28.4 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ ವರ್ಧನ ಕಾರ್ಯಾಗಾರ

ಬೆಳ್ತಂಗಡಿ: ಕಾಲೇಜಿನ ಐಕ್ಯೂಎಸಿ ಹಾಗೂ ಪ್ಲೇಸ್ಮೆಂಟ್ ಸೆಲ್ ಇದರ ಸಹಯೋಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಾಂದಿ ಫೌಂಡೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಒಂದು ವಾರದ ಕೌಶಲ್ಯ ವರ್ಧನ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಗಾರವನ್ನು ನಾಂದಿ ಫೌಂಡೇಶನ್ ಇದರ ತರಬೇತಿದಾರರಾದ ಶ್ರೀಮತಿ ಸಾಧಿಕ ಬಾನು ಉದ್ಘಾಟಿಸಿ ನಾಂದಿ ಫೌಂಡೇಶನ್ ದೇಶದಾದ್ಯಂತ 24 ರಾಜ್ಯಗಳಲ್ಲಿ ಈ ರೀತಿಯ ತರಬೇತಿಯನ್ನು ನೀಡುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಬದಲಾವಣೆಯನ್ನು ತರುವುದರ ಮುಖಾಂತರ ಅವರ ಔದ್ಯೋಗಿಕ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಪದ್ಮನಾಭ ಕೆ ಇವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕಳೆದ ವರ್ಷ ನಾಂದಿ ಫೌಂಡೇಶನ್ ತರಬೇತಿಯಿಂದಾಗಿ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಉದ್ಯೋಗದಲ್ಲಿ ಸಂದರ್ಶನವನ್ನು ಎದುರಿಸುವಾಗ ಅನುಕೂಲವಾಗಿದೆ ಹಾಗಾಗಿ ನಾಂದಿ ಫೌಂಡೇಶನ್ ಗೆ ಧನ್ಯವಾದ ತಿಳಿಸಿದರು.

ವೇದಿಕೆಯಲ್ಲಿ ಪ್ಲೇಸ್ಮೆಂಟ್ ಆಫೀಸರ್ ಗಳಾದ ಪ್ರೊ. ರಶ್ಮಿ ಹಾಗೂ ಪ್ರೊ. ಕವಿತಾ ಉಪಸ್ಥಿತರಿದ್ದರು. ಸ್ನಾತ್ತಕೋತ್ತರ ವಿಭಾಗದ ಸಂಚಾಲಕರಾದ ಡಾ. ರವಿ ಎಂ ಎನ್ ಸ್ವಾಗತಿಸಿ ಅಂತಿಮ ಬಿಬಿಎ ವಿದ್ಯಾರ್ಥಿನಿ ಕುಮಾರಿ ತೇಜಾಕ್ಷಿ ವಂದಿಸಿದರು.
ಅಂತಿಮ ಎಂ.ಕಾಂ.ನ ಶುಭಶ್ರೀ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ಪ್ರೆಸೆಂಟೇಶನ್ ಸ್ಕಿಲ್ಸ್ ಕಾರ್ಯಕ್ರಮ

Suddi Udaya

ಉಜಿರೆ-ಧರ್ಮಸ್ಥಳ ರಸ್ತೆಯ ನೀರಚಿಲುಮೆಯ ಬಳಿ ಮೀನು ಸಾಗಾಟದ ಲಾರಿ ಹಾಗೂ ಓಮ್ನಿ ಕಾರು ನಡುವೆ ಡಿಕ್ಕಿ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಉಜಿರೆ ಅನುಗ್ರಹ ಆಂ.ಮಾ. ಶಾಲಾ ಪ್ರಾರಂಭೋತ್ಸವ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ನಿರಾಕರಣೆ

Suddi Udaya

ಮರೋಡಿ: ಕೃಷಿಕ ಚೀಂಕ್ರ ಪೂಜಾರಿ ನಿಧನ

Suddi Udaya
error: Content is protected !!