32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಬೆಳ್ತಂಗಡಿ ವತಿಯಿಂದ “ಡ್ರಗ್ಸ್ ಮುಕ್ತ ಬೆಳ್ತಂಗಡಿ” ಅಭಿಯಾನದ ಕರಪತ್ರ ಅನಾವರಣ

ಬೆಳ್ತಂಗಡಿ: ನಾವೆಲ್ಲರೂ ನಮ್ಮ ವೃತ್ತಿ ಬದುಕಿನಲ್ಲಿ ಕರ್ತವ್ಯದ ಪ್ರಜ್ಞೆಯೊಂದಿಗೆ ಉತ್ತಮ ನಾಗರಿಕ ಪ್ರಜ್ಞೆ ಕೂಡ ಬಹುಮುಖ್ಯವಾಗಿದೆ ಎಂದು ಬೆಳ್ತಂಗಡಿ ಗ್ರಾಮಾಂತರ ಸರ್ಕಲ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಸ್ವಸ್ಥ ಸಮಾಜದ ಪರಿಕಲ್ಪಮೆಯೊಂದಿಗೆ “ಡ್ರಗ್ಸ್ ಮುಕ್ತ ಬೆಳ್ತಂಗಡಿ” ಅಭಿಯಾನದ ಕರಪತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.

ಜೀವ ವಿಕಾಸವಾದಕ್ಕೆ ಹಿಂದಕ್ಕೆ ಹೋದಾಗ ಕಾಡಿನಲ್ಲಿ ವಾಸಮಾಡುತ್ತಿದ್ದ ಮನುಷ್ಯ ತನ್ನ ಚಾಕಚಕ್ಯತೆಯಿಂದ ಸಂಘಟಿತ ಬದುಕು ಆರಂಭಿಸಿದ್ದರಿಂದ ಸಮಾಜ ಸೃಷ್ಟಿಯಾಯಿತು.
ಪರಸ್ಪರ ಭಾವನೆ ಅರ್ಥ ಮಾಡಿಕೊಂಡು ಬೆಳೆಯುವಾಗ ಸ್ನೇಹ ಪ್ರೀತಿ ನಡುವೆ ಅಸಹನೆ ದ್ವೇಷ ಆರಂಭವಾಯಿತು. ಈ ವೇಳೆ ಅಪರಾಧಗಳೂ ಕೂಡ ಸಂಭವಿಸುತ್ತದೆ. ಅವುಗಳ ನಿಯಂತ್ರಣ ಮತ್ತು ಜಾಗೃತಿಗಾಗಿ ಸೇವಾ ತುಡಿತವುಳ್ಳ ಲಯನ್ಸ್ ನಂತಹಾ ಸಂಸ್ಥೆಗಳು ಹುಟ್ಟಿಕೊಂಡಿತು. ತರುಣ ಭಾರತದಲ್ಲಿ ದೇಶದ ಶಕ್ತಿ ಯುವಜನತೆ. ಈ ಯುವ ಜನತೆ ವ್ಯಸನಮುಕ್ತಗೊಂಡರೆ
ಸೂಪರ್ ಪವರ್ ದೇಶ ಸಾಧ್ಯ. ಸಮಾಜದ ಉಳಿವಿಗೆ ಪ್ರತಿ ನಿತ್ಯ ಹೋರಾಟ. ಸಮಾಜ ಶುದ್ದೀಕರಣ ಆಗುತ್ತದೆ. ಪೊಲೀಸರು ಮಾತ್ರವಲ್ಲ, ಸಮಾಜ ಜೊತೆಗಿದ್ದರೆ ಸಾಧ್ಯ ಎಂದವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ರಘುರಾಮ ಶೆಟ್ಟಿ ಮಾತನಾಡಿ, ಕಯನ್ಸ್‌ನ ಈ ವರ್ಷದ ಧ್ಯೇಯವೇ ಸ್ವಸ್ಥ ಸಮಾಜ ಎಂದರು.

ವೇದಿಕೆಯಲ್ಲಿ ಲಿಯೋ ಕ್ಲಬ್ ಅಧ್ಯಕ್ಷೆ ಅಭೀಜ್ಞಾ ಬೊಳ್ಮ, ಕೋಶಾಧಿಕಾರಿ ನಾಣ್ಯಪ್ಪ ನಾಯ್ಕ್ ಉಪಸ್ಥಿತರಿದ್ದರು.
ರಾಷ್ಟ್ರಪತಿ ಪದಕ ಮಾನ್ಯತೆ ಪಡೆದಿರುವ ಇನ್ಸ್‌ಪೆಕ್ಟರ್ ರವಿ ಬಿ.ಎಸ್ ಅವರನ್ನು ಹಾಗೂ ಕಾರ್ಗಿಲ್ ದಿನಾಚರಣೆಯ ಪ್ರಯುಕ್ತ ಮಾಜಿ ಯೋಧರಾದ ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ತಂಗಚ್ಚನ್ ಅವರನ್ನು ಸನ್ಮಾನಿಸಲಾಯಿತು.
ಬಂಗಾಡಿ ಶಾಲಾ ಸ್ಕೌಟ್ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಅಶ್ರಫ್ ಆಲಿಕುಂಞಿ ಮುಂಡಾಜೆ ದ್ವಜವಂದನೆ ನಡೆಸಿದರು. ಕಾರ್ಯಕ್ರಮ ಸಂಯೋಜಕ ಧರಣೇಂದ್ರ ಕೆ ಜೈನ್ ವೇದಿಕೆಗೆ ಆಹ್ವಾನಿಸಿದರು. ವಸಂತ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಕಾರ್ಯದರ್ಶಿ ಅಮಿತಾನಂದ ಹೆಗ್ಡೆ ವಂದಿಸಿದರು.

Related posts

ಬಜಿರೆ: ಚಿರತೆ ಹಾವಳಿಗೆ ಬೋನ್ ಇರಿಸಿದ ಅರಣ್ಯ ಇಲಾಖೆ

Suddi Udaya

ಮದ್ದಡ್ಕದಲ್ಲಿ ಗಾಂಜಾ ಮಾರಾಟ: ಆರೋಪಿ ಬಂಧನ: 90 ಗ್ರಾಂ ಗಾಂಜಾ ವಶ

Suddi Udaya

ಇಂದಬೆಟ್ಟು ಎಮ್.ಜೆ.ಎಮ್ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Suddi Udaya
error: Content is protected !!