28.4 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿರಾಜಕೀಯವರದಿ

ಬೆಳೆ ವಿಮೆ ಪರಿಹಾರದಲ್ಲಿ ದ.ಕ. ರೈತರಿಗೆ ರಾಜ್ಯ ಸರ್ಕಾರ ಅನ್ಯಾಯ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಅಡಕೆ ಹಾಗೂ ಇತರ ಬೆಳೆಗಾರರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರದಲ್ಲಿ ಭಾರೀ ಕಡಿತ ಮಾಡಿ ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತರಿಗೆ ಅನ್ಯಾಯ ಎಸಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆರೋಪ ಮಾಡಿದ್ದು, ತಕ್ಷಣ ಸರಿಯಾದ ವಿಮಾ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಷ್ಟದ ಸಮಯದಲ್ಲಿ ರೈತರಿಗೆ ಆಸರೆಯಾಗಬೇಕಿದ್ದ ಬೆಳೆ ವಿಮೆ ಯೋಜನೆಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಹಳಿ ತಪ್ಪಿಸಿದೆ ಎಂದು ಆಕ್ಷೇಪಿಸಿದರು. ವಿಮೆ ಪರಿಹಾರ ಮೊತ್ತದಲ್ಲಿ ಭಾರಿ ಕುಸಿತ:2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫಸಲ್ ಬಿಮಾ ಯೋಜನೆ ಜಾರಿಗೆ ತಂದ ನಂತರ 2023ರವರೆಗೆ ಜಿಲ್ಲೆಯ ರೈತರಿಗೆ ಉತ್ತಮ ಪರಿಹಾರ ಸಿಗುತ್ತಿತ್ತು. 2018ರಲ್ಲಿ ಹೆಕ್ಟೇರ್‌ಗೆ ಸರಾಸರಿ ₹ 1.28 ಲಕ್ಷ, 2020-21ರಲ್ಲಿ ₹ 60,000ದಿಂದ 90,000 ಹಾಗೂ 2023ರವರೆಗೆ ಸುಮಾರು ₹ 70,000 ವರೆಗೆ ಬೆಳೆ ವಿಮೆ ಪರಿಹಾರ ದೊರೆಯುತ್ತಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಮೊತ್ತ ಸರಾಸರಿ ₹ 20,000ಕ್ಕೆ ಕುಸಿದಿದೆ ಎಂದರು.ಟರ್ಮ್ ಶೀಟ್ ನಿಯಮಗಳ ಬದಲಾವಣೆ ಮಾಡಿದ್ದೇಕೆ?:2023ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಮಾ ಕಂಪೆನಿಗಳೊಂದಿಗೆ ಮಾಡಿಕೊಂಡ ‘ಟರ್ಮ್ ಶೀಟ್’ ನಿಯಮಗಳನ್ನು ರೈತರಿಗೆ ಮಾರಕವಾಗುವಂತೆ ಬದಲಿಸಲಾಗಿದೆ. ಹಳೆಯ ನಿಯಮ ಪ್ರಕಾರ, ಜುಲೈ 1ರಿಂದ ಸೆಪ್ಟೆಂಬರ್ 30ರ ನಡುವೆ 125 ಮಿ.ಮೀ. ಗಿಂತ ಹೆಚ್ಚು ಮಳೆಯಾದರೆ ₹ 800, 150 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ 1,200 ಹಾಗೂ 175 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ₹ 50,000 ಪರಿಹಾರ ಸಿಗುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ನಿಯಮ ಬದಲಿಸಿದ್ದು, 250 ಮಿ.ಮೀ ಮಳೆ ಬಿದ್ದರೆ ಅದನ್ನು ‘ಶೂನ್ಯ’ ಪರಿಹಾರವೆಂದು ಪರಿಗಣಿಸಲಾಗುತ್ತದೆ. ಅದರ ನಂತರ ಮಳೆ ಬಿದ್ದರೆ ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುವಂತಹ ಜಟಿಲ ನಿಯಮಗಳನ್ನು ವಿಧಿಸಿ ರೈತರಿಗೆ ಪೂರ್ತಿ ವಿಮಾ ಪರಿಹಾರ ಸಿಗದಂತೆ ಮಾಡಲಾಗಿದೆ ಎಂದು ಹರೀಶ್ ಪೂಂಜ ಆರೋಪಿಸಿದರು.

