
ಬೆಳ್ತಂಗಡಿ: ಸುದೆಮುಗೇರು ಅಂಗನವಾಡಿ ಕೇಂದ್ರದಲ್ಲಿ ಅ.2ರಂದು ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ
ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ವಾಣಿ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕೆಡಿಪಿ ಸದಸ್ಯರಾದ ಜಗದೀಶ್ ಡಿ. ಅಧ್ಯಕ್ಷತೆ ವಹಿಸಿದ್ದ ರು. ಅಂಗನವಾಡಿ ಶಿಕ್ಷಕಿ ದಿವ್ಯಾ ಶೇಖರ್, ಬೆಳ್ತಂಗಡಿ ತಾಲೂಕು ಪೌರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಸುರೇಶ್ ಸುದೇಮುಗೇರು, ಕಾರ್ಯದರ್ಶಿ ಚಂದ್ರ ಬೋವಿ, ಹಿರಿಯರಾದ ಶ್ರೀಮತಿ ಕೇಶವತಿ ಭಾಗವಹಿಸಿದ್ದರು.ಸಹಾಯಕಿ ರೋಹಿಣಿ ಬಹುಮಾನ ವಿಚಾರಣೆಗೆ ಸಹಕರಿಸಿದರು.

ಕಾಯ೯ಕ್ರಮದಲ್ಲಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಕಾಯ೯ದಶಿ೯ಯವರನ್ನು ಗುರುತಿಸಿ ಗೌರವಿಸಲಾಯಿತು.ಕಳೆದ ಭಾನುವಾರ ನಡೆದ ವಿವಿಧ ಆಟೋಟ ಸ್ಪಧಾ೯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 13 ಮಂದಿ ಅಂಗನವಾಡಿ ಪುಟಾಣಿಗಳಿಗೆ ಬಹುಮಾನ ವಿತರಣೆ ಮಾಡಿ, ಇಂದಿನ ಕಾರ್ಯಕ್ರಮದ ಲಕ್ಕೀ ಪಸ೯ನ್ 7 ಮಂದಿಗೆ ಬಹುಮಾನ ನೀಡಲಾಯಿತು. ಶೈನ್ ಫ್ರೆಂಡ್ಸ್ ಸುದೇಮುಗೇರು ಇವರಿಗೆ ವಾಲಿಬಾಲ್ ಹಸ್ತಾಂತರ ಮಾಡಲಾಯಿತು.
ಆಗಮಿಸಿದ ಅತಿಥಿಗಳು ಇದೊಂದು ಮಾದರಿ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಂದಂತಹ 75 ಮಂದಿಗೆ ಉಪಾಹಾರದ ವ್ಯವಸ್ಥೆ ಮಾಡಲಾಯಿತು.
ಕು.ಮೋನಿಕಾ ಪ್ರಾಥ೯ನೆ ಹಾಡಿದರು.ಅಶೋಕಸುದೇಮುಗೇರು ಸ್ವಾಗತಿಸಿ,ಕಾಯ೯ಕ್ರಮ ನಿರೂಪಿಸಿ, ವಂದಿಸಿದರು.ವಿಶೇಷವಾಗಿ ಸಂಜಯ ನಗರದ ಬಾಲ ವಿಕಾಸ ಸಮಿತಿಯ ಶಿಕ್ಷಕಿಯರು ಮತ್ತು ಸಹಾಯಕರುಭಾಗವಹಿಸಿ ಸಭೆಗೆ ಮೆರುಗನ್ನು ನೀಡಿದರು.













