31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ : ಅರಸಿಕಟ್ಟೆಯಲ್ಲಿ ರಸ್ತೆಯ ಹೊಂಡಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸ್ಥಳೀಯರು

ಬೆಳ್ತಂಗಡಿ: ಕಾರ್ಕಳ-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸಿಕಟ್ಟೆ ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಹೊಂಡಗುಂಡಿಗಳು ಉಂಟಾಗಿದ್ದು,ವಾಹನ ಸವಾರರಿಗೆ ಮರಣಗುಂಡಿಗಳಾಗಿ ಪರಿವರ್ತನೆ ಆಗಿತ್ತು. ಈಗಾಗಲೇ ಇಲ್ಲಿ ಅನೇಕ ವಾಹನ ಸವಾರರಿಗೆ ಅಪಘಾತ ಉಂಟಾಗಿ ಗಾಯಗೊಂಡಿರುತ್ತಾರೆ. ಅದರಲ್ಲೂ ಪ್ರವಾಸಿಗರು ರಾತ್ರಿ ವೇಳೆಯಲ್ಲಿ ಇಲ್ಲಿ ಹೊಂಡಗುಂಡಿಗಳು ಇರುವುದನ್ನು ತಿಳಿಯದೇ ವೇಗವಾಗಿ ವಾಹನ ಚಲಾಯಿಸುವುದರಿಂದ ಈ ಹಿಂದೆ ಅನೇಕ ಅಪಘಾತಗಳು ಸಂಭವಿಸಿವೆ. ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.


ಇದೀಗ ಆ.18ರಂದು ರಿಕ್ಷಾ ಚಾಲಕರು ಹಾಗೂ ಸ್ಥಳೀಯರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಶ್ರಮದಾನದ ಮೂಲಕ ಹೊಂಡ-ಗುಂಡಿಗಳನ್ನು ಮುಚ್ಚಿ ವಾಹನ ಸವಾರರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಶ್ರಮದಾನದಲ್ಲಿ ರಿಕ್ಷಾ ಚಾಲಕರಾದ ಲಕ್ಷ್ಮಣ್, ಸತೀಶ್ ಜೈನ್, ಸಂತೋಷ್, ಸ್ಥಳೀಯರಾದ ಲಿಂಗಪ್ಪ ಮಲೆಕುಡಿಯ, ಪಾರ್ಶ್ವನಾಥ ಜೈನ್, ರವೀಶ್, ಪ್ರಜ್ಞೇಶ್ ಕುತ್ಲೂರು ಭಾಗವಹಿಸಿದ್ದರು.

Related posts

ಲಾಯಿಲ: ಶಿವಪ್ಪ ಬೆರ್ಕೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬೈಪಾಡಿ ಕಾರ್ಯಕ್ಷೇತ್ರದ ‘ಶ್ರೀರಾಮ’ ನೂತನ ಸಂಘದ ಉದ್ಘಾಟನೆ

Suddi Udaya

ಬೆಳ್ತಂಗಡಿ: ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ

Suddi Udaya

ಭಾರತೀಯ ರೆಡ್ ಕ್ರಾಸ್ ಸೊಸೈಟಿಯಿಂದ ರಾಮಣ್ಣ ಗೌಡ ರವರಿಗೆ ವಾಟರ್ ಬೆಡ್ ಹಸ್ತಾಂತರ

Suddi Udaya
error: Content is protected !!