26.9 C
ಪುತ್ತೂರು, ಬೆಳ್ತಂಗಡಿ
April 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅತ್ಯುತ್ತಮ ಸಾಧನೆ-ಪ್ರಸಕ್ತ ಸಾಲಿನಲ್ಲಿ ರೂ 326 ಕೋಟಿ ಠೇವಣಿ,ರೂ.269 ಕೋಟಿ ಸಾಲ,ರೂ.70 ಕೋಟಿ ಹೂಡಿಕೆ,ರೂ.5.85 ಕೋಟಿ ಲಾಭ

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘವು ಅತ್ಯುತ್ತಮ ಸಾಧನೆಯಿಂದ “ನಿಮ್ಮ ಸ್ಪೂರ್ತಿ ನಮ್ಮ ಉತ್ಕೃಷ್ಟ ಸೇವೆ” ಎನ್ನುವ ಧೈಯವಾಕ್ಯದೊಂದಿಗೆ ಸಹಕಾರ ಕ್ಷೇತ್ರದಲ್ಲಿ ಕಳೆದ 17 ವರ್ಷಗಳ ಅತ್ಯಲ್ಪ ಅವಧಿಯಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ನಮ್ಮ ಸಹಕಾರ ಸಂಘವನ್ನು ಕಟ್ಟಿ ಬೆಳೆಸಿದ ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದ ಸಂಘದ ಮಾಜಿ ಅಧ್ಯಕ್ಷರಾಗಿದ್ದ ದಿ. ಎನ್.ಪದ್ಮನಾಭ ಮಾಣಿಂಜ ಹಾಗೂ ಸಂಘದ ಮುಖ್ಯ ಪ್ರವರ್ತಕರಾಗಿದ್ದ ದಿ. ಕೆ.ವಸಂತ ಬಂಗೇರ ಮತ್ತು ಸ್ಥಾಪಕ ಅಧ್ಯಕ್ಷರಾದ ದಿ. ಕೆ.ಜಿ.ಬಂಗೇರ ಇವರ ಸೇವೆಯನ್ನು ಸ್ಮರಿಸುತ್ತೇವೆ. ದ.ಕ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯನ್ನು ಹೊಂದಿರುವ ನಮ್ಮ ಸಂಸ್ಥೆಯು ಒಟ್ಟು 27 ಶಾಖೆಗಳನ್ನು ಹೊಂದಿರುತ್ತದೆ. ಮುಂದಿನ ದಿನಗಳಲ್ಲಿ ಗುರುಪುರ-ಕೈಕಂಬ, ಬೆಳ್ಳಾರೆ ಮತ್ತು ಕುತ್ತಾರ್‌ಪದವು ಇಲ್ಲಿ ಹೊಸ ಶಾಖೆಗಳು ಶುಭಾರಂಭಗೊಳ್ಳಲಿದೆ ಎಂದು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ ಹೇಳಿದರು.

ಅವರು ಎ 21ರಂದು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಂತ್ರಜ್ಞಾನದಲ್ಲಿ ಅಭಿವೃದ್ಧಿಯನ್ನು ಹೊಂದುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್, ತನ್ನದೇ ಆದ IFSC Code ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯೊಂದಿಗೆ ಸದಸ್ಯರಿಗೆ ಅತ್ಯುತ್ತಮವಾದ ತಂತ್ರಾಜ್ಞಾನದೊಂದಿಗೆ ಬ್ಯಾಂಕಿಂಗ್ ಕ್ಷೇತ್ರದ ಎಲ್ಲಾ ಸೇವೆಯನ್ನು ನೀಡಲಾಗುತ್ತಿದೆ ಎಂದರು.

