
ಬೆಳ್ತಂಗಡಿ:ಕರಾಡ ಬ್ರಾಹ್ಮಣ ಸಭಾ(ರಿ)ಮೈಸೂರು ಇದರ ವಾರ್ಷಿಕೋತ್ಸವ ಮತ್ತು ಕರಾಡ ಬ್ರಾಹ್ಮಣ ಅಭ್ಯುದಯ ಸಂಘ ಅಗಲ್ಪಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಲ್ಪಟ್ಟ ಕಾರ್ಯಕ್ರಮವು ಮೈಸೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನ. 15ರಂದು ನಡೆಯಿತು .
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ನಾವೂರಿನ ವೈದ್ಯರಾದ ಡಾ। ಪ್ರದೀಪ್ ಅವರು “ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪ್ರಸ್ತುತತೆ” ಇದರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಭಗವದ್ಗೀತೆ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಮತ್ತು ಹಿರಿಯ ನಾಗರಿಕರಲ್ಲಿ ಯಾವ ರೀತಿ ಪ್ರಸ್ತುತವಾಗಿದೆ ಅನ್ನುವ ವಿಷಯವನ್ನು ಮನೋಜ್ಞವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಮೈಸೂರು ಕರಾಡ ಬ್ರಾಹ್ಮಣ ಸಭಾ ಇದರ ಅಧ್ಯಕ್ಷರಾಗಿರುವ ಕೃಷ್ಣಮೋಹನ ಭಟ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾತೃ ಸಂಘದ ಅಧ್ಯಕ್ಷರಾಗಿರುವ ರಮಾನಂದ ಎಡಮಲೆ ಮತ್ತು ಪದಾಧಿಕಾರಿಗಳೂ ಉಪಸ್ಥಿತರಿದ್ದರು.

“ಮನೆ ಮನೆಗೆ ಪಾಂಚಜನ್ಯ” ಅಭಿಯಾನಕ್ಕೆ ಶಂಖಗಳ ಕೊಡುಗೆ.
ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ನಾವೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದ “ಮನೆ ಮನೆಗೆ ಪಾಂಚಜನ್ಯ” ಅನ್ನುವ ಮಹತ್ ಕಾರ್ಯಕ್ಕೆ ಶಂಖಗಳನ್ನು ಉದಾರವಾಗಿ ನೀಡಿಲಾಯಿತು. ಈ ಮಹಾ ಕಾರ್ಯದಲ್ಲಿ ಮುಂದಿನ ದಿನಗಳಲ್ಲಿ ಸಮಾಜದ ಅನ್ಯಾನ್ಯ ಸಂಘ ಸಂಸ್ಥೆಗಳು ಶಂಖಗಳನ್ನು ಕೊಡುಗೆಯಾಗಿ ನೀಡಿ ಈ ಅಭಿಯಾನಕ್ಕೆ ಶಕ್ತಿಯನ್ನು ತುಂಬುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಲಾಯಿತು.














