September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಮಸ್ಯೆ

ಮುಂಡಾಜೆ ಗ್ರಾಮ ಪಂಚಾಯತ್ ಗ್ರಾಮಸಭೆ ರದ್ದು: ಅಧಿಕಾರಿಗಳು ಗೈರು: ಧರಣಿ ಕುಳಿತ ಗ್ರಾಮಸ್ಥರು

ಮುಂಡಾಜೆ: ಗ್ರಾಮ ಸಭೆಯಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ನಡೆಸುವುದಕ್ಕೆ ಅಧಿಕಾರಿಗಳೇ ಬಾರದ ಕಾರಣ ಸಭೆಯನ್ನು ವಿರೋಧಿಸಿ ಸಭೆಯ ಮುಂದೆ ಧರಣಿ ಕುಳಿತು ಸಭೆಯನ್ನು ರದ್ದುಗೊಳಿಸಿದ ಘಟನೆ ಮುಂಡಾಜೆಯಲ್ಲಿ ನಡೆಯಿತು.

ಜು.31ರಂದು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ರವಿಕುಮಾರ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಮುಂಡಾಜೆ ಗ್ರಾಮ ಪಂಚಾಯತ್ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಇಲಾಖೆಯ ಹೆಚ್ಚಿನ ಅಧಿಕಾರಿಗಳು ಗೈರು ಆಗಿದ್ದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದ್ದ ರಸ್ತೆ ಸೇರಿದಂತೆ ಹಲವು ವಿಚಾರಗಳು ಈಡೇರದ ಕಾರಣ ಗ್ರಾಮಸ್ಥರು ಸಭೆಯ ಮುಂದೆ ಧರಣಿ ಕುಳಿತು ಘೋಷಣೆ ಕೂಗುವ ಮೂಲಕ ಸಭೆಗೆ ವಿರೋಧ ವ್ಯಕ್ತ ಪಡಿಸಿದರು. ಬಳಿಕ ಸಭೆಯನ್ನು ರದ್ದು ಗೊಳಿಸಿ ಮುಂದೂಡಲಾಯಿತು.

ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೇಸ್ ಅವರು ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಶೀರೂರು ವೇದವರ್ಧನ ಸ್ವಾಮೀಜಿಯವರು ಭೇಟಿ,

Suddi Udaya

ಪಿಲ್ಯ ಉಲ್ಫೆ ಪ್ರದೇಶದಲ್ಲಿ ಕಂಡು ಬಂದ ಚಿರತೆ

Suddi Udaya

ಪಂಚಾಯತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಕಾಂಗ್ರೆಸ್ ಸರಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಜೂ.23 ರಂದು ದ.ಕ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಮಹಿಳಾ ಶ್ರಮಿಕರ ಸಂಗಮ – 2026 ಕಾರ್ಯಕ್ರಮ

Suddi Udaya

ಕುವೆಟ್ಟು ಗ್ರಾ.ಪಂ ಬಳಿ ಟವರ್‌ಗೆ ಬಡಿದ ಸಿಡಿಲು: ಪಿಡಿಒ, ಸದಸ್ಯರು ಸಹಿತ ಸಿಬ್ಬಂದಿಗಳಿಗೆ ಸಿಡಿಲಿನ ಅಘಾತ: ಪಂಚಾಯತು ವಿದ್ಯುತ್ ಉಪಕರಣಗಳಿಗೆ ಹಾನಿ: ಬಿರುಕು ಬಿಟ್ಟ ಸಭಾಂಗಣ: ಪಾರಾದ ಆಶಾ ಕಾರ್ಯಕರ್ತೆಯರು

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!