ಮುಖ್ಯವಾಗಿ ಸಂಘದ ಸಾಲಗಾರ ಸದಸ್ಯರು ಮರಣಹೊಂದಿದರೆ ಅಂತಹ ಸದಸ್ಯನ ಕಷ್ಟಕ್ಕೆ ಸ್ಪಂದಿಸಿ ಶ್ರೀ ಗುರು ಸಾಲಗಾರರ ಮರಣ ನಿದಿಯಿಂದ ಒಟ್ಟು 119 ಜನಕ್ಕೆ ರೂ. 88,18,140/- ಮೊತ್ತದ ಮರಣ ನಿಧಿಯನ್ನು ನೀಡಿ ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಸಾಧನೆಗೆ ಪೂರಕವಾಗಿ 2023ರಲ್ಲಿ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತವಾಗಿ 9 ವರ್ಷಗಳಿಂದ ಸಾಧನಾ ಪ್ರಶಸ್ತಿ, ಹಾಗೂ ಇನ್ನಿತರ ಹಲವಾರು ಪ್ರಶಸ್ತಿಗಳನ್ನು ಸಂಘವು ಪಡೆದುಕೊಂಡಿರುವುದು ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಪ್ರತಿ ವರ್ಷದಂತೆ ಕಳೆದ ವರ್ಷವೂ ಆಯ್ದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸಂಘದ ವತಿಯಿಂದ ಭರಿಸಲಾಗಿದೆ. ಶ್ರೀ ಗುರುಕೃಪಾ ಎಜುಕೇಶನ್ ಟ್ರಸ್ಟ್ ಬಲ್ಲೊಟ್ಟು ಇಲ್ಲಿಗೆ ರೂ.2 ಲಕ್ಷ ವಿದ್ಯಾನಿಧಿ ನೀಡಲಾಗಿರುತ್ತದೆ. ಈ ಯೋಜನೆಯು ನಿರಂತರವಾಗಿ ಮುಂದುವರಿಯುವುದು. ಈ ಆರ್ಥಿಕ ವರ್ಷದಲ್ಲಿ ಅತ್ಯಂತ ಬಡಕುಟುಂಬದ ಅರ್ಹ ಫಲಾನುಭವಿಯನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಸಂಸ್ಥೆಯು ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ತರಗತಿ ಪಡೆಯುತ್ತಿರುವ ಸಹಕಾರ ಸಂಘ ದುಡಿಯುವ ಬಂಡವಾಳದಲ್ಲಿ ನಿರಂತರ ಪ್ರಗತಿ ಸಾಧಿಸಿದೆ.34,000 ಸಾವಿರಕ್ಕೂ ಮಿಕ್ಕಿ ಸದಸ್ಯ ಬಲವಿದೆ.ರೂ.326 ಕೋಟಿ ಠೇವಣಿ,ರೂ..269 ಕೋಟಿ ಸಾಲ, ರೂ.70 ಕೋಟಿ ಹೂಡಿಕೆ,ರೂ.5 ಕೋಟಿ 85 ಲಕ್ಷ ನಿವ್ವಳ ಲಾಭ,108 ಮಂದಿ ನುರಿತ ಸಿಬ್ಬಂದಿ ವರ್ಗ,ಉಡುಪಿ, ದ.ಕ ಜಿಲ್ಲೆಯಾದ್ಯಂತ 27 ಶಾಖೆಗಳು,ಸಂಪೂರ್ಣ ಗಣಕೀಕೃತ ಸಂಸ್ಥೆ-ಕೋರ್ ಬ್ಯಾಂಕಿಂಗ್ ವ್ಯವಸ್ಥೆ, ಎಲ್ಲಾ ಶಾಖೆಗಳಲ್ಲೂ ಸಿ.ಸಿ ಕ್ಯಾಮರಾ, ಅಲಾರಂ, ಸೈರನ್ ಮತ್ತು ಭದ್ರತಾ ಕೊಠಡಿಯೊಂದಿಗೆ ಭದ್ರತೆಗೆ ಹೆಚ್ಚಿನ ಪ್ರಾಶಸ್ತ್ರ,ಕ್ರಿಯಾಶೀಲ ನಿರ್ದೇಶಕರು,ಶೀಘ್ರದಲ್ಲಿ ಸಾಲ ಮಂಜೂರಾತಿ,ಕೃಷಿಯೇತರ ಎಲ್ಲಾ ತರದ ಸಾಲ ಸೌಲಭ್ಯಗಳು,ಎಎಂಎಸ್ ನ ಮೂಲಕ ಮಾಹಿತಿ,ಶ್ರೀ ಗುರು ಸಾಲಗಾರರ ಮರಣ ನಿಧಿ. ಆಕರ್ಷಕ ಠೇವಣಿ ಯೋಜನೆಗಳು ಸೇವಾ ಸೌಲಭ್ಯವಿದೆ ಎಂದರು.

