28.6 C
ಪುತ್ತೂರು, ಬೆಳ್ತಂಗಡಿ
August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ “ಎಸ್.ಡಿ.ಎಂ. ನೆನಪಿನಂಗಳ”

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ, ಹಿರಿಯ ವಿದ್ಯಾರ್ಥಿ ಸಂಘ (ರಿ.), ಉಜಿರೆ ವತಿಯಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ “ಎಸ್.ಡಿ.ಎಂ. ನೆನಪಿನಂಗಳ” ವಿದ್ಯಾರ್ಥಿವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ, ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆ. 11ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರುಗಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ್ ಪ್ರಭು, ಕಾರ್ಯದರ್ಶಿ ಬಿಕೆ ಧನಂಜಯ್ ರಾವ್ ಹಾಗೂ ಸನ್ಮಾನ ಸ್ವೀಕರಿಸಿದ ವೈದ್ಯರುಗಳಾದ ಡಾ| ಪ್ರಕಾಶ್ ಬಿ. ಶಕ್ತಿ ಕ್ಲಿನಿಕ್ ಉಜಿರೆ, ಡಾ| ರಾಜಾರಾಮ ಕೆ. ಬಿ. ಗಿರಿಜಾ ಡೆಂಟಲ್ ಕ್ಲಿನಿಕ್ ಉಪ್ಪಿನಂಗಡಿ, ಡಾ| ಎಂ. ಎಂ. ದಯಾಕರ್ ಶ್ರೀ ದಂತ ಚಿಕಿತ್ಸಾಲಯ ಉಜಿರೆ, ಡಾ| ಸದಾನಂದ ಪೂಜಾರಿ ಸೀನಿಯರ್ ಯೂರಾಲಾಜಿಸ್ಟ್ ಮಂಗಳೂರು, ಡಾ| ಶ್ರೀಹರಿ ಅಭಯ ಹಾಸ್ಪಿಟಲ್ ಗುರುವಾಯನಕೆರೆ, ಡಾ| ಪ್ರದೀಪ್ ಆಟಿಕುಕ್ಕೆ ಆರೋಗ್ಯ ಕ್ಲಿನಿಕ್ ನಾವೂರ, ಡಾ। ಶಶಿಕಾಂತ ಡೋಂಗ್ರೆ ಗಣೇಶ್ ಮೆಡಿಕಲ್ ಕೇರ್ ಬೆಳ್ತಂಗಡಿ, ಡಾ| ರಂಜನ್ ಕುಮಾರ್ ಇ.ಎನ್.ಟಿ. ಸ್ಪೆಷಲಿಸ್ಟ್ ಉಜಿರೆ, ಡಾ| ರೇಷ್ಠಾ ಸುನಾ ಡೆಂಟಲ್ ಕೇರ್ ಮೂಡುಬಿದಿರೆ, ಡಾ| ಶ್ರೀಹರ್ಷ ವಿನ್ಯಾಸ ದಂತ ಚಿಕಿತ್ಸಾಲಯ ಉಜಿರೆ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ನಡೆದ ಬಳಿಕ ಅರ್ಹ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಚೆಕ್ ಹಸ್ತಾಂತರ ನಡೆಯಿತು.
ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಸ್ವಾಗತಿಸಿದರು. ಡಾ. ದಿವಾಕರ ಕೆ ಹಾಗೂ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು. ರೋ. ಬಿಕೆ ಧನಂಜಯ್ ರಾವ್ ವಂದಿಸಿದರು.

Related posts

ಅಳದಂಗಡಿಯ ಡಾ| ಮಮತಾ ಎಚ್ ರವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

Suddi Udaya

ಬೆಳ್ತಂಗಡಿ ಎಸ್.ಐ.ಟಿ ವಿಚಾರಣೆಗೆ ಹಾಜರಾದ ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ಕೊಕ್ಕಡ: ಹೊಸೊಕ್ಲುವಿನಲ್ಲಿ ಬೃಹತ್ ಗಾತ್ರದ ಶಂಖಪಾಲ ಹಾವು ಪತ್ತೆ

Suddi Udaya

ಕಣಿಯೂರು ಅಶೋಕ್ ಕುಲಾಲ್ ರಿಂದ ಖಂಡಿಗ ವಾಸಪ್ಪ ಗೌಡರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಮೆಡಿಕಲ್ ಯೂನಿರ್ವಸಿಟಿ ಉಪಕುಲಪತಿ ಭೇಟಿ

Suddi Udaya
error: Content is protected !!