November 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂದಾರು; ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ : ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಬಂದಾರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ, ಎಸ್.ಡಿ.ಎಂ.ಸಿ. ಅಮೃತ ಮಹೋತ್ಸವ ಸಮಿತಿ ಇವುಗಳ ಸಹಯೋಗದೊಂದಿಗೆ ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ ವತಿಯಿಂದ ಪದ್ಮುಂಜ ಕೆನರಾ ಬ್ಯಾಂಕ್ ನಲ್ಲಿ ಆರ್ಥಿಕ ವ್ಯವಹಾರ ಮತ್ತು ದೇಣಿಗೆ ಸಂಗ್ರಹದ ಉದ್ದೇಶಕ್ಕಾಗಿ ತೆರೆಯಲಾದ ಜಂಟಿ ಉಳಿತಾಯ ಖಾತೆಯ ಸ್ಕ್ಯಾನರ್ ನ ಅನಾವರಣ ಕಾರ್ಯಕ್ರಮವು ಅ.1 ರಂದು ನೆರವೇರಿತು.

ಹಿರಿಯ ದಾನಿಗಳು, ಸಿ.ಎ.ಬ್ಯಾಂಕ್ ನಿವೃತ್ತ ಮೆನೇಜರ್ ರಘುಪತಿ ಭಟ್ ಅನಾಬೆ ಮೈರೋಳ್ತಡ್ಕ ಶಾಲಾ ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಉಳಿತಾಯ ಖಾತೆಯ ಸ್ಕ್ಯಾನರ್ ಬಿಡುಗಡೆಗೊಳಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ನಿರುಂಬುಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಶಿವ ಗೆಳೆಯರ ಬಳಗ- ನವ್ಯಶ್ರೀ ಯುವತಿ ಮಂಡಲದಿಂದ 10,000 ರೂ. ಜಂಟಿ ದೇಣಿಗೆ ಹಸ್ತಾಂತರ:
ಇದೇ ಸಂದರ್ಭ ಅಮೃತ ಮಹೋತ್ಸವ ಸವಿ ನೆನಪಿನ ತರಗತಿ ಕೊಠಡಿ ನಿರ್ಮಾಣದ ಬಾಬ್ತು ಇಲ್ಲಿನ ಶಿವ ಗೆಳೆಯರ ಬಳಗ ಹಾಗೂ ನವ್ಯಶ್ರೀ ಯುವತಿ ಮಂಡಲದ ವತಿಯಿಂದ ದೇಣಿಗೆಯಾಗಿ ರೂ.10,000/- ಮೊತ್ತದ ಚೆಕ್ ಅನ್ನು ಅಧ್ಯಕ್ಷರಾದ ಜಗದೀಶ್ ಗೌಡ ಕೊಂಬೇಡಿ, ಕಾರ್ಯದರ್ಶಿ ಚೇತನ್ ಕುರಿಯಾಳ ಮತ್ತು ನವ್ಯಶ್ರೀ ಯುವತಿ ಮಂಡಲದ ಸದಸ್ಯರು ಹಸ್ತಾಂತರಿಸಿದರು.
ಈ ಸಂದರ್ಭ ಚಂದಪ್ಪ ಗೌಡ ನಡುಮಜಲು ಅವರು ದೇಣಿಗೆಯಾಗಿ 5,000 ರೂಪಾಯಿ ನೀಡಿದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಬಾನಡ್ಕ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಕೃಷ್ಣಯ್ಯ ಆಚಾರ್ಯ, ಸಿ.ಎ. ಬ್ಯಾಂಕ್ ಮೆನೇಜರ್ ತಿಮ್ಮಯ್ಯ ಗೌಡ, ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ , ಮುಂಡೂರು ಚಾಮುಂಡೇಶ್ವರಿ‌ ಕ್ಷೇತ್ರದ ಧರ್ಮದರ್ಶಿ ಆನಂದ ಗೌಡ, ಎಸ್.ಡಿ.ಎಂ.ಸಿ. ಸದಸ್ಯರಾದ ಹರಿಣಾಕ್ಷಿ, ಕೋಶಾಧಿಕಾರಿ ಯಶೋಧಾ, ಶ್ರೀಧರ ಗೌಡ, ಡೊಂಬಯ್ಯ ಗೌಡ, ಮೋಹನ್ ಬಂಗೇರ, ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸವಿ ನೆನಪಿನ ತರಗತಿ‌ ಕೊಠಡಿ ನಿರ್ಮಾಣದ ಬಾಬ್ತು ದಾನಿಗಳಿಂದ, ಪ್ರಾಯೋಜಕರಿಂದ, ವಿದ್ಯಾಭಿಮಾನಿಗಳಿಂದ, ಪೋಷಕರಿಂದ ದೇಣಿಗೆ ಸಂಗ್ರಹದ ಉದ್ದೇಶದಿಂದ ಇದೀಗ ಸ್ಥಳೀಯ ಪದ್ಮುಂಜ ಕೆನರಾ ಬ್ಯಾಂಕ್ ನಲ್ಲಿ‌ ಜಂಟಿ ಖಾತೆಯನ್ನು ತೆರೆಯಲಾಗಿದ್ದು ಬಿಡುಗಡೆಗೊಂಡ ಸ್ಕ್ಯಾನರ್ ಅನ್ನು ಆಸಕ್ತ ದಾನಿಗಳು ಪ್ರಾಯೋಜಕರು, ವಿದ್ಯಾಭಿಮಾನಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ವಿನಂತಿಸಲಾಯಿತು.
ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಸ್ವಾಗತಿಸಿ ಸಹ ಶಿಕ್ಷಕ ಶ್ರೀಧರ್ ವಂದಿಸಿದರು.

Related posts

ರೆಖ್ಯ: ಜನರ ಜೀವ ಬಲಿ ಪಡೆಯುವ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ರೆಖ್ಯ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ

Suddi Udaya

ನಾವರ: ಯುವಶಕ್ತಿ ನಾವರ ವತಿಯಿಂದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಗೇರುಕಟ್ಟೆಯಲ್ಲಿ ಶ್ರೀ ದುರ್ಗಾ ಟ್ರೇಡರ್ಸ್ ಶುಭಾರಂಭ

Suddi Udaya

ಕೊಯ್ಯೂರು: ಶ್ರೀಕೃಷ್ಣ ಭಜನಾ ಮಂಡಳಿಗೆ ಇನ್ವರ್ಟರ್ ಕೊಡುಗೆ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ಲ್ಯಾಟ್, ಶೇ.10 ಡಿಸ್ಕೌಂಟ್ ಸೇಲ್

Suddi Udaya

ಮಚ್ಚಿನ ಪ್ರಾಥಮಿಕ ಶಾಲೆ ಕೆಪಿಎಸ್‌ ಶಾಲೆಯಾಗಿ, ( ಕರ್ನಾಟಕ ಪಬ್ಲಿಕ್ ಸ್ಕೂಲ್) ಮೇಲ್ದರ್ಜೆಗೆ : ಶಾಲಾ ಅಭಿವೃದ್ಧಿ ಸಮಿತಿಯಿಂದ ರಕ್ಷಿತ್ ಶಿವರಾಂ ರಿಗೆ ಅಭಿನಂದನೆ ಸಲ್ಲಿಕೆ

Suddi Udaya
error: Content is protected !!