ಸಂಸ್ಥೆಯಲ್ಲಿ ಈ ಅತೀ ಶೀಘ್ರದಲ್ಲಿ ಚಿನ್ನಾಭರಣ ಸಾಲ,ಈ-ಸ್ಟಾಂಪಿಂಗ್ ಸೌಲಭ್ಯ,ಆಕರ್ಷಕ ಬಡ್ಡಿದರದಲ್ಲಿ ಠೇವಣಿಗಳ ಸ್ವೀಕಾರ,ಪಿಂಚಣಿ, ವಿದ್ಯಾಭ್ಯಾಸ ಹಾಗೂ ಹೆಣ್ಮಕ್ಕಳ ಮದುವೆಗೆ ಸಹಕಾರ ನೀಡುವಂತಹ ಆಕರ್ಷಕ ಠೇವಣಿ ಯೋಜನೆಗಳು,ಹಿರಿಯ ನಾಗರೀಕರು, ವಿಧವೆಯರು, ದಿವ್ಯಾಂಗರು ಹಾಗೂ ಸಂಘ ಸಂಸ್ಥೆಗಳಿಗೆ ಶೇಕಡಾ 0.5% ಹೆಚ್ಚುವರಿ ಬಡ್ಡಿ ಈ ದೇಶದಾದ್ಯಂತ ಪಾವತಿಯಾಗುವ ಮಲ್ಟಿಸಿಟಿ ಚೆಕ್/ ಡಿ.ಡಿ ಸೌಲಭ್ಯ WESTERN UNION, Xpress Money & Ria Money Transfer, ವರ್ಗಾವಣೆ ಸೌಲಭ್ಯ, RTGS / NEFT ಸೌಲಭ್ಯ, ಗ್ರಾಹಕರಿಗೆ ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವಿದೆ ಎಂದರು.

ಇಷ್ಟೋ-ಟೋಕಿಯೋ ವಿಮಾ ಸೌಲಭ್ಯ, ಪಹಣಿಪತ್ರ (ಆರ್.ಟಿ.ಸಿ), IFSC CODE ಮುಖಾಂತರ ಉಳಿತಾಯ ಖಾತೆಗೆ ನೇರವಾಗಿ ಹಣ ವರ್ಗಾವಣೆ ಲಭ್ಯವಿದೆ ಎಂದರು.

ಸಂಘಕ್ಕೆ ಸಂದ ಪ್ರಶಸ್ತಿಗಳು: ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಸಹಕಾರ ಸಂಘ,2023ರಲ್ಲಿ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 9 ವರ್ಷಗಳಲ್ಲಿ ಸಾಧನಾ ಶ್ರೀ ಪ್ರಶಸ್ತಿ, 2015-16 ನೇ ಸಾಲಿನಲ್ಲಿ ದ.ಕ ಜಿಲ್ಲೆಯಲ್ಲಿ ಈ ಸ್ಟಾಂಪಿಂಗ್ ವಿತರಣೆಯಲ್ಲಿ ದ್ವಿತೀಯ ಸ್ಥಾನದ ಗೌರವ,ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದಿಂದ ಸಾಧನಾ ಪ್ರಶಸ್ತಿ,ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ವತಿಯಿಂದ ಪ್ರತಿಷ್ಟಿತ ಸಾಧನಾ ಶ್ರೇಷ್ಠ ಪ್ರಶಸ್ತಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯಿಂದ ಬ್ರಹ್ಮಶ್ರೀ ಸಹಕಾರ ಸಾಧನಾ ಶ್ರೀ ಪ್ರಶಸ್ತಿ,
ಜೆಸಿಐ ಬೆಳ್ತಂಗಡಿಯಿಂದ ಸೇವಾಶ್ರೀ ಪ್ರಶಸ್ತಿ,ಮೂಲ್ಕಿ ಅರಮನೆಯಿಂದ ಅರಸು ಪ್ರಶಸ್ತಿ ಲಭಿಸಿದೆ ಎಂದರು.

