವಾನೆಗೊಳಿಸಿದೆ.

Related posts

ಮಾ.9 : ಬೆಳ್ತಂಗಡಿಯಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಎ.10-17,ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಹಾಗೂ‌ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ

Suddi Udaya

ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

Suddi Udaya

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya
error: Content is protected !!