September 23, 2026
ತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ : ಎಸ್.ಡಿ.ಎಂ ಚಾಂಪಿಯನ್ಸ್

ಉಜಿರೆ : ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ರವರ ಮಾರ್ಗದರ್ಶನದಲ್ಲಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಬಾಲಕ – ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಸ್ ಗಳಾಗಿದ್ದಾರೆ. ಈ ಮೂಲಕ ಎರಡೂ ತಂಡಗಳು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಒಟ್ಟು 12 ತಂಡಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 4 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ತಂಡವು ವೇಣೂರಿನ ಸರಕಾರಿ ಪದವಿ ಪೂರ್ವ ಕಾಲೇಜು ತಂಡವನ್ನು 40 -16 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿತು.

ಅದೇ ರೀತಿ, ಬಾಲಕಿಯರ ವಿಭಾಗದ ಫೈನಲ್ ಪಂದ್ಯದಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ತಂಡವು ಹಳೇಕೋಟೆಯ ವಾಣಿ ಪದವಿ ಪೂರ್ವ ಕಾಲೇಜು ತಂಡವನ್ನು 42-11 ಅಂಕಗಳ ಅಂತರದಿಂದ ಮಣಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಯಿತು.

ಚಾಂಪಿಯನ್ಸ್ ಗಳಾದ ಬಾಲಕರ ತಂಡದಲ್ಲಿ ಪುನೀತ್ (ನಾಯಕ), ಕಾರ್ತಿಕ್, ಸಚಿನ್ ,ವಂಶಿತ್ , ಮೊಹಮ್ಮದ್ ಫಾಜಿಲ್ , ಶಶಿಕಾಂತ್ , ಮನೀಶ್ , ಪ್ರಜ್ವಲ್, ಅರ್ಜುನ್, ಪ್ರತಿಕ್, ಅಭಿಷೇಕ್ ಮತ್ತು ಇಬ್ರಾಹಿಂ ಭಾಗವಹಿಸಿದ್ದರು. ಬಾಲಕಿಯರ ತಂಡದಲ್ಲಿ ವಿದ್ಯಾರ್ಥಿನಿಯರಾದ ಜ್ಞಾನ (ನಾಯಕ), ನಿಶ್ಮಿತಾ, ಅಂಬಿಕಾ, ಗೋದಾವರಿ , ಶ್ರೇಯಾ, ಹರ್ಷಿನ್ , ತನುಜಾ, ಧನ್ವಿ, ಲಕ್ಷಾ, ತನ್ವಿ ಮತ್ತು ಅಪೂರ್ವಾ ಪಾಲ್ಗೊಂಡಿದ್ದರು. ವಿಜೇತ ತಂಡಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಕೃಷ್ಣಾನಂದ ರಾವ್ ಮತ್ತು ಜಸ್ವಂತ್ ತರಬೇತಿ ನೀಡಿರುತ್ತಾರೆ.

Related posts

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಬೆಳ್ತಂಗಡಿ ತಾ.ಪಂ. ನಲ್ಲಿ ಬಾಲ ಕಾರ್ಮಿಕ ನಿರ್ಮೂಲನೆ ಕುರಿತು ಪ್ರಮಾಣ ವಚನ

Suddi Udaya

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ

Suddi Udaya

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ – ವಿದ್ಯಾರ್ಥಿಗಳ ಬೇಡಿಕೆಗಳಿಗೆ ಒಪ್ಪಿದ ಕೇಂದ್ರ ಸರಕಾರ: ಉಪವಾಸ ಸತ್ಯಾಗ್ರಹ ಹಿಂಪಡೆದ ಶೇಖರ್ ಲಾಯಿಲ

Suddi Udaya

ಉಜಿರೆ : ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ – ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ

Suddi Udaya

ಕುವೆಟ್ಟು : ಶಕ್ತಿನಗರ- ಪಿಲಿಚಾಮುಂಡಿಕಲ್ಲು ಸಂಪರ್ಕ ರಸ್ತೆಯ ಮರುಡಾಮರೀಕರಣ ಮಾಡಿಸಿಕೊಡುವ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!