23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಗುರುದೇವ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಇದರ ಆಶ್ರಯದಲ್ಲಿ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ನೇತೃತ್ವದಲ್ಲಿ ಸಂಚಾರ ನಿಯಮಗಳ ಪಾಲನೆ ಹಾಗೂ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ಕಾರ್ಯಾಗಾರ ಆ.20 ರಂದುಕಾಲೇಜಿನಲ್ಲಿ ನಡೆಯಿತು.

ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಿಂಗಪ್ಪ ಜಕ್ಕಣ್ಣನವರ ಮಾಹಿತಿ ನೀಡಿ, ‘ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದು ಪ್ರತಿ ಪ್ರಯಾಣಿಕರ ಕರ್ತವ್ಯವಾಗಿದೆ. ನಿಯಮಗಳನ್ನು ಪಾಲಿಸುವುದರಿಂದ ಯಾವುದೇ ಆತಂಕವಿಲ್ಲದೆ ಸಂಚರಿಸಬಹುದು’ ಎಂದು ಹೇಳಿ ಸಂಚಾರ ನಿಯಮಗಳ ಹಲವಾರು ಮಾಹಿತಿಗಳನ್ನು ನೀಡಿದರು.

ಪೋಕ್ಸೋ ಕಾಯಿದೆ ಕುರಿತು ಮಾತನಾಡಿ, ‘ಇಂದು ಪೋಕ್ಸೋ ಗಂಭೀರ ಪ್ರಕರಣವಾಗಿದ್ದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳು ಯಾವುದೇ ಆತಂಕವಿಲ್ಲದೆ ದೂರು ನೀಡಬಹುದು. ಭಯ ರಹಿತ ಸಮಾಜ ಸೃಷ್ಟಿಸುವುದು ಪೊಲೀಸರು ಹಾಗೂ ಸಾರ್ವಜನಿಕರ ಕೆಲಸವಾಗಿದೆ’ ಎಂದರು.

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಗುರುದೇವ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಇದ್ದರು.

ಕಾಲೇಜಿನ ಉಪ ಪ್ರಾಂಶುಪಾಲ ಬಿ. ಎ. ಶಮೀವುಲ್ಲಾ ಸ್ವಾಗತಿಸಿ, ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ನಿರೂಪಿಸಿದರು. ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಿಕಿ ಸುವರ್ಣ ವಂದಿಸಿದರು.

Related posts

ಕುತ್ಲೂರು: ಪುನರ್ವಸತಿ ಹೊಂದಿರುವ ಫಲಾನುಭವಿಗಳಿಗೆ ಉಚಿತ ಕೃಷಿ ಉಪಕರಣಗಳ ವಿತರಣೆ

Suddi Udaya

ರಾಷ್ಟ್ರ ಮುದ್ರೆಯನ್ನು ಅತೀ ಚಿಕ್ಕ ಅಳತೆಯಲ್ಲಿ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆಗೈದ ಮೆಡಿಕಲ್ ವಿದ್ಯಾರ್ಥಿನಿ ಅಪೇಕ್ಷ ಎನ್.ಎಸ್ ಉಜಿರೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬ್ಯಾಂಕ್ ಆಫ್ ಬರೋಡದ ಡಿಆರ್‌ಎಂ ಯೋಗೀಶ್ ಭೇಟಿ

Suddi Udaya

ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ವತಿಯಿಂದ ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Suddi Udaya

ಬಳಂಜ”ಮನಸ್ವಿನಿ” ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ನ.14: ಮಡಂತ್ಯಾರು ಪ್ರಾ.ಕೃ.ಪ. ಸಹಕಾರ ಸಂಘ ನೇತೃತ್ವದಲ್ಲಿ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

Suddi Udaya
error: Content is protected !!