September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.14: ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

ಪಟ್ರಮೆ: ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘ ಅನಾರು ಪಟ್ರಮೆ ಇದರ ನೂತನ ಕಟ್ಟಡ ‘ಕ್ಷೀರ ವಾರಿಧಿ’ಯ ಉದ್ಘಾಟನಾ ಸಮಾರಂಭವು ಡಿ.14 ರಂದು ಜರುಗಲಿದೆ.


ನೂತನ ಕಟ್ಟಡವನ್ನು ಮಂಗಳೂರು ದ.ಕ.ಜಿ.ಸ.ಹಾ. ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆ ಉದ್ಘಾಟಿಸಲಿದ್ದು, ರಾಜ್ಯಸಭಾ ಸದಸ್ಯರಾದ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಪ್ರಜ್ವಲನೆ ಮಾಡಲಿದ್ದು, ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ನಿತೇಶ್ ಬಲ್ಲಾಳ್ ನಾಮಫಲಕ ಉದ್ಘಾಟನೆ ಮಾಡಲಿದ್ದಾರೆ.


ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ವಾಣಿಜ್ಯ ಕೊಠಡಿ, ಶಾಸಕ ಹರೀಶ್ ಪೂಂಜ ಕಾರ್ಯಾಲಯ, ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಆಡಳಿತ ಮಂಡಳಿ ಕೊಠಡಿ, ಮಂಗಳೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಇರ್ವತ್ತೂರು ದಾಸ್ತಾನು ಕೊಠಡಿ, ಮಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಐಕಳಬಾವ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಹಾಲು ಸಂಗ್ರಹ ಕೊಠಡಿ ಉದ್ಘಾಟಿಸಲಿದ್ದಾರೆ.


ನಂತರ ಅನಾರು ದೇವಸ್ಥಾನದ ಸಮರ್ಪಣಾ ಸಭಾಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದೇವಪಾಲ ಅಜ್ರಿ ಉಳಿಯಬೀಡು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ, ಅನಾರು ದೇವಸ್ಥಾನದ ಮೊಕ್ತೇಸರ ನಿತೇಶ್ ಬಲ್ಲಾಳ್, ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ದ.ಕ ಜಿಲ್ಲೆ ವಿದ್ಯುತ್ ನಿಗಮ ಅಧ್ಯಕ್ಷ ಹರೀಶ್ ಕುಮಾರ್, ಹಾಲು ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್ ಇರ್ವತ್ತೂರು, ಹಾಲು ಒಕ್ಕೂಟದ ನಿರ್ದೇಶಕರಾದ ಸುಚರಿತ ಶೆಟ್ಟಿ, ಜಯರಾಮ ರೈ ಬಳ್ಳಜ್ಜ, ಸವಿತಾ ಎನ್. ಶೆಟ್ಟಿ, ಪ್ರಭಾಕರ ಆರಂಬೋಡಿ, ಚಂದ್ರಶೇಖರ ರಾವ್, ಭರತ್ ನೆಕ್ರಾಜೆ, ವಿವೇಕ್ ಡಿ, ರವಿರಾಜ ಉಡುಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಪಟ್ರಮೆ ಗ್ರಾ. ಪಂ. ಅಧ್ಯಕ್ಷ ಮನೋಜ್, ಉದ್ಯಮಿಗಳಾದ ಕಿರಣ್ ಚಂದ್ರ ಪುಷ್ಪಗಿರಿ ಉಪಸ್ಥಿತರಿರುವರು. ಮಂಗಳೂರು ಹಾಲು ಒಕ್ಕೂಟದ ನಿಕಟಪೂರ್ವ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಮಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಸತೀಶ್ ರಾವ್, ಪುತ್ತೂರು ಉಪವಿಭಾಗದ ಸ. ನಿಬಂಧಕ ಎಸ್.ಎಂ. ರಘು, ಮಂಗಳೂರು ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ. ಜಿತೇಂದ್ರ ಪ್ರಸಾದ್, ಮಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪಿ.ಕಾಮತ್, ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಎಸ್‌ಕೆಡಿಆರ್‌ಡಿಪಿ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಗೌರವ ಉಪಸ್ಥಿತರಿರುವರು.

Related posts

ಗುರುವಾಯನಕೆರೆ : ವೈಟ್‌ಹೌಸ್ ನಿವಾಸಿ ನಾರಾಯಣ ಪೂಜಾರಿ

Suddi Udaya

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬೆಳ್ತಂಗಡಿ ಬಿಜೆಪಿ ಧರಣಿ

Suddi Udaya

ಉಜಿರೆ ಶ್ರೀ ಧ.ಮಂ. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ದಳದಿಂದ ‘ಸರ್ವ ಧರ್ಮ ‘ ಪ್ರಾರ್ಥನೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ದಯಾ ವಿಶೇಷ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿಗೆ ಶೇ.98.79 ಫಲಿತಾಂಶ

Suddi Udaya

ಸೆ.21: ಕರಾಯ ವಿದ್ಯುತ್ ನಿಲುಗಡೆ

Suddi Udaya
error: Content is protected !!