September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕ್ರಾಂತಿವೀರ ಮಂಜ ಬೈದ್ಯರ ಕಂಚಿನ ಪುತ್ಥಳಿ ನಿರ್ಮಾಣ ಆಗಬೇಕು: ಕನ್ಯಾಡಿ ಶ್ರೀ

ಬೆಳ್ತಂಗಡಿ: ಕ್ರಾಂತಿವೀರ ಉಪ್ಪಿನಂಗಡಿ ಮಂಜ ಬೈದ್ಯರ ಸಮಗ್ರ ಹೋರಾಟ, ಬಲಿದಾನದ ವಿವರವನ್ನು ಒಳಗೊಂಡ ‘ಕ್ರಾಂತಿ ವೀರ ಮಂಜ ಬೈದ್ಯ’ ಪುಸ್ತಕವನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಬಿಡುಗಡೆ ಗೊಳಿಸಿದರು.

ಕ್ರಾಂತಿವೀರ ಮಂಜ ಬೈದ್ಯರ ಕಥೆ ಬರಿಯ ಇತಿಹಾಸ ಮಾತ್ರವಲ್ಲ, ಅದು ಯುವ ಸಮುದಾಯದ ಭವಿಷ್ಯದ ದೃಷ್ಟಿಯಿಂದ ರಾಷ್ಟ್ರೀಯ ಪ್ರಜ್ಞೆಯೂ ಹೌದು. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ವೀರ ಯೋಧರ ಪುತ್ಥಳಿ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ, ಗೌರವ ಸಲಹೆಗಾರ ಭುಜಬಲಿ ಧರ್ಮಸ್ಥಳ, ಸಂಚಾಲಕರಾದ ಬಾಲಕೃಷ್ಣ ಶೆಟ್ಟಿ, ಶಶಿಧರ ಕಲ್ಮoಜ, ಎಂ.ಕೆ. ಸಮಿತಿ ಸದಸ್ಯರುಗಳಾದ ಪ್ರಸಾದ್, ಗುರುರಾಜ ಗುರಿಪಲ್ಲ , ರಮೇಶ್ ಧರ್ಮಸ್ಥಳ, ಪುರುಷೋತ್ತಮ ಧರ್ಮಸ್ಥಳ, ಸುನಿಲ್ ಕನ್ಯಾಡಿ ,ರಾಘವೇಂದ್ರ ಗೌಡ, ರವೀಂದ್ರ ಅರಳಪದವು ,ಗುರು ಪ್ರಸಾದ್ ಉಜಿರೆ,ರೂಪೇಶ ಧರ್ಮಸ್ಥಳ, ಉಪಸ್ಥಿತರಿದ್ದರು.

Related posts

ಉಜಿರೆ: ಅಗತ್ಯ ದಾಖಲೆ ಹಾಗೂ ನಗದು ಇದ್ದ ಪರ್ಸ್ ಬಿದ್ದು ಕಳೆದುಹೋಗಿದೆ

Suddi Udaya

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ಎಸ್. ಡಿ. ಎಂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆ ಸಿನರ್ಜಿ ಹಮ್ಮಿಕೊಂಡ “ಪ್ರೊಫೆಷನಲ್ ಸಮ್ಮರಿ” ಕಾರ್ಯಕ್ರಮ

Suddi Udaya

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ಶ್ರೀ. ಧ. ಮಂ. ಪ. ಪೂ.ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

Suddi Udaya

ಬೆಳಾಲು ಮುಖ್ಯರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

Suddi Udaya
error: Content is protected !!