ಧರ್ಮಸ್ಥಳ: ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ವತಿಯಿಂದ ಹಾಗೂ ನ.20ರಂದು ಬಿಡುಗಡೆಯಾಗಲಿರುವ ಬೃಂದವಿಹಾರಿ ಚಲನಚಿತ್ರದ ಯಶಸ್ಸಿಗೆ ಹಾಗೂ ಸಮೃದ್ಧಿ ಪರಿವಾರದ ಪರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಹಸು ಮತ್ತು ಕರುವನ್ನು ಗೋ ದಾನ ವಾಗಿ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಮೃದ್ಧಿ ಸಂಸ್ಥೆಯ ಗೌರವಾನ್ವಿತ ಸಂಸ್ಥಾಪಕ ಅಧ್ಯಕ್ಷರು ಡಾ. ವಿ. ಸಮೃದ್ಧಿ ಮಂಜುನಾಥ್ ಹಾಗೂ ಅವರ ಕುಟುಂಬಸ್ಥರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಾಘವೇಂದ್ರ ಪೂಜಾರಿ, ಅಮರೇಶ್ ರಾವ್ ಹರೀಶ್ ಗೌಡ ಸೇರಿದಂತೆ ಸಮೃದ್ಧಿ ಪರಿವಾರದ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ನಡೆದ ಈ ಗೋ ದಾನ ಕಾರ್ಯವು ಧಾರ್ಮಿಕ ಭಕ್ತಿ, ಗೋ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯ ಸಂಕೇತವಾಗಿ ಗಮನ ಸೆಳೆಯಿತು.














