32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಉತ್ಪನ್ನಗಳ ತಯಾರಿಕ ಘಟಕ ಶುಭಾರಂಭ:ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್-ಕಾಂಕ್ರೀಟ್ ಕಂಪೌಂಡ್ ವಾಲ್‌, ಕಾಳುಮೆಣಸು ಬೇಲಿ ಕಂಬ ಲಭ್ಯ

ಅಳದಂಗಡಿ: ಇಲ್ಲಿಯ ಶ್ರೀ ಗೌರೀಶ್ವರ ಆವರಣದಲ್ಲಿ ‘ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್‌ಗಳು, ಕಂಪೌಂಡ್ ವಾಲ್‌ಗಳು, ಕಾಂಕ್ರೀಟ್ ಕಂಬಗಳು, ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳ ತಯಾರಿಕಾ ಕಾರ್ಖಾನೆಯ ಉದ್ಘಾಟನಾ ಸಮಾರಂಭವು ಎ.26ರಂದು ನಡೆಯಿತು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುಂಶೀಯ ಆಡಳಿತ ಮೊಕ್ತಸರರಾದ ಶರತ್‌ ಕೃಷ್ಣ ಪಡುವೆಟ್ನಾಯರವರು ದೀಪ ಪ್ರಜ್ವಲಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್,ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ,ದೈಗೋಳಿ ಸೇವಾಶ್ರಮದ ಡಾ.ಉದಯ ಕುಮಾರ್ ನೂಚಿ, ಪ್ರಗತಿಪರ ಕೃಷಿಕರಾದ ಜಯರಾಮ್ ಪೊಳ್ನಾಯ ಉಪಸ್ಥಿತರಿದ್ದರು.

ಸಾಧಕರಗೆ ಸನ್ಮಾನ: ಪ್ರಗತಿಪರ ಕೃಷಿಕ ರಾಜಪ್ರಸಾದ ಪೊಳ್ನಾಯ,ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ,ಪ್ರಗತಿ ಪರ ಕೃಷಿಕ ರಾಕೇಶ್ ಹೆಗ್ಡೆ ಬಳಂಜ,ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವೀಣಾ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಉದ್ದಿಮೆಯ ವಿಶೇಷತೆಗಳು:ಕಾಂಕ್ರೀಟ್ ಸಾಲಿಡ್ ಬ್ಲಾಕ್ಸ್ 4″, 6″ 8″, 0 ವಾಲ್, ಕಾಳುಮೆಣಸು ಕಂಬ, ಬೇಲಿ ಕಂಬ ಮತ್ತು ಇತರ ಕಾಂಕ್ರೀಟ್ ಉತ್ಪನ್ನಗಳನ್ನು ಲೋಡೀಂಗ್ ಮತ್ತು ಅನ್ನೋಡಿಂಗ್ ಸೌಲಭ್ಯ ಇರುವ ಕ್ರೇನ್ ಮೂಲಕ ಡೆಲಿವರಿ ಮಾಡಲಾಗುತ್ತದೆ.ಕಾಂಕ್ರೀಟ್ ಸಾಲಿಡ್ ಬ್ಲಾಕುಗಳನ್ನು ಮೊದಲನೇ ಮಹಡಿಗೆ ಲಾರಿಯಿಂದ ನೇರವಾಗಿ ಸ್ವಯಂಚಾಲಿತ ಯಂತ್ರದ ಮೂಲಕ ಇಡುವುದು. ಅತ್ಯಾಧುನಿಕ ರೀತಿಯಲ್ಲಿ ತಯಾರಿಸಿ ಕ್ಯೂರಿಂಗ್ ಮಾಡಲಾದ ಕಂಪೌಂಡ್ ವಾಲ್ಗಳನ್ನು ಅಳವಡಿಸಿಕೊಡುವುದು. ವೈಜ್ಞಾನಿಕ ರೀತಿಯಲ್ಲಿ ಕಾಳುಮೆಣಸು ಬೆಳೆಯಲು ಕಾಂಕ್ರೀಟ್ ಕಂಬಗಳನ್ನು ಅಳವಡಿಸಿಕೊಡುವುದು.ಬೇಲಿ ಕಂಬಗಳು, “ವೈ” ಕಂಬಗಳು, ಟಾಯ್ಲೆಟ್ ಪಿಟ್‌ಗಳು, ಲಿಂಟಲ್‌ಗಳು, ವಾಸ್ತು ರೀತಿಯಲ್ಲಿ ತುಳಸಿಕಟ್ಟೆ ಮತ್ತು ಇತರೇ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಿ ಕೊಡುವುದು.

ಕಟ್ಟೂರು ಕಾಂಕ್ರೀಟ್ ಪ್ರಾಡಕ್ಟ್ಉತ್ತಮ ಗುಣಮಟ್ಟದ ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಿ ಸರಬರಾಜು ಮಾಡಲಾಗುತ್ತದೆ ಎಂದುಸಂಸ್ಥೆಯ ಪಾಲುದಾರರಾದ ಅವನೀಶ ಕಟ್ಟೂರು, ಬಿ.ಇ. ಮತ್ತು ಅನುರುದ್ದ ಕಟ್ಟೂರು, ಬಿ.ಇ. (ಸಿವಿಲ್) ತಿಳಿಸಿದರು.ಸಂದ್ಯಾ ಕಟ್ಟೂರು, ವಿದ್ಯಾ ಕಟ್ಟೂರು, ಅನುಷಾ ಭಟ್ ಲಾಡೆ ಪ್ರಾರ್ಥನೆಗೈದರು.ಕೃಷಿಕ ಶಂಕರ್ ಭಟ್ ಕಟ್ಟೂರು ಸ್ವಾಗತಿಸಿದರು.ರಾಜ್ ಪ್ರಸಾದ ಪೊಳ್ನಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಅವನೀಶ್ ಕಟ್ಟೂರು ವಂದಿಸಿದರು.

Related posts

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ

Suddi Udaya

ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾದ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದ ಶಾಸಕ ಹರೀಶ್ ಪೂಂಜ: ಬೋರ್‌ವೆಲ್ ಸೌಲಭ್ಯವನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೊಸ ಚೈತನ್ಯ

Suddi Udaya

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ ಪ್ರಯುಕ್ತ `ಏಕಾಹ ಭಜನಾ ಕಾರ್ಯಕ್ರಮ ಮತ್ತು ಭಜನಾ ಕಮ್ಮಟೋತ್ಸವ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಕೋಟಿ ಚೆನ್ನಯ ಕ್ರೀಡಾಕೂಟ ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸಮಾಲೋಚನಾ ಸಭೆ

Suddi Udaya

ರಾಜ್ಯ ಮಟ್ಟದ ಓಟ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!