22.6 C
ಪುತ್ತೂರು, ಬೆಳ್ತಂಗಡಿ
September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿಯಲ್ಲಿ ನೂತನ ಖಾಝಿ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಬೆಳ್ತಂಗಡಿಯ ಖಿಲರ್ ಜುಮ್ಮಾ ಮಸೀದಿ (ಕೇಂದ್ರ ಮಸೀದಿ)ಯ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಬ್ದುಲ್ ಹಯ್ಯ್ ಶಿಹಾಬುದ್ದೀನ್ ಬಾಅಲವಿ ತಂಙಳ್ ಅವರು ಜು.31ರಂದು ಜುಮ್ಮಾ ನಮಾಝ್ ಬಳಿಕ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಪದಗ್ರಹಣ ಮಾಡಿದರು.

ನೂತನ ಖಾಝಿಯವರಿಗೆ ಕವರತ್ತಿ (ಲಕ್ಷದ್ವೀಪ) ಖಾಝಿ ಸೈಯ್ಯದ್ ಇ.ಪಿ. ಸೈದಾಲಿ ತಂಙಳ್ ಅವರು ಖಾಝಿ ಪೇಟವನ್ನು ತೊಡಿಸಿದರು. ಖಾಝಿಯ ಉಡುಪನ್ನು ಖಿಲರ್ ಜುಮ್ಮಾ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಹಾಗೂ ಮಾಜಿ ಅಧ್ಯಕ್ಷ ಬಿ.ಎ. ನಝೀರ್ ಅವರು ತೊಡಿಸಿದರು. ಬಳಿಕ ಮಸೀದಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅವರು ನೂತನ ಖಾಝಿಯವರಿಂದ ಪ್ರತಿಜ್ಞಾವಚನ ಸ್ವೀಕರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಅಶ್ರಫ್ ತಂಙಳ್ ಆದೂರು, ಖಾಝಿ ಹುದ್ದೆಯು ಕೇವಲ ಗೌರವದ ಸ್ಥಾನವಲ್ಲ; ಅದು ಧಾರ್ಮಿಕ ಮಾರ್ಗದರ್ಶನ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಎತ್ತಿಹಿಡಿಯುವ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪವಿತ್ರ ಪರಂಪರೆ ಹಾಗೂ ಅಗಾಧ ಧಾರ್ಮಿಕ ಜ್ಞಾನವನ್ನು ಹೊಂದಿರುವ ಸೈಯ್ಯದ್ ನಾಸಿರ್ ಶಿಹಾಬುದ್ದೀನ್ ಬಾಅಲವಿ ತಂಙಳ್ ಅವರ ನಾಯಕತ್ವದಲ್ಲಿ ಸಮಾಜವು ಇನ್ನಷ್ಟು ಒಗ್ಗಟ್ಟು ಹಾಗೂ ಅಭಿವೃದ್ಧಿಯತ್ತ ಸಾಗಲೆಂದು ಅವರು ಶುಭ ಹಾರೈಸಿ ದುವಾ ಮಾಡಿದರು.

