32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಸಂಘ-ಸಂಸ್ಥೆಗಳು

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ; ನಾವೆಲ್ಲರೂ ನಮ್ಮ ವೃತ್ತಿ ಬದುಕಿನಲ್ಲಿ ಕರ್ತವ್ಯದ ಪ್ರಜ್ಞೆಯೊಂದಿಗೆ ಉತ್ತಮ ನಾಗರಿಕ ಪ್ರಜ್ಞೆ ಕೂಡ ಬಹುಮುಖ್ಯವಾಗಿದೆ ಎಂದು ಬೆಳ್ತಂಗಡಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಹೇಳಿದರು.

oplus_2097154

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸ್ವಸ್ಥ ಸಮಾಜದ ಪರಿಕಲ್ಪಮೆಯೊಂದಿಗೆ “ಡ್ರಗ್ಸ್ ಮುಕ್ತ ಬೆಳ್ತಂಗಡಿ” ಅಭಿಯಾನದ ಕರಪತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

ಜೀವ ವಿಕಾಸವಾದಕ್ಕೆ ಹಿಂದಕ್ಕೆ ಹೋದಾಗ ಕಾಡಿನಲ್ಲಿ ವಾಸಮಾಡುತ್ತಿದ್ದ
ಮನುಷ್ಯ ತನ್ನ ಚಾಕಚಕ್ಯತೆಯಿಂದ ಸಂಘಟಿತ ಬದುಕು ಆರಂಭಿಸಿದ್ದರಿಂದ
ಸಮಾಜ ಸೃಷ್ಟಿಯಾಯಿತು.

oplus_140509186


ಪರಸ್ಪರ ಭಾವನೆ ಅರ್ಥ ಮಾಡಿಕೊಂಡು ಬೆಳೆಯುವಾಗ
ಸ್ನೇಹ ಪ್ರೀತಿ ನಡುವೆ ಅಸಹನೆ ದ್ವೇಷ ಆರಂಭವಾಯಿತು. ಈ ವೇಳೆ ಅಪರಾಧಗಳೂ ಕೂಡ ಸಂಭವಿಸುತ್ತದೆ. ಅವುಗಳ ನಿಯಂತ್ರಣ ಮತ್ತು ಜಾಗೃತಿಗಾಗಿ
ಸೇವಾ ತುಡಿತವುಳ್ಳ ಲಯನ್ಸ್ ನಂತಹಾ ಸಂಸ್ಥೆಗಳು ಹುಟ್ಟಿಕೊಂಡಿತು.
ತರುಣ ಭಾರತದಲ್ಲಿ
ದೇಶದ ಶಕ್ತಿ ಯುವಜನತೆ. ಈ ಯುವ ಜನತೆ ವ್ಯಸನಮುಕ್ತಗೊಂಡರೆವ
ಸೂಪರ್ ಪವರ್ ದೇಶ ಸಾಧ್ಯ. ಸಮಾಜದ ಉಳಿವಿಗೆ ಪ್ರತಿ ನಿತ್ಯ ಹೋರಾಟ. ಸಮಾಜ ಶುದ್ದೀಕರಣ ಆಗ್ತದೆ. ಪೊಲೀಸರು ಮಾತ್ರವಲ್ಲ. ಸಮಾಜ ಜೊತೆಗಿದ್ದರೆ ಸಾಧ್ಯ ಎಂದವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಮಾತನಾಡಿ, ಕಯನ್ಸ್‌ನ ಈ ವರ್ಷದ ಧ್ಯೇಯವೇ ಸ್ವಸ್ಥ ಸಮಾಜ ಎಂದರು.

ವೇದಿಕೆಯಲ್ಲಿ ಲಿಯೋ ಕ್ಲಬ್ ಅಧ್ಯಕ್ಷೆ ಅಬೀಜ್ಞಾ ಬೊಳ್ಮ, ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು.
ರಾಷ್ಟ್ರಪತಿ ಪದಕ ಮಾನ್ಯತೆ ಪಡೆದಿರುವ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಅವರನ್ನು ಹಾಹೂ ಕಾರ್ಗಿಲ್ ದಿನಾಚರಣೆಯ ಭಾಗವಾಗಿ ಮಾಜಿ ಯೋಧರಾದ ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ತಂಗಚ್ಚನ್ ಅವರನ್ನು ಸನ್ಮಾನಿಸಲಾಯಿತು.
ಬಂಗಾಡಿ ಶಾಲಾ ಸ್ಕೌಟ್ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಅಶ್ರಫ್ ಆಲಿಕುಂಞಿ ಮುಂಡಾಜೆ ದ್ವಜವಂದನೆ ನಡೆಸಿದರು. ಕಾರ್ಯಕ್ರಮ ಸಂಯೋಜಕ ಧರಣೇಂದ್ರ ಕೆ ಜೈನ್ ವೇದಿಕೆಗೆ ಆಹ್ವಾನಿಸಿದರು. ವಸಂತ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ವಂದಿಸಿದರು.

ಚಿತ್ರ ಶಿರ್ಷಿಕೆ:
“ಡ್ರಗ್ಸ್ ಮುಕ್ತ ಬೆಳ್ತಂಗಡಿ” ಅಭಿಯಾನದ ಕರಪತ್ರ ಬಿಡುಗಡೆಗೊಳಿಸುತ್ತಿರುವ ವೃತ್ತ ನಿರೀಕ್ಷಕ ರವಿ ಬಿ.ಎಸ್

Related posts

ಜ.22: ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಬೆಳ್ತಂಗಡಿ ತಾಲೂಕಿನಾದ್ಯಂತ ಸಂಭ್ರಮಿಸಲು ಸಜ್ಜಾಗಿರುವ ರಾಮಭಕ್ತರು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಯೋದ್ಯೆ ಶ್ರೀರಾಮ ಮಂದಿರದ ಆಮಂತ್ರಣ ಪತ್ರಿಕೆ ಹಸ್ತಾಂತರ

Suddi Udaya

ನಿಡ್ಲೆ: ಕಂರ್ಬಿತ್ಲು ನಿವಾಸಿ ಅಚ್ಚುತ ಹೆಬ್ಬಾರ್ ನಿಧನ

Suddi Udaya

ಮಚ್ಚಿನ: ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ‘ಸಸ್ಯ ಶ್ಯಾಮಲ’ ಜಿಲ್ಲಾ ಮಟ್ಟದ ಕಾರ್ಯಕ್ರಮದಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya

ಕುತ್ರೋಟ್ಟು ನಿವಾಸಿ ಫಯಾಜ್ ಸ್ಥಳೀಯ ಮಹಿಳೆ ಜೊತೆ ನಾಪತ್ತೆ ಶಂಕೆ: ಫಯಾಜ್ ನ ಪತ್ನಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು -ಪ್ರಕರಣ ದಾಖಲು

Suddi Udaya
error: Content is protected !!