ರಾಜ್ಯ ಸರ್ಕಾರದ ಪಾಲು ಕಡಿತ:2016ರಿಂದ 2023ರವರೆಗೆ ವಿಮಾ ಕಂತಿನಲ್ಲಿ ರೈತರು ಶೇ.5, ಕೇಂದ್ರ ಸರ್ಕಾರ ಶೇ. 10 ಹಾಗೂ ರಾಜ್ಯ ಸರ್ಕಾರ ಶೇ.20 (ಒಟ್ಟು ಶೇ.35) ಪಾವತಿಸುತ್ತಿದ್ದವು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಪಾಲನ್ನು ಶೇ.20ರಿಂದ ಶೇ. 10ಕ್ಕೆ ಕಡಿತಗೊಳಿಸಿದೆ. ಅಲ್ಲದೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನಿಗದಿತ ಅವಧಿಯೊಳಗೆ ವಿಮಾ ಕಂಪೆನಿಗೆ ಪಾವತಿಸದ ಕಾರಣ ರೈತರಿಗೆ ಸಿಗಬೇಕಾದ ಪರಿಹಾರ ಕಡಿತಗೊಂಡಿದೆ ಎಂದು ಹೇಳಿದರು.ವಿಮಾ ಕಂಪೆನಿಯಿಂದ ಕಿಕ್ ಬ್ಯಾಕ್ ಪಡೆದಿದೆಯಾ?:ಟಾಟಾ ಎಐಜಿ ಕಂಪೆನಿಗೆ ನೀಡಲಾಗಿದ್ದ ಮೂರು ವರ್ಷಗಳ ಟೆಂಡ‌ರ್ ಅವಧಿ ಮುಗಿದಿದ್ದರೂ, ಸಮಯಾವಕಾಶದ ನೆಪವೊಡ್ಡಿ ಹೊಸ ಟೆಂಡರ್ ಕರೆಯದೆ ಅದೇ ಕಂಪೆನಿಗೆ ನಿಯಮಬಾಹಿರವಾಗಿ ಮತ್ತೆ ಒಂದು ವರ್ಷ ವಿಸ್ತರಣೆ ನೀಡಲಾಗಿದೆ. ರಾಜ್ಯ ಸರ್ಕಾರ ಕಂಪೆನಿಯಿಂದ ಕಿಕ್ ಬ್ಯಾಕ್ ಪಡೆದಿದೆಯಾ ಎಂದು ಹರೀಶ್ ಪೂಂಜಾ ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದ‌ರ್ ಅವರು ರೈತರ ಈ ಸಮಸ್ಯೆಗೆ ಯಾಕೆ ಮೌನವಾಗಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿ, ಸರಿಯಾದ ವಿಮಾ ಪರಿಹಾರ ಒದಗಿಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಪುಷ್ಪಾ ಮೇದಪ್ಪ, ಶೋಭೇಂದ್ರ, ಯತೀಶ್ ಆರ್ವರ್, ಉಮೇಶ್ ಬೆಳ್ತಂಗಡಿ, ಶಶಿಧರ ಕಲ್ಮಂಜ, ವಸಂತ ಪೂಜಾರಿ, ರಾಕೇಶ್ ರೈ ಸುಳ್ಯ, ಜಗನ್ನಾಥ್ ಮತ್ತಿತರರು ಇದ್ದರು.

Related posts

ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಮಾಶಾಸನ ಹೆಚ್ಚಳ ಮತ್ತು ಮಹಿಳಾ ದೌರ್ಜನ್ಯ ಖಂಡಿಸಿ ಮನವಿ

Suddi Udaya

ಮೇಲಂತಬೆಟ್ಟು: ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಚರ್ಚೆ ಹಾಗೂ ವಿಶೇಷ ಮಾಹಿತಿ ಶಿಬಿರ

Suddi Udaya

ಕಬಡ್ಡಿ ಪಂದ್ಯಾಟ: ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ದಯಾ ವಿಶೇಷ ಮಕ್ಕಳ ಪಾಲನ ಕೇಂದ್ರ ವಿಮುಕ್ತಿಯಲ್ಲಿ “ಪವರ್ ಆನ್” ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘದ ಉದ್ಘಾಟನಾ ಸಮಾರಂಭ

Suddi Udaya
error: Content is protected !!