32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಡಿಸಿ ಮನ್ನಾ ಜಮೀನು ಹಂಚಿಕೆ : ಕಂದಾಯ, ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರ ಭೇಟಿಗೆ ದಲಿತ ನಾಯಕರ ಸಭೆಯಲ್ಲಿ ನಿರ್ಧಾರ

ಬೆಳ್ತಂಗಡಿ: ಪ.ಜಾತಿ/ ಪಂಗಡಗಳ ಹಲವು ವರ್ಷಗಳ ಬೇಡಿಕೆಯಾಗಿರುವ ಡಿಸಿ ಮನ್ನಾ ಜಮೀನು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಕಂದಾಯ ಸಚಿವರು , ದ.ಕ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರದಲ್ಲಿ ಭೇಟಿಗೆ ತಾಲೂಕಿನ ದಲಿತ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆ.17ರಂದು ಸಭೆ ಸೇರಿದ ದಲಿತ ನಾಯಕರು ಡಿಸಿ ಮನ್ನಾ ಜಮೀನು ಹಂಚಿಕೆ ಕಾರ್ಯತಂತ್ರದ ತೀರ್ಮಾನ ಕೈಗೊಂಡರು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆ ಬಗ್ಗೆ ಘೋಷಣೆ ಮಾಡಲಾಗಿತ್ತು. ಈ ವಿಚಾರದ ಮುಂದುವರಿದ ಭಾಗವಾಗಿ 2024 ರಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣ ಬೈರೆಗೌಡರವರು ಡಿಸಿ ಮನ್ನಾ ಜಮೀನು ಹಂಚಿಕೆ ಬಗ್ಗೆ ಆದೇಶಿಸಿದ್ದರೂ ಕೂಡ ಇನ್ನೂ ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಡಿಸಿ ಮನ್ನಾ ಜಮೀನು ಹಂಚಿಕೆಗಾಗಿ ಈಗಿನ ಕಂದಾಯ ಸಚಿವರು , ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಡಿಸಿ ಮನ್ನಾ ಜಮೀನು ಹಂಚಿಕೆ ವಿಚಾರ ವೇಗ ಪಡೆಯಲಿದೆ.

ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್‌ ಕುಕ್ಕೇಡಿ ದಲಿತ ಮುಖಂಡರುಗಳಾದ ಬಿ.ಕೆ ವಸಂತ್ , ಬೇಬಿ ಸುವರ್ಣ , ವೆಂಕಣ್ಣ ಕೊಯ್ಯೂರು , ಜಯಾನಂದ ಪಿಲಿಕಲ , ನೇಮಿರಾಜ್ ಕಿಲ್ಲೂರು , ಶ್ರೀಧರ್ ಕಳೆಂಜ , ಬಾಬಿ ಮಾಲಾಡಿ , ಸುಕೇಶ್ ಮಾಲಾಡಿ , ಉಮೇಶ್ ಮಾಲಾಡಿ ,ನಾರಾಯಣ ಪುದುವೆಟ್ಟು , ಗಣೇಶ್ ಕುಕ್ಕೇಡಿ , ವಿಜಯ ಕುಮಾರ್ ಬಜಿರೆ , ಎಸ್ಎಂಟಿ ಸುಂದರ್ , ಶ್ರೀನಿವಾಸ್ ಉಜಿರೆ , ಯತೀಶ್ ಧರ್ಮಸ್ಥಳ , ರಮೇಶ್ ಗಾಂಧಿನಗರ , ಹರೀಶ್ ಗಾಂಧಿನಗರ , ಗಣೇಶ್ ಧರ್ಮಸ್ಥಳ , ಪರಮೇಶ್ವರ ಅಂಡಿಂಜೆ , ಚರಣ್ ಕುಕ್ಕೇಡಿ , ಉದ್ಯಮಿ ರೋಹಿತ್ ಧರ್ಮಸ್ಥಳ , ಯುವ ನ್ಯಾಯವಾದಿ ಭರತ್ ಉಜಿರೆ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

Related posts

ಪುದುವೆಟ್ಟು: ಹಿರಿಯ ಪ್ರಗತಿಪರ ಕೃಷಿಕ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್ ನಿಧನ

Suddi Udaya

ಬೆಳ್ತಂಗಡಿ: ನಿವೃತ್ತ ಶಿಕ್ಷಕ, ಯಕ್ಷಗಾನದ ಹಿರಿಯ ಅರ್ಥಧಾರಿ ಕೆ.ವಿ. ಗಣಪಯ್ಯ ನಿಧನ

Suddi Udaya

ಕಳೆಂಜ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ತೋಟತ್ತಾಡಿ ಗ್ರಾಮ ಸಮಿತಿ ಹಾಗೂ ಬೂತ್ ಸಮಿತಿಗಳ ವತಿಯಿಂದ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಎಂ ನಾಗೇಶ್ ಕುಮಾರ್ ಗೌಡರಿಗೆ ಸನ್ಮಾನ

Suddi Udaya

ಗುರಿಪಳ್ಳ ಒಕ್ಕೂಟದ ವತಿಯಿಂದ ನಿಡಿಗಲ್ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

Suddi Udaya

ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿರಿ ಕೇಂದ್ರ ಕಛೇರಿಗೆ ಭೇಟಿ

Suddi Udaya
error: Content is protected !!