November 18, 2026
ಅಭಿನಂದನೆಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿರಾಜ್ಯ ಸುದ್ದಿವರದಿ

ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದ ಚಲನಚಿತ್ರ ‘ಸಂದರ್ಭ ಸಹಿತ ವಿವರಿಸಿ’ಗೆ ಉತ್ತಮ ಸ್ಪಂದನೆ

ಬೆಳ್ತಂಗಡ: ಸ್ಮಿತೇಶ್ ಎಸ್. ಬಾರ್ಯ ಅವರ ರಚನೆ ಮತ್ತು ನಿರ್ದೇಶನದಲ್ಲಿ, ಸಂತೋಷ್ ಎಚ್. ಹಾಗೂ ರವಿ ಸಂತೋಷ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಸಂದರ್ಭ ಸಹಿತ ವಿವರಿಸಿ’ ಕನ್ನಡ ಚಲನಚಿತ್ರದ ಪ್ರೀಮಿಯರ್ ಶೋ ಬೆಂಗಳೂರಿನ ಮಲ್ಲೇಶ್ವರಂನ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ನವೆಂಬರ್ 16ರಂದು ಯಶಸ್ವಿಯಾಗಿ ನಡೆಯಿತು.

ಈ ವಿಶೇಷ ಪ್ರದರ್ಶನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಪ್ರಣಯರಾಜ್ ಶ್ರೀನಾಥ್ ಅವರು ಆಗಮಿಸಿ ಚಿತ್ರ ವೀಕ್ಷಿಸಿದರು. ಅವರೊಂದಿಗೆ ದೀಪ ಕಟ್ಟೆ, ಹಿತೇಶ್ ಕಾಪಿನಡ್ಕ, ಪ್ರವೀಣ್ ಜೈನ್, ದಿವ್ಯ ಅಂಚನ್, ದೀಪಿಕಾ ಗೌಡ ಸೇರಿದಂತೆ ಚಿತ್ರರಂಗದ ಹಲವು ಕಲಾವಿದರು ಹಾಗೂ ಗಣ್ಯರು ಚಿತ್ರವನ್ನು ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರ ವೀಕ್ಷಿಸಿದ ಅನೇಕರು ಚಿತ್ರದ ಕಥಾವಸ್ತು, ನಿರೂಪಣೆ ಮತ್ತು ಉತ್ತಮ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರೀಮಿಯರ್ ಶೋನಲ್ಲಿ ಇಡೀ ಚಿತ್ರತಂಡವೂ ಭಾಗವಹಿಸಿತ್ತು.

ಸಿನಿಮಾ ವೀಕ್ಷಿಸಿದ ಪ್ರೇಕ್ಷಕರ ಅಭಿಪ್ರಾಯ ಹಾಗೂ ವಿಮರ್ಶೆಗಳನ್ನು ಚಿತ್ರತಂಡ ನೇರವಾಗಿ ಆಲಿಸಿತು. ಪ್ರೇಕ್ಷಕರು ಚಿತ್ರದ ಬಗ್ಗೆ ವ್ಯಕ್ತಪಡಿಸಿದ ಮೆಚ್ಚುಗೆ ಮತ್ತು ಉತ್ತಮ ಪ್ರತಿಕ್ರಿಯೆ ಚಿತ್ರತಂಡಕ್ಕೆ ಸಂತಸ ತಂದಿತು. ಚಿತ್ರಕ್ಕಾಗಿ ಇಡೀ ತಂಡ ಪಟ್ಟ ಶ್ರಮ, ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನಗಳು ಪ್ರೇಕ್ಷಕರ ಮನಸ್ಸನ್ನು ಮುಟ್ಟಿರುವುದು ಚಿತ್ರತಂಡಕ್ಕೆ ಮತ್ತಷ್ಟು ಸಂತೋಷ ಹಾಗೂ ಹೊಸ ಉತ್ಸಾಹ ನೀಡಿದೆ.‘ಸಂದರ್ಭ ಸಹಿತ ವಿವರಿಸಿ’ ಕೇವಲ ಮನರಂಜನೆಗೆ ಸೀಮಿತವಾಗದೆ, ಇಂದಿನ ಮಕ್ಕಳ ಜೀವನ, ಪೋಷಕರ ಜವಾಬ್ದಾರಿ ಹಾಗೂ ಶಿಕ್ಷಕರ ಪಾತ್ರದಂತಹ ಮಹತ್ವದ ವಿಚಾರಗಳನ್ನು ಒಳಗೊಂಡಿರುವ ಅರ್ಥಪೂರ್ಣ ಚಿತ್ರವಾಗಿದೆ. ಮಕ್ಕಳಿಂದ ಹಿಡಿದು ಪೋಷಕರು, ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಜೀವನದ ಯಾವುದಾದರೊಂದು ಸಂದರ್ಭವನ್ನು ಈ ಚಿತ್ರದ ಕಥೆಯಲ್ಲಿ ಗುರುತಿಸಿಕೊಳ್ಳುವಂತಹ ಕಥಾಹಂದರವನ್ನು ಹೊಂದಿದೆ.

