November 18, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ನಿಡ್ಲೆ ಸಹಕಾರಿ ಸಂಘದ ವತಿಯಿಂದ ಸಹಕಾರ ಸಪ್ತಾಹ ಆಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಿಡ್ಲೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಸಹಕಾರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಡ್ಲೆ ಇದರ ವತಿಯಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ -2026 ಇದರ ಅಂಗವಾಗಿ ಸಹಕಾರ ಸಪ್ತಾಹ ಆಚರಣೆಯು ನ.17ರಂದು ನಿಡ್ಲೆ ಕೇಂದ್ರ ಕಚೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಎ.ಜೆ. ಮೆಡಿಕಲ್ ಸೈನ್ಸ್ ಸಂಸ್ಥೆ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಉಚಿತ ಆರೋಗ್ಯ ತಪಾಸಣೆ ರೋಗ, ಕಣ್ಣಿನ ಪರೀಕ್ಷೆ ಮತ್ತು ಸಾಮಾನ್ಯ ಕಾಯಿಲೆಗಳ ಪರೀಕ್ಷೆ (ಬಿ. ಪಿ. ಟೆಸ್ಟ್, ಡಯಾಬಿಟಿಸ್ ಟೆಸ್ಟ್) ಹಮ್ಮಿಕೊಳ್ಳಲಾಗಿತ್ತು.
ಸಹಕಾರಿ ಸಪ್ತಾಹದ ಧ್ವಜಾರೋಹಣವನ್ನು ಶಾಸಕರಾದ ಹರೀಶ್ ಪೂಂಜ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡ್ಲೆ ಸಹಕಾರಿ ಸಂಘದ ಅಧ್ಯಕ್ಷ ಧನಂಜಯ ಗೌಡ ವಹಿಸಿದ್ದರು. ಶಾಸಕ ಹರೀಶ್ ಪೂಂಜರವರು ಸಹಕಾರಿ ಸಂಘದ ಹೊಸ ಉತ್ಪನ್ನ ‘ಸಮೃದ್ಧಿ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಖಾಯಂ ಠೇವಣಾತಿ ರಶೀದಿಯನ್ನು ಲಕ್ಷ್ಮಣ ಗೌಡ ಪಾಂಗಳ ಇವರಿಗೆ ನೀಡಲಾಯಿತು.

ಕೃಷಿಕ ಸಾಧಕ ರಾದ ಹೊನ್ನಪ್ಪ ಗೌಡ ಮೇರ್ಲ ಬರೆಂಗಾಯ, ಡೀಕಯ್ಯ ಗೌಡ ಬಂಡೇರಿ, ಸುಂದರ ಪೂಜಾರಿ ನೇರೆಂಕಿಪಾಲು, sudhindra ರಾವ್ ಕೋಂಕ ನಿಡ್ಲೆ ಇವರನ್ನು ಸನ್ಮಾನಿಸಲಾಯಿತು. ಕುಶಾಲಪ್ಪ ಗೌಡ ಪೂವಾಜೆ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ನಿಡ್ಲೆ ಸಹಕಾರಿ ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ.ಕೆ., ಕಾಯರ್ತಡ್ಕ ಹಾ.ಉ.ಸ. ಸಂಘದ ಅಧ್ಯಕ್ಷ ವಿಜಯ ಕುಮಾರ್ ಎಚ್., ಶಾಲೆತಡ್ಕ ಹಾ.ಉ.ಸ. ಸಂಘದ ಅಧ್ಯಕ್ಷ ಹರೀಶ್ ರಾವ್ ಕೆ., ಬರೆಂಗಾಯ ಹಾ.ಉ.ಸ. ಸಂಘದ ಅಧ್ಯಕ್ಷ ಸುಂದರ ಗೌಡ ಕೆ., ಬೂಡುಜಾಲು ಹಾ.ಉ.ಸ. ಸಂಘದ ಅಧ್ಯಕ್ಷ ಮಿಥುನ್ ಕೆ., ನಿಡ್ಲೆ ಹಾ.ಉ.ಸ. ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ,ಸಂಘದ ಮಾಜಿ ಅಧ್ಯಕ್ಷ ರಮೇಶ್ ರಾವ್ ಕೆ.,ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದಿನ್, ಎ. ಜೆ. ಆಸ್ಪತ್ರೆಯ ಶ್ರುತಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ವಿಜಯ ಕುಮಾರ್ ಹೆಚ್‌., ಆನಂದ ಗೌಡ, ರಮೇಶ್‌ ರಾವ್‌ ಕೆ., ಹೇಮಂತ ಗೌಡ ಕೆ., ಜಯರಾಮ ಪಾಳಂದೆ ಎಸ್., ಧನಂಜಯ ಬಿ., ಗಾಯತ್ರಿ ಹೆಚ್‌ ಗೌಡ, ವಿಜಯಲಕ್ಷ್ಮೀ ಕೆ., ರಾಜು, ಮೋಹನ ಪೂಜಾರಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ಧೀನ್ ಉಪಸ್ಥಿತರಿದ್ದರು.

ನಿರ್ದೇಶಕಿ ಗಾಯತ್ರಿ ಹೆಚ್. ಗೌಡ ಪ್ರಾರ್ಥಿಸಿದರು. ರಮೇಶ್ ರಾವ್ ಕೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಗೌಡ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ವಿಜಯಲಕ್ಷ್ಮಿ ಕೆ. ಧನ್ಯವಾದವಿತ್ತರು. ಕಾರ್ಯಕ್ರಮದ ಯಶಸ್ವಿಗೆ ನಿರ್ದೇಶಕರು, ಸಿಬ್ಬಂದಿಗಳು ಸಹಕರಿಸಿದರು.

Related posts

ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎಸ್‌ಡಿಎಂ ಬಿ.ಎಡ್. ಹಾಗೂ ಡಿ.ಎಡ್. ಕಾಲೇಜು ಹಿರಿಯ ವಿದ್ಯಾರ್ಥಿಗಳ ಪುನರ್ ಸಮ್ಮಿಲನ ಕಾರ್ಯಕ್ರಮ

Suddi Udaya

ಬಂದಾರು, ಮೊಗ್ರು ಶಕ್ತಿ ಕೇಂದ್ರದ ಭಾಜಪ ಕಾರ್ಯಕರ್ತರ ಅಭ್ಯಾಸವರ್ಗ ಕಾರ್ಯಕ್ರಮ

Suddi Udaya

ಅತ್ತಾಜೆ ಮುಹಿಯುದ್ದೀನ್ ಅರಬಿಕ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ

Suddi Udaya

ಹುತ್ತಕ್ಕೆ ಕೈ ಹಾಕಿ ಜೇನು ತೆಗೆಯುವ ವೇಳೆ ವಿಷ ಜಂತು ಕಚ್ಚಿದ ಶಂಕೆ : ಚಿಕಿತ್ಸೆ ಪಡೆಯದೆ ವ್ಯಕ್ತಿ ಮೃತ್ಯು

Suddi Udaya

ಎ.12: ಬೆಳ್ತಂಗಡಿಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

Suddi Udaya
error: Content is protected !!