ಸಂಸ್ಥೆಯ ಇತರ ಸೇವೆಗಳು: ಸಂಘದ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಲಭ್ಯವಿರಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನಮ್ಮ ಸಂಸ್ಥೆಯಲ್ಲಿ ಅಳವಡಿಸಿಕೊಂಡಿರುತ್ತೇವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಬೆಳ್ತಂಗಡಿ, ಕಲ್ಲಡ್ಕ, ಬೆಳುವಾಯಿ, ಬಜಗೋಳಿ, ಕುಪ್ಪೆಪದವು ಮತ್ತು ಅಜೆಕಾರು ಶಾಖೆಗಳಲ್ಲಿ ಈ ಸ್ಟಾಂಪಿಂಗ್ ಮತ್ತು ಬೆಳ್ತಂಗಡಿ ಮತ್ತು ಹಳೆಯಂಗಡಿ ಶಾಖೆಗಳಲ್ಲಿ ಸಾರ್ವಜನಿಕರಿಗೆ ಸೇಫ್ ಲಾಕರ್ ವ್ಯವಸ್ಥೆ, ಎಲ್ಲಾ ಶಾಖೆಗಳಲ್ಲಿ Western Union, Xpress Money 2 Ria Money Transfer , ಮೂಲಕ ಹಣ ವರ್ಗಾವಣೆ RTGS/NEFT, ಇಷ್ಟೋ-ಟೋಕಿಯೋ ವಾಹನ ವಿಮಾ ಸೌಲಭ್ಯ, ಪಹಣಿಪತ್ರ ಪ್ರಸ್ತುತ Host To Host ಮೂಲಕ ಸಂಘದ ತಂತ್ರಾಂಶದಿಂದಲೇ ಹಣ ವರ್ಗಾವಣೆ ಮಾಡುವ ವ್ಯವಸ್ಥೆಯೊಂದಿಗೆ ಸಂಘವು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಬೆಳಯಬೇಕೆನ್ನುವ ಉದ್ದೇಶದೊಂದಿಗೆ ತಾಲೂಕಿನಲ್ಲೇ ಪ್ರಥಮವಾಗಿ ಸಹಕಾರ ಸಂಘದ ಹೆಸರಿನಲ್ಲಿ ತನ್ನದೇ ಆದ IFS Code ಪಡೆದುಕೊಂಡು ಮೊಬೈಲ್ ಬ್ಯಾಂಕಿಂಗ್ ಮೂಲಕ ನೇರವಾಗಿ ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಈಗಾಗಲೇ ಮೊಬೈಲ್‌ನಿಂದ ಪಿಗ್ನಿ ಕಲೆಕ್ಷನ್ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್, ನ್ಯಾಚ್, ಇ-ಕಲೆಕ್ಷನ್ ತಂತ್ರಾಜ್ಞಾನವನ್ನು ಅಳವಡಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ. ಈ ಎಲ್ಲಾ ಸೇವೆಗಳ ಸದುಪಯೋಗ ಪಡೆಯಬೇಕೆಂದು ಕೋರುತ್ತೇವೆ ಎಂದರು.

ಆಡಳಿತ ಮಂಡಳಿ :16 ಮಂದಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಸ್ಥೆಯ ಬೆಳವಣಿಗೆಗೆ ಸೂಕ್ತ ನಿರ್ದೇಶನ, ಸಕಾಲದಲ್ಲಿ ಉತ್ತಮ ಸಲಹೆ, ನಿಯಮಗಳನ್ನು ಜಾರಿ ಮಾಡಿರುತ್ತದೆ. ಸಾಲದ ಉಪಸಮಿತಿಯು ಸಾಲ ವಿತರಣೆಗೆ ಸೂಕ್ತ ಮಾರ್ಗದರ್ಶನದೊಂದಿಗೆ ಅತೀ ಶೀಘ್ರದಲ್ಲಿ ಸದಸ್ಯರಿಗೆ ಸಾಲ ವಿತರಣೆಯಾಗುವಂತೆ ಕ್ರಮ ಕೈಗೊಳ್ಳುತ್ತಿದೆ. ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಭಗೀರಥ.ಜಿ, ಉಪಾಧ್ಯಕ್ಷರು ಶ್ರೀ ಜಗದೀಶ್ಚಂದ್ರ ಡಿ.ಕೆ ಮತ್ತು ಶ್ರೀಮತಿ ಸುಜಿತಾ.ವಿ.ಬಂಗೇರ, ಶ್ರೀ ಸಂಜೀವ ಪೂಜಾರಿ, ಶ್ರೀಮತಿ ತನುಜಾ ಶೇಖರ್, ಶ್ರೀ ಕೆ.ಪಿ.ದಿವಾಕರ, ಶ್ರೀ ಚಂದ್ರಶೇಖರ್, ಶ್ರೀ ಧರ್ಣಪ್ಪ ಪೂಜಾರಿ, ಶ್ರೀ ಗಂಗಾಧರ ಮಿತ್ತಮಾರು. ಶ್ರೀ ಜಯವಿಕ್ರಮ.ಪಿ.ಕಲ್ಲಾಪು, ಶ್ರೀ ಧರಣೇಂದ್ರ ಕುಮಾರ್, ಶ್ರೀ ಆನಂದ ಪೂಜಾರಿ ಸರ್ವೆದೋಳ, ಡಾ। ರಾಜರಾಮ.ಕೆ.ಬಿ, ಶ್ರೀ ರಕ್ಷಿತ್ ಶಿವರಾಂ, ಶ್ರೀ ಚಿದಾನಂದ ಪೂಜಾರಿ ಎಲ್ಲಕ್ಕ. ಶ್ರೀ ಸೂರಜ್ ಕುಮಾರ್ ನಿರ್ದೇಶಕರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾವು ಪಡೆಯುತ್ತಿರುವ ಸಭಾ ಭತ್ತೆಯನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುತ್ತಾ ಬಂದಿರುತ್ತಾರೆ ಎಂದರು.

