November 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಸಂಭ್ರಮದ “ಪೇರೆಂಟ್ಸ್ ಪವರ್‌ಪ್ಲೇ – 2026

ಗುರುವಾಯನಕೆರೆ: ಎಕ್ಸೆಲ್ ಟೆಕ್ನೋ ಸ್ಕೂಲ್‌ನ ಕಿಂಡರ್‌ಗಾರ್ಟನ್ ವಿಭಾಗದ ಪೋಷಕರಿಗಾಗಿ ಆಯೋಜಿಸಲಾಗಿದ್ದ “ಪೇರೆಂಟ್ಸ್ ಪವರ್‌ಪ್ಲೇ – 2026” ಕಾರ್ಯಕ್ರಮವು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ನಡೆಯಿತು.

ಪೋಷಕರಲ್ಲಿ ಸಂತಸ, ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ಪರಸ್ಪರ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ನಿಧಾನಗತಿಯ ಬೈಕ್ ರೇಸ್, ಸ್ಕೂಟಿ ರೇಸ್, ಚೈನ್ ಮೇಕಿಂಗ್, ಕಪ್ ಬ್ರಿಡ್ಜ್, ಬಲೂನ್ ಬ್ಲಾಸ್ಟ್, ಬಲೂನ್ ಬ್ಯಾಲೆನ್ಸಿಂಗ್ ಸೇರಿದಂತೆ ವಿವಿಧ ಮನರಂಜನಾತ್ಮಕ ಆಟಗಳನ್ನು ಆಯೋಜಿಸಲಾಗಿತ್ತು.

ಪೋಷಕರು ಎಲ್ಲಾ ಸ್ಪರ್ಧೆಗಳಲ್ಲೂ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ, ಚುರುಕುತನ ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ನಗು, ಸಂಭ್ರಮ ಮತ್ತು ಉತ್ಸಾಹದಿಂದ ಕೂಡಿದ ಈ ಕಾರ್ಯಕ್ರಮವು ಪೋಷಕರಿಗೆ ವಿಭಿನ್ನ ಅನುಭವವನ್ನು ನೀಡುವುದರ ಜೊತೆಗೆ ಶಾಲೆ ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಕಿಂಡರ್‌ಗಾರ್ಟನ್ ವಿಭಾಗದ ಸಂಯೋಜಕರಾದ ಲೀನಾ ಫ್ಲೋರಿನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಶಿಕ್ಷಕಿಯರಾದ ಗೀತಾ, ಜೋಸ್ಲಿಟಾ, ಪೂರ್ಣಿಮಾ, ವಿಲ್ಮಾ, ಲವೀನಾ, ಅಲೀಶಾ, ಚೇತನಾ, ಪ್ರೇಮ ಹಾಗೂ ತರಗತಿಯ ಸಹಸಿಬ್ಬಂದಿಗಳು ಉತ್ತಮ ಸಹಕಾರ ಮತ್ತು ಸಮನ್ವಯದೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಯಶಸ್ವಿಗೊಳಿಸಿದರು.
ಒಟ್ಟಿನಲ್ಲಿ, “ಪೋಷಕರಿಗೂ ಒಂದು ಆಟದ ಮೈದಾನ, ಸಂತಸಕ್ಕೂ ಒಂದು ಸುಂದರ ವೇದಿಕೆ ” ಎಂಬಂತೆ ಪೇರೆಂಟ್ಸ್ ಪವರ್‌ಪ್ಲೇ– 2026 ಎಲ್ಲರ ಮನದಲ್ಲಿ ಮರೆಯಲಾಗದ ಸವಿ ನೆನಪುಗಳನ್ನು ಮೂಡಿಸಿತು.

Related posts

ನಾರಾವಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ರಾಜವರ್ಮ ಜೈನ್, ಉಪಾಧ್ಯಕ್ಷರಾಗಿ ಸುಮಿತ್ರಾ ಅವಿರೋಧವಾಗಿ ಆಯ್ಕೆ

Suddi Udaya

ಕಡಿರುದ್ಯಾವರ ಹೇಡ್ಯದಲ್ಲಿ ಅಂಚೆ ಕಛೇರಿ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ಹತ್ಯಡ್ಕ: ನಿವೃತ್ತ ಶಿಕ್ಷಕ ಮಹಾದೇವ ಹೆಬ್ಬಾರ್ ನಿಧನ

Suddi Udaya

ಶಿಶಿಲ: ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಮಾರೋಪ

Suddi Udaya

ಬಜಿರೆ : ಹೊಸಪಟ್ಣ ನಿವಾಸಿ ಶ್ರೀಧರ ಪೂಜಾರಿ ನಿಧನ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚಿದಾನಂದ ಇಡ್ಯ, ಕಾರ್ಯದರ್ಶಿಯಾಗಿ ಸಂತೋಷ್ ಶೆಟ್ಟಿ ಆಯ್ಕೆ

Suddi Udaya
error: Content is protected !!