ಕಾರ್ಯಕ್ರಮದಲ್ಲಿ ಝೀನತ್ ಬಕ್ಷ್ ಹಾಗೂ ಈದ್ಗಾ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಅಬ್ದುಲ್ ಮಜೀದ್ ಫೈಝಿ ನಂದಾವರ, ಹುಸೈನ್ ದಾರಿಮಿ ರೆಂಜಲಾಡಿ, ತ್ವಾಖಾ ಉಸ್ತಾದರ ಪುತ್ರ ಹುಸೈನ್ ರಹ್ಮಾನಿ, ಅಶ್ರಫ್ ಮೇಯರ್, ದಕ್ಷಿಣ ಕನ್ನಡ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೈದಿನಬ್ಬ ಹಾಜಿ, ಶಾಕಿರ್ ಫರಂಗಿಪೇಟೆ , ಎಸ್ ಹಸನಬ್ಬ ಫರಂಗಿಪೇಟೆ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಅಡ್ಡೂರು ಹಾಜಿ, ಇಲ್ಯಾಸ್ ಅಲ್-ಝಯಾನ್ (ಮಂಗಳೂರು), ಸಮದ್ ಹಾಜಿ (ಮಂಗಳೂರು), ಫಕೀರಬ್ಬ ಮಾಸ್ಟರ್, ಅಬ್ದುಲ್ ರಹ್ಮಾನ್ ಕಕ್ಕಿಂಜೆ, ಪೇರಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ನವಾಝ್ ಕಟ್ಟೆ, ಕಾರ್ಯದರ್ಶಿ ಸ್ವಾದಿಕ್ ಕಟ್ಟೆ, ಶಮೀಮ್ ಯೂಸುಫ್ ಹಾಜಿ, ಸಾಲಿ ಮದ್ದಡ್ಕ, ಸಿರಾಜ್ ಚಿಲಿಂಬಿ, ನೌಶಾದ್ ಮದ್ದಡ್ಕ, ರಝಾಕ್ ಶಿರ್ಲಾಲ್, ಉಮರ್ ಕುಂಞ್ಞ ಮುಸ್ಲಿಯಾರ್, ಖಿಲರ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ಬಿ.ಎಚ್. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಬಿ.ಎಚ್. ರಝಾಕ್, ಕೋಶಾಧಿಕಾರಿ ಫೈಝಲ್ ಐ.ಜೆ., ಉಪಾಧ್ಯಕ್ಷರಾದ ಬಿ. ಶೇಖುಂಞ್ಞ ಹಾಗೂ ಮಹಮ್ಮದ್ ಶರೀಫ್, ಕಾರ್ಯದರ್ಶಿ ಮಹಮ್ಮದ್ ಕುದ್ರಡ್ಕ, ಸಮಿತಿ ಸದಸ್ಯರಾದ ಹಾರಿಸ್ ಐ.ಜೆ., ಇಸ್ಮಾಯಿಲ್ ಐ.ಬಿ., ಅಬ್ಬಾಸ್ ಹಂಝ, ಎನ್.ಎಸ್. ಅಬ್ದುಲ್ ರಹ್ಮಾನ್, ಸೈದಾಲಿ, ರಿಝ್ವಾನ್ ಬಿ.ಕೆ. ಸೇರಿದಂತೆ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

ಎಸ್.ಬಿ. ಮಹಮ್ಮದ್ ದಾರಿಮಿ ಅವರು ಜುಮ್ಮಾ ಖುತ್ಬಾ ನಿರ್ವಹಿಸಿ, ಸ್ವಾಗತಿಸಿದರು. ಖಿಲರ್ ಜುಮ್ಮಾ ಮಸೀದಿ ಕಾರ್ಯದರ್ಶಿ ಹನೀಫ್ ವರ್ಷ ವಂದಿಸಿದರು.

Related posts

ತಣ್ಣೀರುಪಂತ : ಅಡಿಕೆ ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು: ರೂ. 1.35ಲಕ್ಷ ಮೌಲ್ಯದ ಅಡಿಕೆ ಕಳ್ಳತನ

Suddi Udaya

ಜು. 27, 28: ಗೃಹಜ್ಯೋತಿ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ: ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಲಾಯಿಲ

Suddi Udaya

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮಟ್ಟದ ಎನ್.ಬಿ.ಎ ಮಾನ್ಯತೆ

Suddi Udaya

ಕ್ಯಾನ್ ಫಿನ್ ಹೋಮ್ ಲಿ.ನಿಂದ ಸಿ.ಎಸ್.ಆರ್ ಫಂಡ್ ಹಸ್ತಾಂತರ

Suddi Udaya

ನಾಲ್ಕೂರು: ಸೂಳಬೆಟ್ಟು ಮುರಳೀಧರ ಗೋಖಲೆ ರವರ ಮನೆಗೆ ಎಡತೊರೆ ಶ್ರೀ ಶಂಕರ ಭಾರತಿ ಶ್ರೀಗಳವರ ಭೇಟಿ: ಸ್ತೋತ್ರ ಪಾಠಶಾಲೆಗೆ ಚಾಲನೆ

Suddi Udaya

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯದ ಡೀನ್ ಗೀತಾ ಬಿ. ಶೆಟ್ಟಿಯವರಿಗೆ ಪಿಎಚ್.ಡಿ

Suddi Udaya
error: Content is protected !!