26.4 C
ಪುತ್ತೂರು, ಬೆಳ್ತಂಗಡಿ
October 3, 2026
Uncategorized

ಸುದೆಮುಗೇರು ಅಂಗನವಾಡಿ ಕೇಂದ್ರದಲ್ಲಿಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ

ಬೆಳ್ತಂಗಡಿ: ಸುದೆಮುಗೇರು ಅಂಗನವಾಡಿ ಕೇಂದ್ರದಲ್ಲಿ ಅ.2ರಂದು ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ
ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ವಾಣಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೆಡಿಪಿ ಸದಸ್ಯರಾದ ಜಗದೀಶ್ ಡಿ. ಅಧ್ಯಕ್ಷತೆ ವಹಿಸಿದ್ದ ರು. ಅಂಗನವಾಡಿ ಶಿಕ್ಷಕಿ ದಿವ್ಯಾ ಶೇಖರ್, ಬೆಳ್ತಂಗಡಿ ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುರೇಶ್ ಸುದೇಮುಗೇರು, ಕಾರ್ಯದರ್ಶಿ ಚಂದ್ರ ಬೋವಿ, ಹಿರಿಯರಾದ‌ ಶ್ರೀಮತಿ ಕೇಶವತಿ ಭಾಗವಹಿಸಿದ್ದರು.ಸಹಾಯಕಿ ರೋಹಿಣಿ ಬಹುಮಾನ ವಿಚಾರಣೆಗೆ ಸಹಕರಿಸಿದರು.


ಕಾಯ೯ಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಕಾಯ೯ದಶಿ೯ಯವರನ್ನು ಗುರುತಿಸಿ ಗೌರವಿಸಲಾಯಿತು.ಕಳೆದ‌ ಭಾನುವಾರ ನಡೆದ ವಿವಿಧ ಆಟೋಟ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 13 ಮಂದಿ ಅಂಗನವಾಡಿ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಿ, ಇಂದಿನ ಕಾರ್ಯಕ್ರಮದ ಲಕ್ಕೀ ಪಸ೯ನ್ 7 ಮಂದಿಗೆ ಬಹುಮಾನ ನೀಡಲಾಯಿತು. ಶೈನ್ ಫ್ರೆಂಡ್ಸ್ ಸುದೇಮುಗೇರು ಇವರಿಗೆ ವಾಲಿಬಾಲ್ ಹಸ್ತಾಂತರ ಮಾಡಲಾಯಿತು.
ಆಗಮಿಸಿದ ಅತಿಥಿಗಳು ಇದೊಂದು ಮಾದರಿ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂದಂತಹ 75 ಮಂದಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.
ಕು.ಮೋನಿಕಾ ಪ್ರಾಥ೯ನೆ ಹಾಡಿದರು.ಅಶೋಕಸುದೇಮುಗೇರು ಸ್ವಾಗತಿಸಿ,‌ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.ವಿಶೇಷವಾಗಿ ಸಂಜಯ ನಗರದ ಬಾಲ ವಿಕಾಸ ಸಮಿತಿಯ ಶಿಕ್ಷಕಿಯರು ಮತ್ತು ‌ಸಹಾಯಕರು‌ಭಾಗವಹಿಸಿ ಸಭೆಗೆ ಮೆರುಗನ್ನು ನೀಡಿದರು.

Related posts

ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು

Suddi Udaya

ಇಂದಬೆಟ್ಟು-ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ಯುವ ಸಂಘಟನೆಯಿಂದ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಶ್ರಮದಾನ

Suddi Udaya

ಎಮ್ ಆರ್ ಪಿ ಎಲ್ ದುರ್ಘಟನೆ: ಬಿ ಎಮ್ ಎಸ್ ಪ್ರತಿಭಟನೆಗೆ ಎಮ್ ಆರ್ ಪಿ ಎಲ್ ಆಡಳಿತದ ಸ್ಪಂದನೆ – ಮೃತ ಕಾರ್ಮಿಕರ ಕುಟುಂಬಕ್ಕೆ ರೂ.1.20 ಕೋಟಿ ಪರಿಹಾರ, ಒಬ್ಬರಿಗೆ ಉದ್ಯೋಗದ ಭರವಸೆ

Suddi Udaya

ಚಾರ್ಮಾಡಿ ಮಠದ ಮಜಲು ಅನಂತ ರಾವ್ ತೋಟಕ್ಕೆ ರಾತ್ರಿ ನುಗ್ಗಿದ ಕಾಡಾನೆಗಳು: ಕೃಷಿ ಹಾನಿ

Suddi Udaya

ಬೆಳ್ತಂಗಡಿ ಕೋರ್ಟ್‌ ರಸ್ತೆಯ ಉದಯ ನಗರದಲ್ಲಿ ರಸ್ತೆ ಬದಿ ಕುಸಿದು ನಿಮಾ೯ಣವಾದ ಗುಂಡಿ : ವಾಹನ ಚಾಲಕರಿಗೆ ಪಾದಚಾರಿಗಳಿಗೆ ತಂದೊಡ್ಡಿದ ಅಪಾಯ- ಹೊಂಡವನ್ನು ಮುಚ್ಚುವಂತೆ ಡಿ. ಜಗದೀಶ್‌ ಅವರಿಂದ ಪಟ್ಟಣ ಪಂಚಾಯತ್‌ಗೆ ಮನವಿ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya
error: Content is protected !!