ವಿಭಿನ್ನ ಕಥೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನವನ್ನು ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಅವರು ಮಾಡಿದ್ದಾರೆ. ಚಿತ್ರದ ನಿರೂಪಣೆ, ಪಾತ್ರಗಳ ಆಯ್ಕೆ ಹಾಗೂ ಕಥೆಯ ಆಶಯ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವಂತಿದೆ.ಚಿತ್ರದಲ್ಲಿ ಮಂಜುಷಾ ಭಗವಾನ್, ಶರವಣರಾಜ್, ಲೇಖಾ ಹೊಳ್ಳ, ಚೇತನ್ ಪಿಲಾರ್, ಮೋಹನ್ ಶೇಣಿ, ಶಿಲಾಶ್ರೀ ಮುಲ್ಕಿ, ಭಗವಾನ್, ಚಿತ್ರಾ ಭಗವಾನ್, ದೀಕ್ಷಿತ್ ಪೂಜಾರಿ, ಭವ್ಯ ಪೂಜಾರಿ, ಸಂತೋಷ್ ಎಚ್., ಡಾ. ವಿಜಯ್ ಗುಜ್ಜರ್, ಪ್ರೀತಿ ಸಿಂಚನ ಹಾಗೂ ಶ್ವೇತಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.ಚಿತ್ರದ ಸಂಭಾಷಣೆಯನ್ನು ಅನೀಶ್ ಪೂಜಾರಿ ವೇಣೂರು ರಚಿಸಿದ್ದು, ಛಾಯಾಗ್ರಹಣವನ್ನು ಸಂತೋಷ್ ಆಚಾರ್ಯ ಗುಂಪಲಾಜೆ ನಿರ್ವಹಿಸಿದ್ದಾರೆ. ಗಣೇಶ್ ನೀರ್ಚಾಲ್ ಸಂಕಲನ ಹಾಗೂ ಮಾನಸ ಹೊಳ್ಳ ಸಂಗೀತ ನೀಡಿದ್ದಾರೆ.

ನಿರ್ದೇಶನ ತಂಡದಲ್ಲಿ ಮನೋಜ್ ಆನಂದ್, ನಿಶಿತ್ ಶೆಟ್ಟಿ, ನೀರಜ್ ಕುಂಜರ್ಪ ಹಾಗೂ ಅನೀಶ್ ಪೂಜಾರಿ ವೇಣೂರು ಕಾರ್ಯನಿರ್ವಹಿಸಿದ್ದಾರೆ. ಸಾಹಿತ್ಯವನ್ನು ಅನೀಶ್ ಪೂಜಾರಿ ವೇಣೂರು, ಚಂದ್ರಹಾಸ ಬಳಂಜ, ನಾಗೇಶ್ ಪ್ರಸನ್ನ ಸಾತನೂರು ಬರೆದಿದ್ದಾರೆ. ಪ್ರಜ್ಞೇಶ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ ಹಾಗೂ ವಿನೋದ್ ರಾಜ್ ಕಲ್ಮಂಜ ಸಹಕರಿಸಿದ್ದಾರೆ. ಡಿ.ಟಿ.ಎಸ್. ಕಾರ್ಯವನ್ನು ಈಶ್ ರಾಜ್ ನಿರ್ವಹಿಸಿದ್ದು, ಪ್ರಚಾರ ಕಲೆಯಲ್ಲಿ ದೇವಿ ಹಾಗೂ ಮನೋಜ್ ಆನಂದ್ ಸಹಕರಿಸಿದ್ದಾರೆ.

ಸರ್ವಂತಾ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಅರ್ಪಿಸಿರುವ ಈ ಚಿತ್ರವು ಬೋಧಿ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಮೂಡಿಬಂದಿದೆ. ಪ್ರೀಮಿಯರ್ ಪ್ರದರ್ಶನದಲ್ಲಿ ಪ್ರೇಕ್ಷಕರು ಹಾಗೂ ಚಿತ್ರರಂಗದ ಗಣ್ಯ ಕಲಾವಿದರಿಂದ ದೊರೆತ ಉತ್ತಮ ಪ್ರತಿಕ್ರಿಯೆ ಚಿತ್ರತಂಡದಲ್ಲಿ ಹೊಸ ಉತ್ಸಾಹ ಮೂಡಿಸಿದೆ.ಒಟ್ಟಿನಲ್ಲಿ, ಉತ್ತಮ ಕಥೆ, ಅರ್ಥಪೂರ್ಣ ಸಂದೇಶ, ಪ್ರತಿಭಾವಂತ ಕಲಾವಿದರ ಅಭಿನಯ ಹಾಗೂ ಸಮರ್ಥ ತಾಂತ್ರಿಕ ತಂಡದ ಪರಿಶ್ರಮದೊಂದಿಗೆ ‘ಸಂದರ್ಭ ಸಹಿತ ವಿವರಿಸಿ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Related posts

ಉಜಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಕೊಕ್ಕಡ: ಹೊನ್ನಮ್ಮ ಹೃದಯಾಘಾತದಿಂದ ನಿಧನ

Suddi Udaya

ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

Suddi Udaya

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ: ಏಕಾಹ ಭಜನಾ ಕಾರ್ಯಕ್ರಮ ಮತ್ತು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ, ಸಾಧಕರಿಗೆ ಸನ್ಮಾನ

Suddi Udaya

ಗರ್ಡಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣಕ್ಕೆ ಹಾಗೂ ಬಂಗಾಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರಕ್ಕೆ ರೂ. 95.58 ಲಕ್ಷ ಸರಕಾರದಿಂದ ಅನುದಾನ ಬಿಡುಗಡೆ

Suddi Udaya
error: Content is protected !!