24.8 C
ಪುತ್ತೂರು, ಬೆಳ್ತಂಗಡಿ
September 20, 2026
ಸಮಸ್ಯೆ

ಕೊಕ್ಕಡ: ಹಿಟ್ ಅಂಡ್ ರನ್: ಬೈಕ್‌ಗೆ ಕಾರು ಡಿಕ್ಕಿ – ಸವಾರ ಗಂಭೀರ ಗಾಯ, ಆಂಬುಲೆನ್ಸ್ ವಿಳಂಬಕ್ಕೆ ಆಕ್ರೋಶ

ಕೊಕ್ಕಡ: ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ಮಂಗಳವಾರ ಬೆಳಗ್ಗೆ ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.

ಕೊಕ್ಕಡದಿಂದ ಉಪ್ಪಿನಂಗಡಿಗೆ ಗೋಳಿತೊಟ್ಟು ಮಾರ್ಗವಾಗಿ ತೆರಳುತ್ತಿದ್ದ ಕೊಕ್ಕಡ ಕೆನರಾ ಬ್ಯಾಂಕ್‌ನ ಚಿನ್ನ ಪರೀಕ್ಷಕ, ಬಲ್ಯ ನಿವಾಸಿ ಗಣೇಶ್ ಆಚಾರ್ಯ ಅವರು ಚಲಿಸುತ್ತಿದ್ದ ಬೈಕ್‌ಗೆ ಉಪ್ಪಾರಪಳಿಕೆ ಬಳಿ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣವೇ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯಿಂದ ಗಣೇಶ್ ಆಚಾರ್ಯ ಅವರು ಗಾಯಗೊಂಡಿದ್ದು, ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಇದೇ ವೇಳೆ ಗಾಯಾಳುವನ್ನು ತುರ್ತು ಚಿಕಿತ್ಸೆಗೆ ಕೊಂಡೊಯ್ಯಲು ನಿಯೋಜಿಸಲಾಗಿದ್ದ ಕೊಕ್ಕಡ ಸರಕಾರಿ ಆಸ್ಪತ್ರೆಯ 108 ಆಂಬುಲೆನ್ಸ್ ರಿಪೇರಿಗಾಗಿ ಕಳೆದ ಮೂರು ದಿನಗಳ ಹಿಂದೆ ಗ್ಯಾರೇಜ್‌ಗೆ ಕೊಂಡೊಯ್ಯಲಾಗಿದ್ದರಿಂದ, ಆಂಬುಲೆನ್ಸ್ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಯಿತು. ಇದರ ಪರಿಣಾಮವಾಗಿ ಗಾಯಾಳು ಸುಮಾರು ಅರ್ಧ ಗಂಟೆಗಿಂತ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಕಾಯುವಂತಾಗಿ, ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಯಿತು. ಕೆಲಕಾಲ ಆಸ್ಪತ್ರೆ ಎದುರು ಆಕ್ರೋಶವೂ ವ್ಯಕ್ತಗೊಂಡಿತು.
ನಂತರ ಶಿರಾಡಿಯಿಂದ 108 ಆಂಬುಲೆನ್ಸ್ ತರಿಸಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ತಿಳಿದು ಬಂದಿದೆ.

Related posts

ಕೊಕ್ಕಡ: ಹಳ್ಳಿಂಗೇರಿ ಜನವಸತಿ ಪ್ರದೇಶದ ನಿತೇಶ್ ರವರ ಮನೆಗೆ ಸಿಡಿಲು ಬಡಿದು ಹಾನಿ

Suddi Udaya

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್ ಗ್ರಾಮಸಭೆ ರದ್ದು: ಅಧಿಕಾರಿಗಳು ಗೈರು: ಧರಣಿ ಕುಳಿತ ಗ್ರಾಮಸ್ಥರು

Suddi Udaya

ಧಾರಾಕಾರ ಮಳೆಗೆ ಕುಸಿದು ಬಿದ್ದ ಸರಳೀಕಟ್ಟೆ ಹಿ.ಪ್ರಾ. ಶಾಲೆಯ ಹಂಚು

Suddi Udaya

ಇಳಂತಿಲ: ಬೃಹತ್ ಗಾತ್ರದಲ್ಲಿ ಗುಡ್ಡ ಕುಸಿತ : ಗ್ರಾ.ಪಂ. ಸದಸ್ಯ ತಿಮ್ಮಪ್ಪ ಗೌಡರ ನೇತೃತ್ವದಲ್ಲಿ ತೆರವು ಕಾರ್ಯ

Suddi Udaya

ನಿಡ್ಲೆ : ಕಾಟ್ಲ ಪರಿಸರದಲ್ಲಿ ಕಾಡಾನೆ ಹಾವಳಿ

Suddi Udaya
error: Content is protected !!