November 18, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಹಕಾರದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ನ.22 ರಂದು ಬೆಳ್ತಂಗಡಿ ಹಳೆಕೋಟೆಯಲ್ಲಿ ಗೌಡೆರೆ ಗೌಜಿ ಗಮ್ಮತ್ತ್ – ತುಳು ಸಾಂಸ್ಕೃತಿಕ ಪರ್ಬ -2026: ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳುನಿವೃತ್ತ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವಿಶೇಷ ಸಾಧನೆಗೈದ ಸಮಾಜ ಬಾಂಧವರಿಗೆ ಸನ್ಮಾನಕುಟ್ಟಿಯಣ್ಣನ ಕುಟುಂಬ ನಾಟಕ,ಸುಮಾರು ಹತ್ತು ಸಾವಿರ ಜನ ಸೇರುವ ನಿರೀಕ್ಷೆ ಪತ್ರಿಕಾಗೋಷ್ಠಿಯಲ್ಲಿ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಹೇಳಿಕೆ

ಬೆಳ್ತಂಗಡಿ: ಗೌಡ ಸಮುದಾಯದ ನೆಲೆಗಟ್ಟು, ಸಂಸ್ಕೃತಿಯ ಪರಿಚಯವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಹಾಗೂ ಗೌಡ ಸಮುದಾಯದ ಅಸ್ತಿತ್ವ ಕಾಪಾಡಿಕೊಳ್ಳುವ ಉದ್ದೇಶದೊಂದಿಗೆ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಆಶ್ರಯದಲ್ಲಿ, ಯುವವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ “ಗೌಡರೆ ಗೌಜಿ ಗಮ್ಮತ್” ತುಳು ಸಾಂಸ್ಕೃತಿಕ ಸ್ಪರ್ಧೆ-2026 ಎಂಬ ವಿನೂತನ ಕಾರ್ಯಕ್ರಮವನ್ನು ನ.22 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣ ಮತ್ತು ಎಪಿಎಂಸಿ ಆವರಣದಲ್ಲಿನಡೆಯಲಿದೆ ಎಂದು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಹೇಳಿದರು. ಅವರು ನ.17 ರಂದು ವಾಣಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಪಥ ಸಂಚಲನವು ಬೆಳಿಗ್ಗೆ 8 ಗಂಟೆಗೆ ಬೆಳ್ತಂಗಡಿ ಸಂತೆಕಟ್ಟೆ ಅಯ್ಯಪ್ಪ ಮಂದಿರದಿಂದ ಹೊರಟು ರಾಜಮಾರ್ಗದಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಕಡೆಗೆ ಸಾಗಲಿದೆ. ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದ ಗ್ರಾಮ ಸಮಿತಿಗೆ ರೂ.25,000 ಬಹುಮಾನದೊಂದಿಗೆ ಶಾಶ್ವತ ಫಲಕ ನೀಡಲಾಗುವುದು.

ವಾಣಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನಿರ್ಮಿಸಲಾಗುವ ಮುಖ್ಯ ವೇದಿಕೆಯಲ್ಲಿ ತುಳುನಾಡ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಗ್ರಾಮ ಸಮಿತಿಗೆ ರೂ.50,000 ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನ ಪಡೆದ ಗ್ರಾಮ ಸಮಿತಿಗೆ ರೂ.30,000 ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ, ತೃತೀಯ ಸ್ಥಾನ ಪಡೆದ ಗ್ರಾಮ ಸಮಿತಿಗೆ ರೂ.15,000 ನಗದು ಪುರಸ್ಕಾರ ಮತ್ತು ಶಾಶ್ವತ ಫಲಕ ನೀಡಲಾಗುವುದು. ವಾಣಿ ಶಿಕ್ಷಣ ಸಂಸ್ಥೆಗಳ ಪಕ್ಕದಲ್ಲಿರುವ ಎ.ಪಿ.ಎಂ.ಸಿ ಪ್ರಾಂಗಣದಲ್ಲಿ ಪುರುಷರ ವಿಭಾಗದ ವಾಲಿಬಾಲ್, ಕಲ್ಪತರು ಎಜುಕೇಶನ್ ಟ್ರಸ್ಟ್ ಮೈದಾನದಲ್ಲಿ ಹಗ್ಗಜಗ್ಗಾಟ, ಎಪಿಎಂಸಿ ಆವರಣದಲ್ಲಿ ಮಹಿಳೆಯರ ವಿಭಾಗದ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಎಲ್ಲಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಸಾಂಸ್ಕೃತಿಕ ಸ್ಪರ್ಧೆಗೆ ಹೆಚ್ಚಿನ ಮಹತ್ವ ನೀಡುವುದೇ ಕಾರ್ಯಕ್ರಮದ ವಿಶೇಷತೆಯಾಗಿದೆ.

ಸಾಯಂಕಾಲ 7 ಗಂಟೆಗೆ ಕಿರಣ್ ಡಿ. ಪುಷ್ಪಗಿರಿ ಅವರ ಪ್ರಾಯೋಜಕತ್ವದಲ್ಲಿ ರಂಗ ತರಂಗ ಕಲಾವಿದರು ಕಾಪು ತಂಡದವರಿಂದ ‘ಕುಟ್ಟಿಯನ್ನನ ಕುಟುಂಬ’ ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳ ವೀಕ್ಷಣೆಗೆ ಇತರ ಎಲ್ಲಾ ಸಮಾಜಗಳ ಬಂಧುಗಳಿಗೂ ಮುಕ್ತ ಅವಕಾಶವಿದೆ ಎಂದು ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಪದ್ಮಗೌಡ, ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ, ಕೋಶಾಧಿಕಾರಿ ಯುವರಾಜ್ ಗೌಡ ಅನಾರು, ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಉಪಸ್ಥಿತರಿದ್ದರು.


Related posts

ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟ: ಅದ್ವಿಕ ಕೆ.ಪಿ. ರವರಿಗೆ ಚಿನ್ನದ ಪದಕ

Suddi Udaya

ಕರ್ತವ್ಯ ಲೋಪ ಆರೋಪ: ಮರೋಡಿ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ್ ಸಸ್ಪೆಂಡ್ ಗೆ ಸೂಚನೆ

Suddi Udaya

ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ: ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ

Suddi Udaya

ಬಳಂಜ ದೇವಸ್ಥಾನದ ಜಾತ್ರ ಮಹೋತ್ಸವ ಸಂಪನ್ನ: ದೈವ ದೇವರ ಭೇಟಿ

Suddi Udaya

ಕೊಕ್ರಾಡಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಮೇಲಂತಬೆಟ್ಟು: ನಡುವಡ್ಕ ನಿವಾಸಿ ಹೊನ್ನಮ್ಮ ನಿಧನ

Suddi Udaya
error: Content is protected !!