September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಶ್ರೀ ಧ ಮಂ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಗುರು ಪೂರ್ಣಿಮಾ ಕಾರ್ಯಕ್ರಮ

ಉಜಿರೆ: ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿಯೂ ಸಹ ಪಡೆದಿರುವ ಜ್ಞಾನದ ಕುರಿತಾಗಿ ಹಾಗೂ ಜ್ಞಾನ ಮತ್ತು ವಿದ್ಯೆಯನ್ನು ನೀಡುತ್ತಿರುವ ಗುರುವಿನ ಕುರಿತಾಗಿ ವಿಶ್ವಾಸವಿರಬೇಕು ಎಂದು ಎಸ್ ಡಿ ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಮೇಶ್ ಮಯ್ಯ ಹೇಳಿದರು.

ಉಜಿರೆ ಶ್ರೀ ಧ ಮಂ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಜು. 30ರಂದು ಆಚರಿಸಲಾದ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭಾರತೀಯ ಸನಾತನ ಸಂಸ್ಕೃತಿಯು ವಿಶ್ವದಾದ್ಯಂತ ಅಪಾರ ಮನ್ನಣೆಯನ್ನು ಪಡೆದಿದ್ದು ಭಾರತೀಯರಾದ ನಾವೂ ಸಹ ನಮ್ಮ ಸಂಸ್ಕೃತಿಯ ಮಹತ್ವದ ಕುರಿತು ಇನ್ನಷ್ಟು ಅರಿತು ಅದನ್ನು ಅನುಸರಿಸುವ ಅವಶ್ಯಕತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಸಂಸ್ಕೃತ ವಿಭಾಗದ ಮುಖ್ಯಸ್ಥರು ಮತ್ತು ಕಾಲೇಜಿನ ಆಡಳಿತಾಂಗ ಕುಲಸಚಿವರಾದ ಡಾ. ಶ್ರೀಧರ ಎನ್ ಭಟ್ ಗುರು ಪೂರ್ಣಿಮೆ ಆಚರಣೆಯ ವಿಶೇಷತೆ ಹಾಗೂ ವೇದವ್ಯಾಸ ಋಷಿಗಳ ಮಹತ್ವದ ಕುರಿತಾಗಿ ಮಾತನಾಡುವುದರ ಜೊತೆಗೆ, ಗುರುವಿನ ಸ್ಥಾನವು ಅವರ್ಣನೀಯ ಅದಕ್ಕೆ ಬೆಲೆಕಟ್ಟುವುದು ಅಸಾಧ್ಯ, ಲೋಕದಲ್ಲಿ ಯಾವ ಸಂಪತ್ತಿನಿಂದಲೂ ಕೊಳ್ಳಲು ಸಾಧ್ಯವಾಗದೇ ಇರುವ ಏಕೈಕ ವಸ್ತುವೆಂದರೆ ಅದು ಜ್ಞಾನ. ಜ್ಞಾನವನ್ನು ಗುರುವಿಲ್ಲದೆ ಪಡೆಯುವುದು ಅಸಾಧ್ಯ ಎಂದು ಹೇಳಿದರು.

ವಿಭಾಗದ ವತಿಯಿಂದ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ 15 ವಿದ್ಯಾರ್ಥಿಗಳನ್ನು ಹಾಗೂ ಸಂಸ್ಕೃತ ಐಚ್ಛಿಕ ಮತ್ತು ಸಂಸ್ಕೃತ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪದವಿ ವಿಭಾಗದ 9 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳಿಂದ ರಚಿಸಲ್ಪಟ್ಟ ಡಿಜಿಟಲ್ ಬಿತ್ತಿ ಪತ್ರಿಕೆಯನ್ನು ಹಾಗೂ ಭಾರತೀಯ ಗುರುಪರಂಪರೆಯ ಕುರಿತಾದ ವಿಡಿಯೋವನ್ನು ಅನಾವರಣಗೊಳಿಸಲಾಯಿತು.

ವಿಭಾಗದ ವತಿಯಿಂದ ಉಪಸ್ಥಿತರಿದ್ದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಗುರು ಅಷ್ಟಕಮ್ ಸ್ತೋತ್ರದ ಪಠಣವು ನಡೆಯಿತು.

ವಿಭಾಗದ ಅಧ್ಯಾಪಕಿ ಮೇಘನಾ ಎ ಎಮ್ ಸಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೇಯಸ್ ಜೆ ಪಾಳಂದೆ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್ ಹಾಗೂ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಭಾಗದ ವಿದ್ಯಾರ್ಥಿಗಳಾದ ಶ್ರೀದೇವಿ, ಶರಧಿ ಪ್ರಾರ್ಥಿಸಿ, ಕುಮಾರಿ ಸ್ತುತಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಸ್ಟ್ ಫೌಂಡೇಶನ್ ವತಿಯಿಂದ ಪೆರೋಡಿತ್ತಾಯಕಟ್ಟೆ ಸ.ಹಿ.ಪ್ರಾ. ಶಾಲಾ ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ ವಿತರಣೆ

Suddi Udaya

ಕಳೆಂಜ: ಬರೆಮೇಲು ನಿವಾಸಿ ಗಣಪನ ಗೌಡ ನಿಧನ

Suddi Udaya

ಬಜಿರೆ: ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿಭಾ ಸಂಗಮ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 50ನೇ ವರ್ಷದ ಉದ್ಘಾಟನೆ

Suddi Udaya

ಶಿರ್ಲಾಲು ರಿಕ್ಷಾ ಚಾಲಕ -ಮಾಲಕ ಸಂಘದಿಂದ ಆಯುಧ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!