30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಗುರುವಾಯನಕೆರೆ ಎನ್‌ಇಟಿ ಕಾಲೇಜಿನಲ್ಲಿ ಓಣಂ ಸಂಭ್ರಮ: ಮಾವೇಲಿ ಪುರಪ್ರವೇಶ-ಚೆಂಡೆನಾದಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು

ಬೆಳ್ತಂಗಡಿ: ಕೇರಳದ ಅತ್ಯಂತ ಪ್ರಸಿದ್ಧವಾದ ಸುಗ್ಗಿ ಮತ್ತು ಸಾಂಸ್ಕೃತಿಕ ಹಬ್ಬವಾಗಿರುವ ಓಣಂ, ಜಾತಿ, ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಸೋದರತ್ವ ಹಾಗೂ ಭಾವೈಕ್ಯತೆಯ ಸಂಕೇತವಾಗಿದೆ. ಭಾರತದಲ್ಲಿ ಇನ್ನೂ ಸಮಾನತೆ ಬಂದಿಲ್ಲ ದೊಡ್ಡವರು ದೊಡ್ಡವಾರಗಿದ್ದು, ಬಡವರು ಬಡವರಾಗಿದ್ದಾರೆ ಪರಸ್ಪರ ಇನ್ನೊಬ್ಬರ ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ಸಹಾಯ ಮಾಡುವ ಮನೋಭಾವ ನಮ್ಮಲ್ಲಿ ರೂಡಿಯಾಗದಿರುವುದು ವಿಪರ್ಯಾಸ. ಹತ್ತು ಮನಸ್ಸುಗಳು ಒಗ್ಗೂಡಿ ಪರಸ್ಪರ ಅನ್ಯೋನತೆ ಹಾಗೂ ಏಕಾತೆಯಿಂದ ಜೀವಿಸುವ ಸದ್ಗುಣದ ಚಿಂತನೆಗಳನ್ನು ಸಾರುವ ಓಣಂ ಆಚರಣೆ ನಮ್ಮದಾಗಲಿ ಎಂದು ಬೆಂಗಳೂರಿನ ಸೋಲುರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪಾತಿಗಳು ಬಲ್ಯೋಟ್ಟು ಶ್ರೀ ವಿಖ್ಯಾತನಾಂದ ಸ್ವಾಮೀಜಿಗಳು ಶುಭಾಶಂಸನೆ ನೀಡಿದರು.

ಅವರು ಗುರುವಾಯನಕೆರೆ ಎನ್‌ಇಟಿ ಗ್ರೂಫ್ ಆಫ್ ಇನ್‌ಸ್ಟಿಯೂಷನ್‌ನಲ್ಲಿ. ಆ.21 ರಂದು ನಡೆದ ಓಣಂ ಆಚರಣೆಯ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಎನ್‌ಇಟಿ ಗ್ರೂಪ್ಸ್ನ ಸಂಚಾಲಕ ಸಾಜಿ ಪಿ.ಆರ್., ಕಾರ್ಯದರ್ಶಿ ಜೇರಿಲ್ ಜೋಸೆಫ್, ಅಭಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶ್ರೀಹರಿ ಕೆ., ವ್ಯವಸ್ಥಾಪಕ ನಿರ್ದೇಶಕಿ ಡಾ.ವಿದ್ಯಾ ಗೌರಿ ಎಂ. ಹಾಗೂ ಎನ್‌ಇಟಿ ಗ್ರೂಪ್ಸ್ನ ಮುಖ್ಯಸ್ಥ(ಡೀನ್) ಮನು ಕೆ.ಜೋಸೆಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಓಣಂ ಆಚರಣೆ ಅಂಗವಾಡಿ ಸಂಸ್ಥೆಯ ಕ್ಯಾಂಪ್ಸ್ ಹೂವುಗಳಿಂದ ಸಿಂಗಾರಗೊಂಡಿತ್ತು. ತರಂಗಮಂ 2026 ಅನವಾರಣ, ರೇಂಜ್ ರೋವರ್ ಕಾರಿನಲ್ಲಿ ಮಾವೇಲಿ ಪುರಪ್ರವೇಶ, ಚೆಂಡೆನಾದಕ್ಕೆ ವಿದ್ಯಾರ್ಥಿಗಳ ಕುಣಿತ, ವಿವಿಧ ಬಣ್ಣದ ಹೂವುಗಳಿಂದ ಸುಂದರವಾದ ಪುಕಳಂ ಬಿಡಿಸಿ, ದೋಣಿ ಇರಿಸಿ ಸ್ವಾಗತ ಕೋರಲಾಗಿತ್ತು ಸಾಂಪ್ರದಾಯಿಕ ಹಾಗೂ ಅತ್ಯಂತ ರುಚಿಕರವಾದ ಓಣಂ ಸದ್ಯ, ವಿದ್ಯಾರ್ಥಿಗಳು, ಬಿಳಿ ಪಂಚೆ, ಸೀರೆ ಹುಟ್ಟು ಹಬ್ಬವನ್ನು ಸಂಭ್ರಮಿಸಿದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ವಿಷ್ಣು ಪ್ರಿಯಾ ಸ್ವಾಗತಿಸಿ, ನವ್ಯ ಮತ್ತು ಅಲೆನ್ ನಿರೂಪಿಸಿದರು.

Related posts

ಮೊಗ್ರು: ಶ್ರೀರಾಮ ಶಿಶು ಮಂದಿರದಲ್ಲಿ ವನಮಹೋತ್ಸವ

Suddi Udaya

ಪೆರೋಡಿತ್ತಾಯಕಟ್ಟೆ ಸ. ಉ. ಪ್ರಾ. ಶಾಲಾ ಮೂವರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ದ್ವಿತೀಯ ಪಿ.ಯು.ಸಿ ಪರೀಕ್ಷೆ: ಅತ್ಯುತ್ತಮ ಅಂಕ ಗಳಿಸಿದ ವೇಣೂರಿನ ಅಹ್ಮದ್ ಮುಯೀಝ್ ಕಲ್ಕರ್

Suddi Udaya

ಕಳಿಯ: ಬಾಕಿಮಾರು ನಿವಾಸಿ ಶ್ರೀಮತಿ ರುಕ್ಮಿಣಿ ನಿಧನ

Suddi Udaya

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Suddi Udaya

ಬೆಳ್ತಂಗಡಿ ಆಭರಣ ಜ್ಯುವೆಲ್ಲರ್ಸ್ ಗೆ ಐಟಿ ದಾಳಿ

Suddi Udaya
error: Content is protected !!