ಮಾನವ ಸಂಪನ್ಮೂಲ ವಿಭಾಗ, ಸಾಲ ವಸೂಲಾತಿ ವಿಭಾಗ ಹಾಗೂ ಆಂತರಿಕ ಲೆಕ್ಕಪರಿಶೋಧನಾ ವಿಭಾಗ
ಸದಸ್ಯರಿಗೆ ನೀಡಿದ ಸಾಲದ ಸಮರ್ಪಕವಾದ ಮರುಪಾವತಿಗೆ ಸಂಬಂಧಿಸಿದಂತೆ ಹಾಗೂ ಗುಣಮಟ್ಟದ ಸಾಲ ವಿತರಣೆಯ ಕುರಿತು ಸಮರ್ಪಕವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಕಚೇರಿಯಲ್ಲಿ ಸಹಕಾರ ಇಲಾಖೆಯಿಂದ ಅನುಮೋದಿಸಲ್ಪಟ್ಟ ಮಾರಟಾಧಿಕಾರಿಯ ಜವಬ್ದಾರಿಯಲ್ಲಿ ಸಾಲ ವಸೂಲಾತಿ ವಿಭಾಗವನ್ನು ರಚಿಸಲಾಗಿರುತ್ತದೆ ಹಾಗೂ ಸಹಕಾರ ಸಂಘದ ಎಲ್ಲಾ ಶಾಖೆಗಳ ಆಂತರಿಕ ಲೆಕ್ಕರಿಶೋಧನೆಯನ್ನು ನಡೆಸಲು ಆಂತರಿಕ ಲೆಕ್ಕ ಪರಿಶೋಧನೆ ವಿಭಾಗವನ್ನು ರಚಿಸಲಾಗಿದ್ದು ಕಾಲಕಾಲಕ್ಕೆ ಶಾಖೆಗಳ ಲೆಕ್ಕಪತ್ರಗಳು ಹಾಗೂ ಇತರ ಕಾರ್ಯ ಚಟುವಟಿಕೆಗಳ ಬಗ್ಗೆ ತಪಾಸಣೆಯನ್ನು ನಡೆಸುತ್ತಿದೆ. ಮಾನವ ಸಂಪನ್ಮೂಲದ ಅಭಿವೃದ್ಧಿಯ ನಿಟ್ಟಿನಲ್ಲಿ ಸಿಬ್ಬಂದಿಗಳ ದಕ್ಷ ಮೇಲ್ವಿಚಾರಣೆಗಾಗಿ ಮಾನಸಂಪನ್ಮೂಲ ವಿಭಾಗವನ್ನು ರಚಿಸಲಾಗಿರುತ್ತದೆ. ಸಂಘದ ದೈನಂದಿನ ವ್ಯವಹಾರದ ದಕ್ಷತೆಯನ್ನು ಹೆಚ್ಚಿಸಲು ಹಾಗೂ ಆದಾಯ ಸೋರಿಕೆಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.

