ಬೆಳ್ತಂಗಡಿ: ಪುರಾತನ ಮಸ್ಜಿದ್ ಗಳಲ್ಲಿ ಒಂದಾದ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಕಿಲ್ಲೂರು ಇದರ ನವೀಕೃತ ನೂತನ ಮಸ್ಜಿದ್ ನ ಉದ್ಘಾಟನೆ ಸಮಾರಂಭ ಕಾರ್ಯಕ್ರಮವು 2027 ಫೆ.4 ಮತ್ತು 5 ರಂದು ನಡೆಯಲಿದೆ ಎಂದು ಜಮಾಅತ್ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಡಾ: ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಘೋಷಣೆ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಆಡಳಿತ ಕಮೀಟಿ ಅಧ್ಯಕ್ಷ ಅಬ್ದುಲ್ ಅಝೀಝ್ ಝುಹ್ರಿ , ಉಪಾಧ್ಯಕ್ಷ ಸಾಹುಲ್ ಹಮೀದ್ ತಿಮ್ಮನಬೆಟ್ಟು , ಪ್ರಧಾನ ಕಾರ್ಯದರ್ಶಿ ಸಾಹುಲ್ ಬೀಜದಡಿ ,ಕೋಶಾದಿಕಾರಿ ಅಬೂಬಕ್ಕರ್ ಮಲ್ಲಿಗೆ, ಸದಸ್ಯರಾದ ಬದ್ರುದ್ದೀನ್ ಕಿಲ್ಲೂರು, ಹನೀಫ್ ಮಲ್ಲಿಗೆ, ಅಶ್ರಫ್ ಶ್ರವಣಗುಂಡ ಮುಂತಾದವರು ಉಪಸ್ಥಿತರಿದ್ದರು.














