ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ವಂ|ಸ್ವಾ|ಸ್ಟ್ಯಾನಿ ಗೋವಿಯಸ್ “ನಾನು ಇಂದು ಏನಾಗಿದ್ದೇನೆಯೋ ಅದು ದೇವರು ನನಗೆ ನೀಡಿದ ಉಡುಗೊರೆ. ಮುಂದೆ ನಾನು ಏನಾಗುತ್ತೇನೆಯೋ ಅದು ದೇವರಿಗೆ ನಾನು ನೀಡುವ ಉಡುಗೊರೆ” ಎಂಬ ಅರ್ಥಪೂರ್ಣ ಸಂದೇಶವನ್ನು ನೀಡಿದರು.
ಶಾಲೆಯ ಹಳೆಯ ವಿದ್ಯಾರ್ಥಿನಿ ಹಾಗೂ ಮುಖ್ಯ ಅತಿಥಿ ಡಾ. ಅಶ್ವಿತಾ ಮೆಲ್ರಿನ್ ಕಾರ್ಲ್ ಮಾತನಾಡಿ, “ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸಲು ಕಠಿಣ ಪರಿಶ್ರಮ ಪಡಬೇಕು. ಯಶಸ್ಸು ಪರಿಶ್ರಮದ ಫಲವಾಗಿದೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಅತಿಥಿಗಳಾಗಿ ವಂ|ಸ್ವಾ|ಲ್ಯಾರಿ ಪಿಂಟೊ, ವಂ|ಸ್ವಾ| ದೀಪಕ್ ಲಿಯೋ ಡೇಸ, ಚೇತನಾ, ನೆಲ್ಸನ್ ಲಸ್ರಾದೋ, ಪ್ರವೀಣ್ ಚಂದ್ರ ಶೆಟ್ಟಿ ಹಾಗೂ ಪ್ರೊ. ಲಿಯೋ ನೊರೊನ್ಹಾ, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕ ವೃಂದದವರು ಹಾಡು, ನೃತ್ಯ, ನಾಟಕದ ಮೂಲಕ ಮನರಂಜಿಸಿದರು. ವಿನ್ನಿ ಲೋಬೋ ಕಾರ್ಯಕ್ರಮ ನಿರೂಪಿಸಿ, ಮಲ್ಲಿಕಾ ಸ್ವಾಗತಿಸಿ, ಸೌಮ್ಯ ಎಂ. ವಂದಿಸಿದರು.