ಸಿಬ್ಬಂದಿ ವರ್ಗ:
ಸಂಸ್ಥೆಯು ವರದಿ ವರ್ಷದಲ್ಲಿ ಒಬ್ಬರು ವಿಶೇಷಾಧಿಕಾರಿ ಸೇರಿ 109 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೇ ಒಟ್ಟು 62 ಮಂದಿ ನಿತ್ಯನಿಧಿ ಸಂಗ್ರಾಹಕರು ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉಂಟಾದ ಸ್ಪರ್ಧೆಯನ್ನು ಎದುರಿಸಲು ಹಾಗೂ ಪರಿಣಾಮಕಾರಿ ಆಡಳಿತ ನಿರ್ವಹಣಾ ದೃಷ್ಟಿಯಿಂದ ವರ್ಷಕ್ಕೊಂದು ಸಾಮಾರ್ಥ್ಯಾಭಿವೃದ್ಧಿ ತರಬೇತಿಯನ್ನು ನುರಿತ ಸಂಪನ್ಮೂಲ ವ್ಯಕ್ತಿಯಿಂದ ನೀಡಿರುತ್ತೇವೆ. ನೌಕರರ ವೃಂದ ಬಲ, ನೇಮಕಾತಿ ಹಾಗೂ ವೇತನ ಶ್ರೇಣಿಯನ್ನು ಪರಿಷ್ಕರಿಸಿ ಮಹಾಸಭೆಯ ಮಂಜೂರಾತಿ ಪಡಕೊಂಡು ಧೃಢೀಕರಿಸಲು ಮಹಾಸಭೆಗೆ ಮಂಡಿಸಲಾಗಿದೆ ಎಂದರು.

ಸಾಮಾಜಿಕ ಚಟುವಟಿಕೆಗಳು:
ಕೇವಲ ಬ್ಯಾಂಕಿಗ್ ಚಟುವಟಿಕೆ ಮಾತ್ರ ಸೀಮಿತವಾಗದ ನಮ್ಮ ಸಹಕಾರ ಸಂಸ್ಥೆಯು ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿರುತ್ತದೆ. ‘ಕಲಿಕೆಗಾಗಿ ಸಹಾಯ ಸಹಾಯಕ್ಕಾಗಿ ಕಲಿಕೆ’ಎನ್ನುವ ನಮ್ಮ ಸಂಸ್ಥೆಯ ಯೋಜನೆಯಡಿ ದತ್ತು ಸ್ವೀಕಾರ ಕಾರ್ಯಕ್ರಮದಡಿಯಲ್ಲಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ಖರ್ಚುವೆಚ್ಚ ಭರಿಸಲಾಗಿದ್ದು ಪ್ರಸ್ತುತ ಉತ್ತಮ ಉದ್ಯೋಗ ಲಭಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ನಾವು ಕಂಡ ಕನಸು ನನಸಾಗಿದೆ. ಒಬ್ಬರು ಮೆಡಿಕಲ್ ವಿದ್ಯಾರ್ಥಿಯ ವ್ಯಾಸಂಗದ ಆಂಶಿಕ ವೆಚ್ಚವನ್ನು ಭರಿಸಿ ಪ್ರಸ್ತುತ ಉತ್ತಮ ಅಂಕಗಳಿಂದ ತೇರ್ಗಡೆಗೊಂಡು ಎಮ್.ಡಿ ವ್ಯಾಸಾಂಗ ಮಾಡುತ್ತಿದ್ದಾರೆ ಹಾಗೂ ಆಯ್ದ ಪದವಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಹಾಗೂ ಇತರ ಕ್ಷೇತ್ರದಲ್ಲಿ ಅತೀ ಹೆಚ್ಚು ಸಾಧನೆ ಮಾಡಿದ ನಮ್ಮ ಸಂಸ್ಥೆಯ ಸದಸ್ಯರ ಮಕ್ಕಳನ್ನು ಗುರುತಿಸಿ ಪ್ರತಿವರ್ಷ ಮಹಾಸಭೆಯಲ್ಲಿ ಸನ್ಮಾನಿಸಿರುತ್ತೇವೆ ಎಂದರು.

