September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ: 51ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಉದ್ಘಾಟನೆ

ಬೆಳ್ತಂಗಡಿ: ರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ 51ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಜ.3ರಂದು ನಡೆಯಿತು.

ಜ.3ರಂದು ಬೆಳಿಗ್ಗೆ ಗಣಹೋಮ, ಶ್ರೀ ಮಹಾಗಣಪತಿ ದೇವರಿಗೆ ಅಥರ್ವಶೀರ್ಷಾಭಿಷೇಕ, ಶಾಸ್ತಾರ ಸಹಸ್ರಕದಳಿಯಾಗ ಹಾಗೂ ಶ್ರೀ ಅಯ್ಯಪ್ಪ ದೇವರಿಗೆ ಏಕಾದಶ ರುದ್ರಾಭಿಷೇಕ ನಂತರ ಅಯ್ಯಪ್ಪ ಸ್ವಾಮಿಯ ದೀಪೋತ್ಸವದ ಉದ್ಘಾಟನೆಯನ್ನು ಬೆಂಗಳೂರು ಬೇಗೂರು ಶ್ರೀ ಚೆನ್ನಕೇಶವ ದೇವಸ್ಥಾನದ ಧರ್ಮದರ್ಶಿ ನಾರಾಯಣ ಬೇಗೂರು ರವರು ನೆರವೇರಿಸಿದರು.
ಬೆಳ್ತಂಗಡಿ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಯು., ಭಾಸ್ಕರ ಗುರುಸ್ವಾಮಿ, ಬೆಳ್ತಂಗಡಿ ಎಂ.ಆರ್.ಜೆ. ಎಂಟರ್‌ಪ್ರಸೈಸ್‌ನ ರಾಘವೇಂದ್ರ ಕಿಣಿ, ನಾರಾಯಣ ರಾವ್ ಮುಗುಳಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಶರತ್‌ರಾಜ್, ಉಪಾಧ್ಯಕ್ಷೆ ಸುಶೀಲ ಶಂಕರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್, ಜೊತೆ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಲ, ಟ್ರಸ್ಟ್‌ನ ಸದಸ್ಯರಾದ ಪ್ರಕಾಶ್ ಕೆ. ಗುರುಸ್ವಾಮಿ, ಪ್ರಕಾಶ್ ಶೆಟ್ಟಿ ಲಾಲ, ಸಂದೇಶ್ ಶೆಟ್ಟಿ ಲಾಲ, ದಿನೇಶ್ ಮಂಗಳಾದೇವಿ, ಪ್ರಸನ್ನ ಆಚಾರ್ಯ, ರಮೇಶ್ ಆಚಾರ್ಯ, ಹರೀಶ್ಚಂದ್ರ ಶೆಟ್ಟಿ ಲಾಲ, ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್, ಟ್ರಸ್ಟ್‌ನ ವಿಶೇಷ ಆಹ್ವಾನಿತರಾದ ಸುಂದರ ಆಚಾರ್ಯ, ಆನಂದ ಗೌಡ, ಸದಾಶಿವ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ, ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪಸೇವೆ, ದೀಪಾರಾಧನೆ, ರಾತ್ರಿ ಲಾಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ಪಾಲಾಶ ಕೊಂಬೆಯ ಮೆರವಣಿಗೆ, ಶ್ರೀ ಶನೀಶ್ವರ ದೇವರಿಗೆ ಕಲ್ಪೋಕ್ತ ಪೂಜೆ, ಶ್ರೀ ಸತ್ಯದೇವತೆಗೆ ತಂಬಿಲ ಸೇವೆ, ಶ್ರೀ ಶಾಸ್ತಾರ ದೇವರ ಸನ್ನಿಧಾನದಲ್ಲಿ ರಂಗಪೂಜೆ, ಮಂತ್ರಾಕ್ಷತೆ, ಶ್ರೀ ಸತ್ಯದೇವತೆ ನೇಮೋತ್ಸವ ನಡೆಯಲಿದೆ.

ಜ.4ರಂದು ಬೆಳಿಗ್ಗೆ ಮಾಲಾಧಾರಿಗಳಿಂದ ಅಗ್ನಿಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.

Related posts

ಹತ್ಯಡ್ಕ : ಶ್ರೀ ವಿಠೋಬ ರಕುಮಾಯಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರಿಂದ ರೂ.5 ಲಕ್ಷ ದೇಣಿಗೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆ

Suddi Udaya

ಪುದುವೆಟ್ಟು : ಸ್ವರಾಜ್ ನೇಣುಬಿಗಿದು ಆತ್ಮಹತ್ಯೆ

Suddi Udaya

ಕಣಿಯೂರು ಗ್ರಾಮಪಂಚಾಯತ್ ಮಟ್ಟದ ಜನಸ್ಪಂದನ ಸಭೆ

Suddi Udaya

ಲಾಯಿಲ ಗ್ರಾ.ಪಂ. ಸದಸ್ಯ ಮಹೇಶ್ ಕುಲಾಲ್ ರವರ ಮನೆಗೆ ವಿ.ಪ. ಸದಸ್ಯ ಕಿಶೋರ್ ಕುಮಾರ್ ಭೇಟಿ

Suddi Udaya
error: Content is protected !!