November 18, 2026
ಸಂಘ-ಸಂಸ್ಥೆಗಳು

ಲಯನ್ಸ್ ಕ್ಲಬ್ ನಿಂದ ದೀಪಾವಳಿ ಸಂಭ್ರಮ ಕಾರ್ಯಕ್ರಮ

ಬೆಳ್ತಂಗಡಿ; ಭಾರತ ದೇಶ ಸಂಸ್ಕಾರದ ಆಚರಣೆ ಮತ್ತು ಮೌಲ್ಯಗಳ ಪಸರಿಸುವಿಕೆಯಲ್ಲಿ ಪರಮೋಚ್ಚ ಸ್ಥಾನದಲ್ಲಿದೆ. ಹಿರಿಯರೆಂಬ ಬೇರು ಗಟ್ಟಿಗೊಳಿಸಿಕೊಂಡು ಇಂದಿನ ಪೀಳಿಗೆಯಾದ ಮಕ್ಕಳು ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನ‌ ನಡೆಸಬೇಕು. ಅಂತಹಾ ಸಂಸ್ಕಾರದ ಪಸರಿಸುವಿಕೆಯ ಭಾಗವಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಹಮ್ಮಿಕೊಂಡಿರುವ ಕಾರ್ಯಕ್ರಮ ಸಂಸ್ಕಾರ ಹಚ್ಚುವ ಕೆಲಸವಾಗಿದೆ ಎಂದು ಅಂತಾರಾಷ್ಟ್ರೀಯ ತರಬೇತುದಾರ ಟಿ. ಕೃಷ್ಣಮೂರ್ತಿ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ನ.17 ರಂದು ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ದೀಪಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಜೀವನದಲ್ಲಿ ಗುಣನಡತೆ, ದೃಢತೆ, ಸೃಜನಶೀಲತೆ, ಕೌಶಲ್ಯತೆ, ಬದ್ಧತೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಾಣಲು ಸಾಧ್ಯವಿದೆ. ಸಮಾಜದಲ್ಲಿ
ದುರ್ಬಲವರ್ಗದವರಿಗೆ
ಭರವಸೆ ಮೂಡಿಸುವಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಅವರು ಸ್ವಾಗತಿಸಿದರು.

ದೀಪಾವಳಿ ಕಾರ್ಯಕ್ರಮ ಸಂಯೋಜಕ ಪ್ರಕಾಶ ಶೆಟ್ಟಿ ನೊಚ್ಚ ಸಾಂದರ್ಭಿಕವಾಗಿ ಮಾತನಾಡಿದರು. ದೀಪಾವಳಿ ಭೋಜನದ
ಪ್ರಾಯೋಜಕತ್ವ ವಹಿಸಿದ ಭುಜಬಲಿ ಧರ್ಮಸ್ಥಳ ಹಾಗೂ ಚಂದ್ರಶೇಕರ ಶೆಟ್ಟಿ ಮತ್ತು ಸರಸ್ವತಿ ದಂಪತಿಯನ್ನು ಗೌರವಿಸಲಾಯಿತು. ಗೋಪಾಲಕೃಷ್ಣ ಭಟ್ ಕಾಂಚೋಡು ಅವರು ಎಲ್ಲರಿಗೂ ಡ್ರಾಗನ್ ಹಣ್ಣನ್ನು ವಿತರಿಸಿದರು.
ವಲಯಾಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ, ಕ್ಲಬ್ ನ ಜೊತೆ ಕಾರ್ಯದರ್ಶಿ ದತ್ತಾತ್ರೇಯ ಗೊಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗನ್ನಾಥ ಧ್ವಜವಂದನೆ ನೆರವೇರಿಸಿದರು. ಜಯರಾಮ ಭಂಡಾರಿ ನೀತಿ‌ಸಂಹಿತೆ ವಾಚಿಸಿದರು. ವಸಂತ ಶೆಟ್ಟಿ ಶ್ರದ್ಧಾ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ನ ಕಾರ್ಯಕ್ರಮ‌ ಸಂಯೋಜಕ ಧರಣೇಂದ್ರ ಕೆ ಜೈನ್ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ್ ವಂದಿಸಿದರು.‌

Related posts

ನೆಲ್ಯಾಡಿ ಅಲ್ಫೋನ್ಸ ಚರ್ಚ್ ವತಿಯಿಂದ ಡೇವಿಡ್ ಜೈಮಿ ಕೊಕ್ಕಡ ರಿಗೆ ಸನ್ಮಾನ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ಹೈನುಗಾರಿಕೆ ತರಬೇತಿಯ ಸಮಾರೋಪ

Suddi Udaya

ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ಮತ್ತು ಕ್ಯಾಲೆಂಡರ್ ಬಿಡುಗಡೆ

Suddi Udaya

ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಕಳೆಂಜ ಬಿ ಕಾರ್ಯಕ್ಷೇತ್ರದ ಸ್ಪಂದನ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ನ.20: ಚಾರ್ಮಾಡಿಯಲ್ಲಿ ಸಹಕಾರ ಸಪ್ತಾಹ ಸಮಾರೋಪ

Suddi Udaya

ಬಾರ್ಯ ಪ್ಯಾಕ್ಸ್ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ದಿಗ್ವಿಜಯ

Suddi Udaya
error: Content is protected !!