ಶಾಖೆಗಳ ದಶಮಾನೋತ್ಸವದ ಪ್ರಯುಕ್ತ ಸ್ಥಳಿಯ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಸಾಮಾನ್ಯ ರೋಗ ವಿಭಾಗ, ಕ್ಯಾನ್ಸರ್ ತಪಾಸಣೆ, ಕಣ್ಣಿನ ವಿಭಾಗ, ದಂತ ಚಿಕಿತ್ಸೆ, ಎಲುಬು ಮತ್ತು ಕೀಲು ರೋಗ ವಿಭಾಗ ಇದರ ಬೃಹತ್ ಆರೋಗ್ಯ ಶಿಬಿರ ನಡೆದು 1000 ಮಂದಿ ಫಲಾನುಭವಿಗಳು ತಮ್ಮ ಆರೋಗ್ಯ ತಪಾಸಣೆ ನಡೆಸಿರುತ್ತಾರೆ ಈ ಸಂದರ್ಭದಲ್ಲಿ ಸಂಬಂಧಪಟ್ಟ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕವನ್ನು ಸಂಘದ ವತಿಯಿಂದ ವಿತರಿಸಲಾಗಿರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಇನ್ನೂ ಹತ್ತು ಹಲವು ಕಾರ್ಯಕ್ರಮಗಳು ನಮ್ಮ ಮುಂದಿದೆ ಎಂದರು.

ಶ್ರೀ ಗುರು ಸಾಲಗಾರರ ಮರಣನಿಧಿ
ನಮ್ಮ ಸಂಘದ ವಿಶೇಷ ಯೋಜನೆಯಾಗಿರುವ ಶ್ರೀ ಗುರು ಸಾಲಗಾರರ ಮರಣ ನಿಧಿಯ ಮೂಲಕ ಮರಣ ಹೊಂದಿದ ಸಾಲಗಾರನಿಗೆ ರೂ.10,00,000/- ದವರೆಗೆ ನೀಡಿ ಸಾಲಗಾರರ ಕುಟುಂಬವನ್ನು ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಸದ್ರಿ ಯೋಜನೆಯಿಂದ 31-03-2026 ರವರೆಗೆ ಒಟ್ಟು 119 ಸದಸ್ಯರಿಗೆ ರೂ.88,18,140/- ಮೊತ್ತದ ಮರಣ ನಿಧಿಯಿಂದ ಸಾಲದ ಮೊತ್ತವನ್ನು ಭರಿಸಿ ಮೃತ ಸಾಲಗಾರರ ಕುಟುಂಬವನ್ನು ಸಂಪೂರ್ಣ ಸಾಲದಿಂದ ಋಣಮುಕ್ತಗೊಳಿಸಲಾಗಿರುತ್ತದೆ. ಅವಘಡದಿಂದ ಶಾಶ್ವತ ಅಂಗವಿಕಲತೆಯಾಗಿರುವ ಸಾಲಗಾರ ಸದಸ್ಯರಿಗೆ ಶ್ರೀ ಗುರು ಸಾಲಗಾರರ ಮರಣ ನಿಧಿಯಿಂದ ಭರಿಸಿ ಕಷ್ಟಕ್ಕೆ ಸ್ಪಂದಿಸಲಾಗಿದೆ ಎಂದರು.

ಕಟ್ಟಡ ನಿವೇಶನ, ಇತರ ಆಸ್ತಿಗಳು
ಬೆಳ್ತಂಗಡಿ ಭಾರತ್ ಪೆಟ್ರೋಲ್ ಪಂಪ್‌ನ ಹತ್ತಿರ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಎದುರುಗಡೆಯಲ್ಲಿ ರೂ.92 ಲಕ್ಷಕ್ಕೆ ಖರೀದಿಸಿದ ನಿವೇಶನದಲ್ಲಿ ನಮ್ಮ ಸಂಘದ ಕೇಂದ್ರಕಚೇರಿಯನ್ನು ರೂ.5.28 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಗುರುಸಾನಿಧ್ಯ ವಾಣಿಜ್ಯ ಸಂಕೀರ್ಣವು 13-07-2024 ರಂದು ಲೋಕರ್ಪಣೆಗೊಂಡಿರುತ್ತದೆ. ಈ ಕಟ್ಟಡದ ತಳ ಮಹಡಿಯ ಅಂತಸ್ತಿನಲ್ಲಿ ವಿಶಾಲವಾದ ವಾಹನ ಪಾರ್ಕಿಂಗ್, ನೆಲ ಅಂತಸ್ತು ಮತ್ತು ಮೊದಲನೇ ಮಹಡಿಯನ್ನು ಬಾಡಿಗೆಗೆ ನೀಡಲಾಗಿರುತ್ತದೆ. ಎರಡನೇ ಮಹಡಿಯಲ್ಲಿ ಕೇಂದ್ರ ಕಚೇರಿಯು ಕಾರ್ಯಾಚರಿಸುತ್ತಿದೆ. ಮೂರನೇ ಮಹಡಿಯಲ್ಲಿ ಸಭಾಂಗಣವನ್ನು ಹೊಂದಿರುತ್ತದೆ. 48 ಕಿಲೋ ವ್ಯಾಟ್ ಉತ್ಪಾದನೆಯ ಸೋಲಾರ್ ಘಟಕವನ್ನು ಸ್ಥಾಪಿಸಲಾಗಿರುತ್ತದೆ. ಹಳೆಯಂಗಡಿ ಶಾಖೆ, ಬೆಳುವಾಯಿ ಶಾಖೆ ಪ್ರಸ್ತುತ ವರ್ಷದಲ್ಲಿ ಕಬಕ ಶಾಖೆಯನ್ನು ಮತ್ತು ಮೂಡುಬಿದಿರೆ ಶಾಖೆಯನ್ನು ಸ್ವಂತ ಮಾಲೀಕತ್ವಕ್ಕೆ ಖರೀದಿಸಲಾಗಿರುತ್ತದೆ. ವರದಿ ವರ್ಷದಲ್ಲಿ ಒಟ್ಟು ರೂ. 9 ಕೋಟಿ 23 ಲಕ್ಷ ಮೊತ್ತದ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಬಜಗೋಳಿ ಶಾಖೆಯ ಸ್ವಂತ ಮಾಲೀಕತ್ವಕ್ಕೆ ಖರೀದಿಯ ಬಗ್ಗೆ ಒಪ್ಪಂದ ಮಾಡಲಾಗಿರುತ್ತದೆ. ಸಂಘವು ರೂ. 1 ಕೋಟಿ 54 ಲಕ್ಷ ಮೌಲ್ಯದ ಪೀಠೋಪಕರಣಗಳೊಂದಿಗೆ ಒಟ್ಟು ರೂ.4 ಕೋಟಿ 88 ಲಕ್ಷ ಮೌಲ್ಯದ ಇತರ ಆಸ್ತಿಗಳನ್ನು ಹೊಂದಿರುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ,ಜಗದೀಶ್ಚಂದ್ರ ಡಿ.ಕೆ,ನಿರ್ದೇಶಕರಾದ ಸಂಜೀವ ಪೂಜಾರಿ,ಚಂದ್ರಶೇಖರ್,ಗಂಗಾಧರ ಮಿತ್ತಮಾರು.ಧರಣೇಂದ್ರ ಕುಮಾರ್, ಚಿದಾನಂದ ಪೂಜಾರಿ ಎಲ್ಲಕ್ಕ,ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.

Related posts

ದಿ| ವಸಂತ ಬಂಗೇರರ ಮನೆಗೆ ರಾಜ್ಯದ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯ ಭೇಟಿ

Suddi Udaya

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ವೀರಣ್ಣ ಶೆಟ್ಟಿರವರಿಗೆ ಸೇವಾ ನಿವೃತ್ತಿ

Suddi Udaya

ಹೊಸಂಗಡಿ ಇಂದಿರಾ ವಸತಿ ಶಾಲೆಯಲ್ಲಿ ವನಮಹೋತ್ಸವ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ಕಡ: ಪಾರ್ಪಿಕಲ್ -ದರ್ಬೆತಕ್ಕದಲ್ಲಿ ರಸ್ತೆಗೆ ಬಿದ್ದ ಮರ, ವಾಹನ ಸಂಚಾರಕ್ಕೆ ತಡೆ

Suddi Udaya

ಬೆಳ್ತಂಗಡಿ : ವನ್ಯಜೀವಿ ವಿಭಾಗದ ಆರ್.ಎಫ್.ಓ ಸ್ವಾತಿ ಎಲ್. ವರ್ಗಾವಣೆ: ನೂತನ ಆರ್.ಎಫ್.ಓ ಆಗಿ ವಿ. ಶರ್ಮಿಷ್ಠ ನೇಮಕ

Suddi Udaya
error: Content is protected !!